ಕರ್ನಾಟಕ ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರಿಗಳ ನೇಮಕಾತಿಗಳ ಮರುಚಾಲಣೆ ಮತ್ತು ವಯೋಮಿತಿಯ ಸಡಿಲಿಕೆಗೆ ಸಂಬಂಧಪಟ್ಟಂತೆ ಬಹು ದೊಡ್ಡ ಆದೇಶವನ್ನು ಹೊರಡಿಸಿದೆ. ಹಾಗಾದರೆ ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿರುವವರಿಗೆ ರಾಜ್ಯ ಸರ್ಕಾರ ನೀಡಿರುವ ಗುಡ್ ನ್ಯೂಸ್ ಏನು ಎಂದು ತಿಳಿಯೋಣ.?
ರಾಜ್ಯ ಸರ್ಕಾರ ಈ ಹಿಂದೆ ತಡೆ ಹಿಡಿಯಲಾಗಿದ್ದ ಕೆಲವು ನೇಮಕಾತಿಗಳಿಗೆ ಸಂಬಂಧಪಟ್ಟಂತೆ ಈಗ ಮರುಚಾಲನೆಯನ್ನ ಕೊಟ್ಟಿದೆ. ಅಷ್ಟೇ ಮಾತ್ರವಲ್ಲದೆ ಸರ್ಕಾರಿ ನೌಕರಿಯ ನೇರ ನೇಮಕಾತಿಗೆ ಸಂಬಂಧಪಟ್ಟಂತೆ ವಯಸ್ಸಿನ ಮಿತಿಯನ್ನ ಎರಡು ವರ್ಷ ಸಡಿಲಿಕೆ ಮಾಡುವುದರ ಮೂಲಕ ರಾಜ್ಯ ಸರ್ಕಾರ ಈಗ ಬಹು ದೊಡ್ಡ ಆದೇಶವನ್ನ ಹೊರಡಿಸಿದೆ. ಸರ್ಕಾರಿ ನೌಕರಿಯ ನೇರ ನೇಮಕಾತಿಯ ಗರಿಷ್ಠ ವಯಸ್ಸಿನ ಮಿತಿಯನ್ನ ಈಗ ಎರಡು ವರ್ಷ ಸಡಿಲಿಕೆ ಮಾಡಲಾಗಿದೆ.
ಸ್ಥಗಿತ ಮಾಡಲಾಗಿದ್ದ ಹಲವು ನೇಮಕಾತಿ ಪ್ರಕ್ರಿಯೆಯನ್ನ ಮತ್ತೆ ಮರುಚಾಲನೆ ಮಾಡಲು ಈಗ ರಾಜ್ಯ ಸರ್ಕಾರ ಆದೇಶವನ್ನ ಹೊರಡಿಸಿದೆ. ಅದೇ ರೀತಿಯಲ್ಲಿ ಗ್ರೂಪ್ ಬಿ ಆಗಿರಬಹುದು, ಗ್ರೂಪ್ ಸಿ ಆಗಿರಬಹುದು ಅಥವಾ ನೇರ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಎರಡು ವರ್ಷ ಸಡಿಲಿಕೆ ಮಾಡಲಾಗಿದೆ. ಕೊರೋನ ಮತ್ತು ಇತರ ಕಾರಣಗಳಿಂದ ವಯೋಮಿತಿ ಮೀರುತ್ತಿದ್ದ ಅನೇಕ ಅಭ್ಯರ್ಥಿಗಳಿಗೆ ಈಗ ಮತ್ತೊಂದು ಅವಕಾಶವನ್ನ ಕಲ್ಪಿಸಿಕೊಡಲಾಗಿದೆ.