ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗುತ್ತಿದ್ದು ಬಂಗಾರ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗುತ್ತಿದ್ದು, ಏಪ್ರಿಲ್ 8ರಂದು ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ.
ಏಪ್ರಿಲ್ 08ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ ಚಿನ್ನದ ಬೆಲೆಯು ಏಪ್ರಿಲ್ 8ರಂದು 1 ಗ್ರಾಂಗೆ 14,984 ರೂ. ಆಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆಯು 1,49,840 ರೂ. ಆಗಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 82 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 820 ರೂಪಾಯಿ ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 13,735 ರೂ. ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,37,350 ರೂ. ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 75 ರೂಪಾಯಿ ಹಾಗೂ 10 ಗ್ರಾಂನ ಮೇಲೆ 750 ರೂಪಾಯಿ ಕಡಿಮೆಯಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 22 ಹಾಗೂ 22 ಕ್ಯಾರೆಟ್‌ನಂತೆಯೇ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 11,238 ರೂ. ಹಾಗೂ 10 ಗ್ರಾಂಗೆ 1,12,380 ರೂ. ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂ ಚಿನ್ನದ ಮೇಲೆ 61 ರೂಪಾಯಿ ಹಾಗೂ 10 ಗ್ರಾಂನ ಮೇಲೆ 610 ರೂಪಾಯಿ ಕಡಿಮೆಯಾಗಿದೆ.
ಬೆಳ್ಳಿ ಬೆಲೆ ಹೇಗಿದೆ.?
ಇನ್ನು ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲೂ ಹೆಚ್ಚಳವಾಗಿಲ್ಲ. ಬೆಳ್ಳಿ ಬೆಲೆಯು ಕಳೆದ ಮೂರು ದಿನಗಳಿಂದಲೂ ಯಥಾಸ್ಥಿತಿ ಇದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 250 ರೂಪಾಯಿ ಹಾಗೂ ಒಂದು ಕೆ.ಜಿ ಬೆಳ್ಳಿ ಬೆಲೆ 2.50 ಲಕ್ಷ ರೂ. ಆಗಿದೆ. ಈ ಮೂಲಕ ಚಿನ್ನ ಮತ್ತು ಬೆಳ್ಳಿ ಪ್ರಿಯರಲ್ಲಿ ಸಂತೋಷವುಂಟಾಗಿದೆ. ನಿರಂತರವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಇಳಿಕೆಯಾಗುತ್ತಿರುವುದು ಹಾಗೂ ಅಕ್ಷಯ ತೃತೀಯ ಸಮೀಪಿಸುತ್ತಿರುವುದು ಬಂಗಾರ ಪ್ರಿಯರಿಗೆ ಖುಷಿ ನೀಡಿದೆ.
ಯುದ್ಧದ ನಡುವೆಯೂ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಅಮೆರಿಕ, ಇಸ್ರೇಲ್ Vs ಇರಾನ್ ನಡುವಿನ ಯುದ್ಧವು ಐದನೇ ವಾರಕ್ಕೆ ಕಾಲಿರಿಸಿದೆ. ಇಷ್ಟು ದಿನಗಳ ಕಾಲ ಯುದ್ಧ ಮುಂದುವರಿದಿರುವುದು ಹಲವು ವಿಷಯಗಳ ಮೇಲೆ ಪರಿಣಾಮ ಬೀರಿದೆ. ಆದರೆ ಯುದ್ಧ ಪ್ರಾರಂಭವಾದ ಮೇಲೆ ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಳವಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಪ್ರಾರಂಭದ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಳವಾದರೂ, ಇದೀಗ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗುತ್ತಿದೆ.
Gold Rate : ಚಿನ್ನ – ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್.!
WhatsApp Group
Join Now