ಕಾನೂನು ಎಷ್ಟೇ ಬಿಗಿಯಿದೆ ಎಂದು ಹೇಳಿಕೊಂಡ್ರೂ ಸಮಾಜದಲ್ಲಿ ಕಾಮುಕರ ಅಟ್ಟಹಾಸ ಮಿತಿಮೀರುತ್ತಿದೆ. ಎಳೆ ಮಕ್ಕಳು, ವೃದ್ಧರು ಎನ್ನದೇ ವಿಕೃತ ಮೆರೆಯುವ ನರರೂಪಿ ರಾಕ್ಷಸರು ಈಗ ಅಸಹಾಯಕರನ್ನೂ ಬಿಡುತ್ತಿಲ್ಲ. ಇದಕ್ಕೆ ಇಂಬು ಕೊಡುವಂತೆ ಕಲಬುರಗಿಯಲ್ಲಿ ಅತೀ ದಾರುಣ ಘಟನೆಯೊಂದು ಸಂಭವಿಸಿದ್ದು, ಮಠದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆಘಾತಕಾರಿ ಸುದ್ದಿ ವರದಿಯಾಗಿದೆ.
ಮಠದಲ್ಲಿದ್ದ ಮಾನಸಿಕ ಅಸ್ವಸ್ಥೆ ಮೇಲೆ ಕಣ್ಣುಹಾಕಿದ್ದ ಕಾಮುಕ
ಯಾದಗಿರಿ ಜಿಲ್ಲೆಯ ಮೂಲದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಆಂದೋಲಾ ಗ್ರಾಮದ ಮಠದಲ್ಲಿ ವಾಸವಿದ್ದರು. ಮಠದಲ್ಲಿಯೇ ಇದ್ದು ಅಲ್ಲೇ ಊಟ-ತಿಂಡಿ ತಿಂದು ಜೀವನ ಸಾಗಿಸಿದ್ದ ಸಂತ್ರಸ್ತೆ. ಈ ಮಹಿಳೆಯ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ಅದೇ ಗ್ರಾಮದ ಮಸ್ತಾಕ್ ಹುಸೇನ್ ಎಂಬಾತ, ಆಕೆಯನ್ನು ಪುಸಲಾಯಿಸಿ ಹೊಲಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ಹಿಂದೂ ಯುವಕರ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾಮುಕ
ಮುಸ್ಲಿಂ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಪುಸಲಾಯಿಸಿ ಹೊಲಕ್ಕೆ ಕರೆದೊಯ್ದಿರುವ ಮಾಹಿತಿ ಗ್ರಾಮದ ಹಿಂದೂ ಯುವಕರಿಗೆ ಲಭಿಸಿದೆ. ಕೂಡಲೇ ಎಚ್ಚೆತ್ತ ಯುವಕರು ಹೊಲಕ್ಕೆ ಬಂದಿದ್ದಾರೆ. ಅಲ್ಲಿ ಕಾಮುಕ ಮಸ್ತಾಕ್ನ ಕೃತ್ಯವನ್ನು ಕಂಡು ಶಾಕ್ ಆಗಿದ್ದಾರೆ. ಇಡೀ ಘಟನೆಯನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ.
ಯುವಕರನ್ನ ಕಂಡು ಬೆದರಿದ ಕಾಮುಕ ಹೈಡ್ರಾಮಾ
ಯುವಕರು ವಿಡಿಯೋ ಮಾಡುತ್ತಿರುವುದನ್ನು ಕಂಡು ಬೆದರಿದ ಕಾಮುಕ ಮಸ್ತಾಕ್ ಹುಸೇನ್, ತನ್ನ ತಪ್ಪನ್ನು ಒಪ್ಪಿಕೊಂಡು ಯುವಕರ ಕಾಲಿಗೆ ಬಿದ್ದಿದ್ದಾನೆ. ‘ತಪ್ಪಾಗಿದೆ, ಇದೊಂದು ಬಾರಿ ನನ್ನನ್ನು ಬಿಟ್ಟುಬಿಡಿ’ ಎಂದು ಗೋಳಾಡಿದ್ದಾನೆ. ಆದರೆ, ಈ ವಿಕೃತ ಕೃತ್ಯದ ವಿಡಿಯೋವನ್ನು ಹಿಂದೂ ಯುವಕ ಹುಲ್ಲೇಶ್ ಕಾಸರಭೋಸಗಾ ಎಂಬುವವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮಸ್ತಾಕ್ ಹುಸೇನ್ ವಿರುದ್ಧ ಎಫ್ಐಆರ್
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜೇವರ್ಗಿ ಸಿಡಿಪಿಓ (CDPO) ಅವರು ನೀಡಿದ ದೂರಿನ ಆಧಾರದ ಮೇಲೆ, ಆರೋಪಿ ಮಸ್ತಾಕ್ ಹುಸೇನ್ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಆದರೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾಮುಕ ಮಸ್ತಾಕ್ ಗ್ರಾಮದಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಮಠದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನ ಹೊಲಕ್ಕೆ ಕರೆದೊಯ್ದು ಬಲತ್ಕಾರ, ಕಾಮುಕನ ವಿರುದ್ದ FIR
WhatsApp Group
Join Now