ಸಿದ್ದರಾಮಯ್ಯ ಪುಕ್ಕಲು ಸಿಎಂ ಅಂತಾ ಕೇರಳ ಸರ್ಕಾರಕ್ಕೂ ಗೊತ್ತು : ಪ್ರತಾಪ್‌ ಸಿಂಹ ವಾಗ್ದಾಳಿ

Spread the love

ಮುಖ್ಯಮಂತ್ರಿ ಸಿದ್ದರಾಮಯ್ಯ ಪುಕ್ಕಲು ಸಿಎಂ ಎಂಬುದು ಕೇರಳ ಸರ್ಕಾರಕ್ಕೂ ಅರ್ಥವಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ  ಲೇವಡಿ ಮಾಡಿದ್ದಾರೆ.

ಬೆಂಗಳೂರಿನ ಕೋಗಿಲೆ ಲೇಔಟ್‌ನಲ್ಲಿ ಅಕ್ರಮ ಮನೆಗಳ ತೆರವು ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕೇರಳದ ವಯನಾಡಿನಲ್ಲಿ ಆನೆಯೊಂದು ಓರ್ವನನ್ನು ತುಳಿದು ಸಾಯಿಸಿದಾಗ, ಕರ್ನಾಟಕ ಸರ್ಕಾರವು ಪ್ರಿಯಾಂಕ್‌ ಖರ್ಗೆ ಮಾತು ಕೇಳಿ ಆ ಕುಟುಂಬಕ್ಕೆ ಪರಿಹಾರ ಕೊಡುತ್ತದೆ.

ಹೀಗಾಗಿ ಸಿದ್ದರಾಮಯ್ಯ ನಮ್ಮ ಮಾತು ಕೇಳಿಯೇ ಕೇಳುತ್ತಾರೆ ಎಂದು ಕೇರಳ ಸರ್ಕಾರ ನಮ್ಮ ಮೇಲೆ ಪ್ರೆಶರ್‌ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೇರಳಿಗರಿರುವ ಬೆಂಗಳೂರಿನ ಕೋಗಿಲು ಬಡಾವಣೆ ನಿರಾಶ್ರಿತರಿಗೆ ಪರಿಹಾರ ನೀಡಲಿ ಎಂದು ಆಗ್ರಹಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಧ್ಯ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿರಾಶ್ರಿತರಿಗೆ ಬೆಂಬಲ ನೀಡಲಿದೆ ಎಂದರಿತು ಅದಕ್ಕಾಗಿ ಈ ವಿಚಾರದಲ್ಲಿ ಕೇರಳ ಸರ್ಕಾರ ಮಧ್ಯ ಪ್ರವೇಶಿಸಿದೆ ಎಂದು ಕಿಡಿಕಾರಿದರು.

ಕೇರಳದಲ್ಲಿ ಬ್ಯಾಕ್‌ ವಾಟರ್‌, ತೆಂಗಿನ ಮರ ಹಾಗೂ ರೆಸಾರ್ಟ್‌ಗಳನ್ನು ಬಿಟ್ಟರೆ ಅಲ್ಲಿ ಏನಿದೆ ಎಂದು ಪ್ರತಾಪ್‌ ಸಿಂಹ ಪ್ರಶ್ನಿಸಿದ್ದಾರೆ. ನಾವೇನಾದರೂ ಕೆರಳಕ್ಕೆ ಹೋದರೆ ದೇವಸ್ಥಾನಕ್ಕಷ್ಟೇ ಹೋಗಬೇಕು. ಕೇರಳದವರು ಗಲ್ಫ್‌ ದೇಶದಲ್ಲಿ ಹೋಗಿ ಕೂತಿದ್ದಾರೆ. ಅಲ್ಲಿ ಒಂದು ಕಾರ್ಖಾನೆ ಬರಲು ಬಿಡಲ್ಲ, ರಸ್ತೆ ಅಗಲ ಮಾಡಲು ಬಿಡಲ್ಲ. ಅವರ ನೆಲೆ ಇರುವುದು ಕೇರಳ ಆದರೆ ವಾಸ, ದುಡಿಯೋದು ಮೈಸೂರು ಅಥವಾ ಎಲ್ಲಾ ಕಡೆಗಳಲ್ಲಿಯೂ ಇದ್ದಾರೆ. ಅನಧಿಕೃತವಾಗಿ ಬಂದು ಸರ್ಕಾರಿ ಭೂಮಿಯಲ್ಲಿ ಶೆಡ್‌ ಕಟ್ಟಿಕೊಂಡು ಕೂರ್ತಾರೆ. ಅವರಿಗೆಲ್ಲ ಬಿಟ್ಟುಕೊಡಬೇಕು ಎನ್ನುವ ದರ್ದು ನಮಗೆ ಏನಿದೆ ಎಂದು ಸಿಡಿಮಿಡಿಗೊಂಡರು.

ಇವತ್ತು ಕೇರಳ ಸರ್ಕಾರ ಯಾಕೆ ಪ್ರೆಶರ್‌ ಹಾಕುತ್ತೆ ಎಂದರೆ ಆನೆ ತುಳಿತಕ್ಕೆ ಸತ್ತವನಿಗೆ ಪರಿಹಾರ ಕೊಡುವವರು ನಾವು ಪ್ರೆಶರ್‌ ಹಾಕಿದ್ರೆ ನಮ್ಮ ಜನಕ್ಕೆ ಅಲ್ಲಿ ನೆಲೆಯೂ ಕೊಡುತ್ತಾರೆ, ಸರ್ಕಾರಿ ಭೂಮಿ ಇದ್ದರೂ ಅಲ್ಲಿಯೇ ವಾಸ ಮಾಡಲು ಅವಕಾಶ ಮಾಡಿಕೊಡುತ್ತಾರೆ ಎಂಬುದು ಅವರಿಗೆ ಅರ್ಥವಾಗಿದೆ ಎಂದು ಪ್ರತಾಪ್‌ ಸಿಂಹ ಗರಂ ಆದರು.

WhatsApp Group Join Now

Spread the love

Leave a Reply