ನೀವು ಕೂಡ ರೈತರಾಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಕೃಷಿಭೂಮಿ ಇದ್ದರೆ ಇನ್ನು ಮುಂದೆ ನೀವು ರಾಜ್ಯ ಸರ್ಕಾರದಿಂದ ಈ ಸೇವೆಯನ್ನ ಉಚಿತವಾಗಿ ಪಡೆದುಕೊಳ್ಳಬಹುದು. ರೈತರಿಗೆ ಮತ್ತು ಕೃಷಿಭೂಮಿ ಇದ್ದವರಿಗೆ ರಾಜ್ಯ ಸರ್ಕಾರ ಈಗ ಹೊಸ ಸೇವೆಯನ್ನ ಆರಂಭಿಸಿದೆ. ಇನ್ನು ಮುಂದೆ ಕೃಷಿಭೂಮಿಯನ್ನು ಹೊಂದಿರುವ ರೈತರು ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಡುವ ಅಗತ್ಯವಿಲ್ಲ. ಹಾಗಾದರೆ ಕರ್ನಾಟಕ ರಾಜ್ಯ ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಹೊಸ ಸೇವೆ ಯಾವುದು.? ತಿಳಿಯೋಣ.
ಕೃಷಿ ಭೂಮಿಯನ್ನು ಹೊಂದಿರುವ ರೈತರು ಇನ್ನು ಮುಂದೆ ತಮ್ಮ ಮೊಬೈಲ್ ಮೂಲಕವೇ ಪೋಡಿ ನಕ್ಷೆ ಮತ್ತು ಕಂದಾಯ ನಕ್ಷೆಯನ್ನ ಪಡೆದುಕೊಳ್ಳಬಹುದು. ರೈತರಿಗೆ ಪೋಡಿ ನಕ್ಷೆ ಮತ್ತು ಕಂದಾಯ ನಕ್ಷೆ ಬಹಳ ವೇಗವಾಗಿ ಮತ್ತು ಬಹಳ ಸರಳವಾಗಿ ಸಿಗಬೇಕು ಅನ್ನುವ ಕಾರಣಕ್ಕೆ ಈಗ ಕರ್ನಾಟಕ ರಾಜ್ಯ ಸರ್ಕಾರ ಹೊಸ ಸೇವೆಯನ್ನ ಬಿಡುಗಡೆ ಮಾಡಿದೆ.
ಮೊದಲನೆದಾಗಿ ಪೋಡಿ ನಕ್ಷೆಯನ್ನ ಪಡೆದುಕೊಳ್ಳುವ ರೈತರು ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ https://www.bhoomojini.karnataka.gov.in/ ವೆಬ್ಸೈಟ್ಗೆ ಭೇಟಿ ನೀಡಿ ಕೆಲವು ಮಾಹಿತಿಗಳನ್ನ ಕೊಟ್ಟು ಪೋಡಿ ನಕ್ಷೆಯನ್ನ ಪಡೆದುಕೊಳ್ಳಬಹುದು. ಈ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಪೋಡಿ ನಕ್ಷೆಯನ್ನ ಸುಲಭವಾಗಿ ಪಡೆದುಕೊಳ್ಳಬಹುದು. ಈ ವೆಬ್ಸೈಟ್ಗೆ ಭೇಟಿಕೊಟ್ಟು ನೀವು ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಹೆಸರನ್ನ ನಮೂದಿಸುವುದರ ಮೂಲಕ ನೀವು ಪೋಡಿ ನಕ್ಷೆಯನ್ನ ಸುಲಭವಾಗಿ ಪಡೆದುಕೊಳ್ಳಬಹುದು.
ಅದೇ ರೀತಿಯಲ್ಲಿ ಕಂದಾಯ ನಕ್ಷೆಯನ್ನು ಪಡೆದುಕೊಳ್ಳುವ ರೈತರು https://www.landrecords.karnataka.gov.in ವೆಬ್ಸೈಟ್ ಗೆ ಭೇಟಿಕೊಟ್ಟು ಸುಲಭವಾಗಿ ಕಂದಾಯ ನಕ್ಷೆಯನ್ನ ಪಡೆದುಕೊಳ್ಳಬಹುದು. ಕಂದಾಯ ಇಲಾಖೆಯ ಈ ವೆಬ್ಸೈಟ್ಗೆ ಭೇಟಿಕೊಟ್ಟು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನ ಕೊಡುವುದರ ಮೂಲಕ ನೀವು ಕಂದಾಯ ನಕ್ಷೆಯನ್ನ ಪಡೆದುಕೊಳ್ಳಬಹುದು.
ಇನ್ನು ಮುಂದೆ ಕಂದಾಯ ನಕ್ಷೆ ಮತ್ತು ಪೋಡಿ ನಕ್ಷೆಯನ್ನು ಪಡೆದುಕೊಳ್ಳಲು ಯಾವುದೇ ಕಚೇರಿಗೆ ಭೇಟಿ ಕೊಡುವ ಅಗತ್ಯವಿಲ್ಲ. ಕರ್ನಾಟಕ ರಾಜ್ಯ ಸರ್ಕಾರದ ಈ ಎರಡು ವೆಬ್ಸೈಟ್ಗೆ ಭೇಟಿ ಕೊಡುವುದರ ಮೂಲಕ ಸುಲಭವಾಗಿ ಪೋಡಿ ನಕ್ಷೆ ಮತ್ತು ಕಂದಾಯ ನಕ್ಷೆಯನ್ನ ರೈತರು ಪಡೆದುಕೊಳ್ಳಬಹುದು.

ಸ್ವಂತ ಕೃಷಿಭೂಮಿ ಇದ್ದವರಿಗೆ ದೀಪಾವಳಿ ಘೋಷಣೆ | ಹೊಸ 2 ಸೇವೆ – ಸಂಪೂರ್ಣ ಮಾಹಿತಿ ಇಲ್ಲಿದೆ
WhatsApp Group
Join Now