ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋಣ : ಮಾಜಿ ಸಚಿವ ಕೆ ಎನ್ ರಾಜಣ್ಣ

Spread the love

ವಿಧಾನಸಭೆ ವಿಸರ್ಜನೆ ಮಾಡಿ ಎಲ್ಲಾ ಚುನಾವಣೆಗೆ ಹೋಗಿ ಬಿಡೋಣ. ಮುಂದೆ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಒಟ್ಟಿಗೆ ಕೆಲಸ ಮಾಡಿ, ಮೆಜಾರಿಟಿ ತಗೊಂಡು ಬರೋಣ. ಆಗ ಅವರೇ 5 ವರ್ಷ ಸಿಎಂ ಆಗಲಿ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರನ್ನು ಎಲೆಕ್ಟ್ ಮಾಡಿರುವುದು ಸಿಎಲ್‌ಪಿ ಅಲ್ವಾ..? ಈಗ ಸಿಎಲ್‌ಪಿಯಲ್ಲಿ ತೀರ್ಮಾನ ಆಗ್ಬೇಕು. ಸಿಎಲ್‌ಪಿಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಅಂತಾ ಯಾರಾದರೂ ಕೇಳಿದ್ದಾರ. ಯಾರಾದ್ರೂ ಕೇಳಿದ್ದಾರ ಹೇಳಿ ಎಂದು ಪ್ರಶ್ನಿಸಿದರು.

ಸುಮ್ನೆ ಇವೆಲ್ಲಾ 30-30 ತಿಂಗಳಗಳು ಆಗಿತ್ತು ಅಂತಾ ಹೇಳ್ಕೊಳ್ತಾರೆ. ಅದನ್ನು ಹೇಳೋದ್ ಯಾರು..? ನಾಯಕತ್ವದ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ಹೇಳಿದ್ದಾರೆ. ಅದಕ್ಕೋಸ್ಕರ ನಾನು ಆ ಬಗ್ಗೆ ಮಾತನಾಡಲ್ಲ‌. ನನ್ನ ವೈಯಕ್ತಿಕ ಆಶಯ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ಬೇಕು ಅಂತಾ ಆಸೆ. ಇನ್ನೊಂದೆರೆಡು ದಿನಗಳಲ್ಲಿ ಎಐಸಿಸಿಯವರೇ ಕ್ಲಾರಿಫೈ ಮಾಡ್ತಾರೆ ಎಂದು ಹೇಳಿದರು.

ಕಳೆದ ಚುನಾವಣೆಯನ್ನು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗೆದ್ದಿದ್ದು, ಡಿಕೆಶಿ ಅಧ್ಯಕ್ಷರಾಗಿರಬಹುದು. ಹಾಗೆ ನೋಡಿದರೆ ಪರಮೇಶ್ವರ್ ಕೂಡ 2013ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ್ರು ಆದ್ರೆ ಸೋತರು ಎಂದ ರಾಜಣ್ಣ, ಇವರು ಕೂಲಿ ಕೇಳೋರು‌ ಆದ್ರೆ ಪರಮೇಶ್ವರ್‌ದೂ ಕೂಲಿ ಇದ್ಯಲ್ಲ. ಅವರದ್ದು ಹಳೇ ಕೂಲಿ ಮೊದಲು ಚುಪ್ತಾ ಆಗಲಿ‌. ಆಮೇಲೆ ಇದನ್ನ ಮಾಡೋಣ. ನಾನು ಸಿದ್ದರಾಮಯ್ಯ ಸಿಎಂ ಆಗ್ಬೇಕು ಅನ್ನೋದು ಅಭಿಪ್ರಾಯ. ಅನಿವಾರ್ಯತೆ ಬಂದ್ರೆ ಪರಮೇಶ್ವರ್ ಸಿಎಂ ಆಗ್ಲಿ ಎಂದು ಅವರ ಅಭಿಪ್ರಾಯ ತಿಳಿಸಿದರು.

WhatsApp Group Join Now

Spread the love

Leave a Reply