ನಗರದ ರಸ್ತೆಗಳಲ್ಲಿ ಓಡಾಡುವ ಆಟೋ ಚಾಲಕರೇ ಎಚ್ಚರವಹಿಸಿ. ಅದರಲ್ಲೂ ನಿಮ್ಮ ಆಟೋಗೆ ಜಾಹಿರಾತು ಪೋಸ್ಟರ್ ಅಂಟಿಸಿದ್ರೆ ಹುಷಾರಾಗಿರಿ. ಬರೋಬ್ಬರಿ 5,000/- ರೂಪಾಯಿ ಫೈನ್ ಆಗ್ತಿದೆ ಸಾರಿಗೆ ಇಲಾಖೆ. ಅರಿವಿಲ್ಲದೇ ಜಾಹಿರಾತು ಪೋಸ್ಟರ್ ಅಂಟಿಸಿಕೊಂಡಿದ್ದ ಆಟೋ ಚಾಲಕರಿಗೆ ಪ್ರಾದೇಶಿಕ ಸಾರಿಕ ಇಲಾಖೆ ಆರ್ಟಿಓ ಅಧಿಕಾರಿಗಳು ಬಿಸಿಯನ್ನ ಮುಟ್ಟಿಸಿದ್ದಾರೆ. ಇನ್ನು ನಿಯಮ ಉಲ್ಲಂಘನೆಗಾಗಿ ಬರೊಬ್ಬರಿ 5,000/- ರೂಪಾಯಿ ದಂಡ ವಿಧಿಸಿರುವುದು ಆಟೋ ಚಾಲಕರಿಗೆ ದೊಡ್ಡ ಆಘಾತವನ್ನ ಉಂಟು ಮಾಡಿದೆ.
ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಯಾವುದೇ ವಾಹನದಲ್ಲಿ ಜಾಹಿರಾತು ಪ್ರದರ್ಶನ ಮಾಡಬೇಕಿದ್ರೆ ಅದಕ್ಕೆ ವಾರ್ಷಿಕ ಅನುಮತಿಯನ್ನ ಕಡ್ಡಾಯವಾಗಿ ಪಡೆದಿರಬೇಕು. ಈ ಅನುಮತಿಗಾಗಿ ವಾರ್ಷಿಕವಾಗಿ 5,000/- ಶುಲ್ಕವನ್ನ ಪಾವತಿ ಮಾಡಬೇಕು. ಈ ನಿಯಮದ ಬಗ್ಗೆ ಅನೇಕ ಆಟೋ ಚಾಲಕರಿಗೆ ಅರಿವಿಲ್ಲ. ಇನ್ನು ಕೆಲವರು 100 ಅಥವಾ ಸಾವಿರ ರೂಪಾಯಿಗಳಿಗಾಗಿ ಆಟೋಗಳ ಮೇಲೆ ಜಾಹಿರಾತು ಪೋಸ್ಟರ್ಗಳನ್ನ ಅಂಟಿಸಿಕೊಂಡಿದ್ದ ಅನೇಕ ಚಾಲಕರು ಇದೀಗ ದಂಡದ ಸುಳಿಗೆ ಸುಲುಕಿಕೊಂಡಿದ್ದಾರೆ.
ಇತ್ತೀಚಿಗೆ ಬೈಕ್, ಟ್ಯಾಕ್ಸಿ ನಿಷೇಧದ ನಂತರ ಸಾರಿಗೆ ಸಚಿವರ ಸೂಚನೆಯ ಮೇರೆಗೆ ಆರ್ಟಿಓ ಅಧಿಕಾರಿಗಳು ಆಟೋಗಳ ಎಫ್ಸಿ ಪರ್ಮಿಟ್ ಮತ್ತೆ ಮೀಟರ್ ಅಳವಡಿಕೆ ಕುರಿತು ತಪಾಸಣೆಯನ್ನ ನಡೆಸುತ್ತಿದ್ದರು. ಈ ವೇಳೆ ಅನುಮತಿ ಇಲ್ಲದೇ ಜಾಹಿರಾತು ಹಾಕಿಸಿಕೊಂಡಿದ್ದ ಆಟೋಗಳಿಗೆ ಬಿಸಿಯನ್ನ ಮುಟ್ಟಿಸಿದ್ದಾರೆ. ಹಾಗಾಗಿ ಆಟೋ ಚಾಲಕರು ಈ ಬಗ್ಗೆ ಎಚ್ಚರವನ್ನ ಕೂಡ ವಹಿಸಬೇಕು.