ಭಾರತೀಯ ರಿಸರ್ವ್ ಬ್ಯಾಂಕ್ ಈಗ ಯಾವುದೇ ಬ್ಯಾಂಕಿನಲ್ಲಿ ಚಿನ್ನವನ್ನ ಅಡವಿಟ್ಟು ಸಾಲವನ್ನು ಪಡೆದುಕೊಳ್ಳುವವರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಚಿನ್ನಗಳ ಮೇಲಿನ ಸಾಲಕ್ಕೆ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಇನ್ನು ಮುಂದೆ ಯಾರು ಬ್ಯಾಂಕಿನಲ್ಲಿ ಚಿನ್ನವನ್ನ ಅಡವಿಟ್ಟು ಸಾಲವನ್ನು ಪಡೆದುಕೊಳ್ಳುತ್ತಾರೋ ಅವರೆಲ್ಲರಿಗೂ ಈ ನಿಯಮ ಅನ್ವಯವಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಬ್ಯಾಂಕಿನಲ್ಲಿ ಚಿನ್ನವನ್ನ ಅಡವಿಟ್ಟು ಗರಿಷ್ಠ ಮೊತ್ತದ ಸಾಲವನ್ನ ಪಡೆದುಕೊಳ್ಳಬಹುದು. ಈ ಹಿಂದೆ ಚಿನ್ನವನ್ನ ಅಡವಿಟ್ಟ ಸಮಯದಲ್ಲಿ ಗ್ರಾಹಕರು ಸುಮಾರು 75% ಸಾಲವನ್ನ ಪಡೆದುಕೊಳ್ಳಬಹುದಾಗಿತ್ತು. ಅಂದರೆ ಚಿನ್ನದ ವ್ಯಾಲ್ಯೂ ಮೇಲೆ 75% ಸಾಲವನ್ನ ಪಡೆದುಕೊಳ್ಳಬಹುದಾಗಿತ್ತು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಈ ನಿಯಮವನ್ನ ಬದಲಾಯಿಸಿದೆ.
ಇನ್ನು ಮುಂದೆ ಗ್ರಾಹಕರು ಶೇಕಡ 85% ವರೆಗೆ ಸಾಲವನ್ನ ಪಡೆದುಕೊಳ್ಳಬಹುದು. ಅಂದರೆ ಗ್ರಾಹಕರು ಚಿನ್ನವನ್ನ ಅಡವಿಟ್ಟಾಗ ಆ ಚಿನ್ನದ ವ್ಯಾಲ್ಯೂ ಮೇಲೆ ಶೇಕಡ 85ರಷ್ಟು ಸಾಲವನ್ನ ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನವನ್ನ ಅಡವಿಟ್ಟು ಸಾಲವನ್ನ ಪಡೆಯುವ ಗ್ರಾಹಕನಿಗೂ ಕೂಡ ಕೆಲವು ಹೊಸ ನಿಯಮವನ್ನ ಜಾರಿಗೆ ತಂದಿದೆ. ಇನ್ನು ಮುಂದೆ ಗ್ರಾಹಕ 22 ಕ್ಯಾರೆಟ್ ಚಿನ್ನವನ್ನ ಮಾತ್ರ ಬ್ಯಾಂಕಿನಲ್ಲಿ ಅಡವಿಡಬಹುದು. ಬ್ಯಾಂಕಿನ ಸಿಬ್ಬಂದಿಗಳು ಚಿನ್ನದ ಶುದ್ಧತೆಯನ್ನ ಅಳತೆ ಮಾಡಿ ಅವರಿಗೆ ಸಾಲವನ್ನು ಕೊಡುತ್ತಾರೆ.
24 ಕ್ಯಾರೆಟ್ ಅಥವಾ ಚಿನ್ನದ ಬಿಸ್ಕೆಟ್ಗಳನ್ನ ನೀವು ಬ್ಯಾಂಕಿನಲ್ಲಿ ಅಡವಿಡಲು ಸಾಧ್ಯವಿಲ್ಲ. 24 ಕ್ಯಾರೆಟ್ ಬದಲಾಗಿ ನೀವು ಆಭರಣ ಚಿನ್ನವನ್ನ ಮಾತ್ರ ಬ್ಯಾಂಕಿನಲ್ಲಿ ಅಡವಿಡಬಹುದು. ಅದೇ ರೀತಿಯಲ್ಲಿ ಬ್ಯಾಂಕಿನ ಸಿಬ್ಬಂದಿಗಳು ನಿಮಗೆ ಕಾಲಾವಕಾಶವನ್ನ ಕೊಡುತ್ತಾರೆ. ಆ ಕಾಲಾವಕಾಶದ ಒಳಗಾಗಿ ನೀವು ಸಾಲವನ್ನ ಮರುಪಾವತಿ ಮಾಡಬೇಕು. ಬ್ಯಾಂಕುಗಳು ನೀವು ಸಾಲವನ್ನು ತೀರಿಸದೇ ಇರುವ ಸಮಯದಲ್ಲಿ ಎರಡು ಅಥವಾ ಮೂರು ಬಾರಿ ನೋಟೀಸ್ ಕಳುಹಿಸುತ್ತದೆ. ನೋಟೀಸ್ ಗಳಿಗೆ ನೀವು ಸರಿಯಾಗಿ ಉತ್ತರವನ್ನು ಕೊಡದೆ ಇದ್ದರೆ ಬ್ಯಾಂಕುಗಳು ನೀವು ಇಟ್ಟ ಚಿನ್ನವನ್ನ ಹರಾಜು ಹಾಕುತ್ತದೆ.
ಸದ್ಯ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಚಿನ್ನದ ಮೇಲೆ ಪಡೆದುಕೊಳ್ಳುವ ಸಾಲದ ಮೊತ್ತವನ್ನ ಹೆಚ್ಚಳ ಮಾಡುವುದರ ಮೂಲಕ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಈ ಹಿಂದೆ ನೀವು ಸುಮಾರು ಒಂದು ಲಕ್ಷ ರೂಪಾಯ ಮೌಲ್ಯದ ಚಿನ್ನವನ್ನ ಅಡವಿಟ್ಟರೆ ಶೇಕಡ 75% ಅಂದರೆ 75 ಸಾವಿರ ರೂಪಾಯವರೆಗೆ ಸಾಲವನ್ನ ಪಡೆದುಕೊಳ್ಳಬಹುದಾಗಿತ್ತು. ಆದರೆ ಈಗ 85 ಸಾವಿರ ರೂಪಾಯವರೆಗೆ ಸಾಲವನ್ನ ಪಡೆದುಕೊಳ್ಳಬಹುದು.

ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟವರಿಗೆ ದೊಡ್ಡ ಸಿಹಿಸುದ್ದಿ | Gold Loan Updates
WhatsApp Group
Join Now