ಸೆಕ್ಸ್ ಗೆ ಅಡ್ಡಿಯಾಗುತ್ತಿದ್ದಾನೆ ಎನ್ನುವ ಕಾರಣಕ್ಕಾಗಿ ತನ್ನ 1 ವರ್ಷದ ಮಗನನ್ನೇ ಕೊಂದು ಹಾಕಿರುವಂತ ಘಟನೆ ತಿರುವನಂತಪುರಂನ ನೆಯ್ಯಟ್ಟಿಂಕರದಲ್ಲಿ ನಡೆದಿದೆ.
ಕಳೆದ ಜನವರಿ.16ರಂದು ಐಕಾರವಿಳಕ್ಕಂನ ಕವಲಕುಲಂನಲ್ಲಿ ಬಾಡಿಗೆಗಿದ್ದ ಶಿಜಿಲ್ ಮತ್ತು ಕೃಷ್ಣಪ್ರಿಯಾ ದಂಪತಿಗಳು ತಮ್ಮ 1 ವರ್ಷದ ಮಗ ಇಹಾನ್(ಅಪ್ಪು) ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.
ಆತ ಬಿಸ್ಕೆಟ್, ದ್ರಾಕ್ಷಿ ತಿಂದಿದ್ದರಿಂದ ಕುಸಿದು ಬಿದ್ದು ಅಸ್ಪಸ್ಥನಾಗಿದ್ದಾನೆ ಎಂಬುದಾಗಿ ಹೇಳಿದ್ದರು.
ಪುಟಾಣಿ ಮಗುವನ್ನು ಆಸ್ಪತ್ರೆಯ ವೈದ್ಯರು ಐಸಿಯುನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರು. ಈ ವೇಳೆಯಲ್ಲಿ ಪುಟ್ಟ ಮಗುವಿನ ಹೊಟ್ಟೆಯ ಭಾಗದಲ್ಲಿ ಗಾಯವಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲದೇ ಮಗುವಿನ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿತ್ತು. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಾಥಮಿಕ ವಿಚಾರಣೆ ಬಳಿಕ ದಂಪತಿಗಳನ್ನು ಮನೆಗೆ ಪೊಲೀಸರು ಕಳುಹಿಸಿದ್ದರು. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ವಿಚಾರಣೆಗೆ ಪತ್ನಿ ಬಂದಾಗ ಆಕೆ ಹೇಳಿಕೆಯು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ಅಲ್ಲದೇ 2ನೇ ಬಾರಿ ವಿಚಾರಣೆಗೆ ಹಾಜರಾದಂತ ಸಂದರ್ಭದಲ್ಲಿ ಮಗು ಅಸ್ವಸ್ಥಗೊಂಡಿದ್ದು, ಸಾವನ್ನಪ್ಪಿದ್ದರ ಹಿಂದಿನ ರಾತ್ರಿ ನಡೆದ ಘಟನೆಯನ್ನು ಪೊಲೀಸರ ಮುಂದೆ ಪತ್ನಿ ಬಾಯಿ ಬಿಟ್ಟಿದ್ದಳು.
ತನ್ನ ಗಂಡ ಆ ರಾತ್ರಿ ಸೆಕ್ಸ್ ಮಾಡುತ್ತಿದ್ದಾಗ ಜೋರಾಗಿ ಮಗು ಅಳುತ್ತಿತ್ತು. ಸೆಕ್ಸ್ ಗೆ ಅಡ್ಡಿಯಾಗುತ್ತಿದೆ ಎಂಬುದಾಗಿ ಮಗುವಿನ ಹೊಟ್ಟೆ, ಎದೆ ಭಾಗಕ್ಕೆ ಗುದ್ದಿದ್ದಾನೆ. ಈ ಹಿಂದೆಯೂ ಮಗುವನ್ನು ಬೆಡ್ ಶೀಟ್ ನಿಂದ ಮುಖಕ್ಕೆ ಮುಚ್ಚಿದ್ದನು ಎಂಬುದಾಗಿ ಹೇಳಿದ್ದಳು.
ಈ ಎಲ್ಲಾ ಮಾಹಿತಿ ಆಧರಿಸಿ ಕೃಷ್ಣಪ್ರಿಯಾ ಪತಿ ಶಿಜಿಲ್ ಕರೆದು ವಿಚಾರಣೆ ನಡೆಸಿದಾಗ ಸೆಕ್ಸ್ ಗೆ ಅಡ್ಡಿಯಾಗಿದ್ದಕ್ಕೆ ಹೊಡೆದು ಕೊಂದ ವಿಷಯ ಬಾಯಿ ಬಿಟ್ಟಿದ್ದಾನೆ. ಜೊತೆಗ ಆತನ ಮೊಬೈಲ್ ಪರಿಶೀಲಿಸಿದಾಗ ಹಲವು ಸೆಕ್ಸ್ ಚಾಟ್ ಗ್ರೂಪ್ ನಲ್ಲಿ ಶಿಜಿಲ್ ಆಕ್ಟೀವ್ ಆಗಿರೋದು ತಿಳಿದು ಬಂದಿದೆ.
ಪೋಸ್ಟ್ ಮಾರ್ಟಂ ವರದಿ ಕೂಡ ಮಗು ಆಂತರಿಕ ರಕ್ತಸ್ತ್ರಾವದಿಂದ ಸಾವನ್ನಪ್ಪಿರೋದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಸೆಕ್ಸ್ ಗೆ ಅಡ್ಡಿಯಾಗುತ್ತದೆ ಎಂಬುದಾಗಿ 1 ವರ್ಷದ ಮಗುವನ್ನೇ ಹೊಡೆದು ಕೊಂದ ತಂದೆ ಶಿಜಿಲ್ ಬಂಧಿಸಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸೆಕ್ಸ್ ಗೆ ಅಡ್ಡಿಯಾಗುತ್ತಿದ್ದಾನೆ ಅಂತ 1 ವರ್ಷದ ಮಗನನ್ನೇ ಹೊಡೆದು ಕೊಂದ ಪಾಪಿ ತಂದೆ
WhatsApp Group
Join Now