ನಟಿ ರಚಿತಾ ರಾಮ್ ಹಾಗೂ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ತಂಡದ ನಡುವೆ ಕಿರಿಕ್ ಆಗಿದೆ. ಈ ಬಗ್ಗೆ ನಿರ್ದೇಶಕ ನಾಗಶೇಖರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಆದರೆ ರಚಿತಾ ರಾಮ್ ಅವರನ್ನು ವಾಣಿಜ್ಯ ಮಂಡಳಿಗೆ ಕರೆಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಂಡಳಿ ಅಧ್ಯಕ್ಷ ನರಸಿಂಹಲು ಮಾತನಾಡಿದ್ದಾರೆ. ‘ಎಷ್ಟು ಬಾರಿ ಸಿನಿಮಾ ಬಿಡುಗಡೆ ಆದರೂ ಕಲಾವಿದರು ಪ್ರಚಾರಕ್ಕೆ ಬಂದು ಬೆಂಬಲ ನೀಡಲೇಬೇಕು. ಯಾಕೆಂದರೆ ಸಿನಿಮಾ ರಂಗದಿಂದಲೇ ನೀವು ಹಣ, ಹೆಸರು ಗಳಿಸಿದ್ದೀರಿ. ವಾಣಿಜ್ಯ ಮಂಡಳಿಗಾದರೂ ಸ್ಪಂದಿಸಬೇಕು. ಯಾರೋ ಪಿಎಗಳಿಂದ ಮಾತನಾಡಿಸೋದಲ್ಲ’ ಎಂದು ನರಸಿಂಹಲು ಅವರು ಹೇಳಿದ್ದಾರೆ.
ನಟಿ ರಚಿತಾ ರಾಮ್ ವಿರುದ್ಧ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ತಂಡ ಫಿಲಂ ಚೇಂಬರ್ಗೆ ದೂರು ನೀಡಿತ್ತು. ಸಿನಿಮಾದ ಪ್ರಚಾರಕ್ಕೆ ಅವರು ಬರುತ್ತಿಲ್ಲ ಎಂದು ಆರೋಪಿಸಲಾಗಿದೆ. ರಚಿತಾ ರಾಮ್ ವಿರುದ್ಧ ದೂರು ದಾಖಲಾಗಿರುವ ಬೆನ್ನಲ್ಲೆ, ಹಳೆಯ ಮತ್ತೊಂದು ಪ್ರಕರಣ ಹೊರಬಂದಿದೆ. ರಚಿತಾ ರಾಮ್ ಅವರು ನಿರ್ಮಾಪಕರೊಬ್ಬರಿಂದ ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಹಣ ಪಡೆದು, ಹಣವನ್ನು ಮರಳಿಸಿಲ್ಲ ಎನ್ನಲಾಗುತ್ತಿದೆ

ಯಾರೋ ಪಿಎಗಳಿಂದ ಮಾತನಾಡಿಸೋದಲ್ಲ ಎಂದು ನಟಿ ರಚಿತಾ ರಾಮ್ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಗರಂ.!
WhatsApp Group
Join Now