ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ 68 ವರ್ಷದ ವ್ಯಕ್ತಿಯೋರ್ವ ಇಳಿ ವಯಸ್ಸಿನಲ್ಲೂ ಎರಡನೇ ಮದುವೆಯಾಗಿದ್ದು, ಇದೀಗ ಮಕ್ಕಳು ಆಸ್ತಿ ಬರೆದುಕೊಡುವಂತೆ ತಂದೆಯ ಮೇಲೆ ಹಲ್ಲೆ ನಡೆಸಿ ಬಳಿಕ ಅವರೇ ಬಂದು ಠಾಣೆಯಲ್ಲಿ ದೂರು ನೀಡಿರುವ ಘಟನೆ ನಡೆಸಿದ ಘಟನೆ ನಡೆದಿದೆ.
ಎರಡು ವರ್ಷದ ಹಿಂದೆ ರಾಜಣ್ಣ ಮೊದಲ ಪತ್ನಿ ಮೃತಪಟ್ಟಿದ್ದರು, ಹೀಗಾಗಿ ತನ್ನ ಪತಿಯಿಂದ ದೂರವಾಗಿದ್ದ ಗೀತಾ (58) ಎಂಬುವವರನ್ನು ಡಿ.17 ರಂದು ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆ ಬೆಟ್ಟದಲ್ಲಿ 68 ವರ್ಷದ ರಾಜಣ್ಣ ಮದುವೆಯಾಗಿದ್ದರು.
ಆದರೆ ಇವರಿಬ್ಬರ ಮದುವೆಗೆ ಮಕ್ಕಳು ಇಷ್ಟವಿರಲಿಲ್ಲ, ಆದರೂ ಕೂಡ ಇಬ್ಬರು ಮದುವೆಯಾಗಿ ಮನೆಗೆ ಬಂದಿದ್ದರು. ಸಾಕಷ್ಟು ವಿರೋಧದ ನಡುವೆಯೂ ರಾಜಣ್ಣ ದಂಪತಿ ಮದುವೆಯಾದ್ದರಿಂದ ಮಕ್ಕಳು ಆಸ್ತಿ ನೀಡುವಂತೆ ಕೇಳಿದ್ದಾರೆ.
ಅಲ್ಲದೇ ಆಸ್ತಿ ಬರೆದುಕೊಡುವಂತೆ ಹೇಳಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಅವರೇ ಪೊಲೀಸ್ ಠಾಣೆಗೆ ಬಂದು ತಂದೆಯ ವಿರುದ್ಧ ದೂರು ನೀಡಿದ್ದಾರೆ. ಇತ್ತ ರಾಜಣ್ಣ ಕೂಡ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಮಕ್ಕಳ ವಿರುದ್ಧ ದೂರು ದಾಖಲಿಸಿದ್ದಾರೆ.
ಇಬ್ಬರು ಹೆಣ್ಣುಮಕ್ಕಳು, ಓರ್ವ ಪುತ್ರನಿಗೆ ಮದುವೆ ಮಾಡಿ ಆಸ್ತಿ ನೀಡಿದ್ದೇನೆ, ನನ್ನ ಬಳಿ ಒಂದು ಮನೆಯಿದ್ದು ಅದನ್ನು ತಮಗೆ ನೀಡುವಂತೆ ನನ್ನ ಮಕ್ಕಳು ಹಲ್ಲೆ ನಡೆಸಿದ್ದಾರೆ ಎಂದು ರಾಜಣ್ಣ ಆರೋಪಿಸಿದ್ದಾರೆ.
ನನ್ನ ಕಷ್ಟ-ಸುಖಕ್ಕೆ ನೆರವಾಗಲಿ ಎಂದು ಎರಡನೇ ವಿವಾಹ ಆಗಿದ್ದೇನೆ, ನಮಗೆ ಸೂಕ್ತ ರಕ್ಷಣೆ ನೀಡುವಂತೆ ರಾಜಣ್ಣ-ಗೀತಾ ದಂಪತಿ ಮನವಿ ಮನವಿ ಮಾಡಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಆರೋಪಿಸಿದ್ದಾರೆ.
ಇಳಿ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ತಂದೆ – ಆಸ್ತಿಗಾಗಿ ಮಕ್ಕಳಿಂದ ಹಲ್ಲೆ.!
WhatsApp Group
Join Now