ಆಯತಪ್ಪಿ ಬಿದ್ದ ಕಾರ್ಮಿಕ ಸಾ*ವು: ಸಿಮೆಂಟ್‌ ಕಾರ್ಖಾನೆ ಮೇಲೆ ಕಲ್ಲು ತೂರಾಟ

Spread the love

ಬೆಳಗಾವಿ : ಸಿಮೆಂಟ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಆಯತಪ್ಪಿ ಬಿದ್ದ ಪರಿಣಾಮ ಓರ್ವ ಕಾರ್ಮಿಕ (Labor) ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ‌ ಈ ದುರ್ಘಟನೆ ನಡೆದಿದೆ.

ರಮೇಶ್‌ ಮೃತ ದುರ್ದೈವಿಯಾಗಿದ್ದು, ನಂದಕುಮಾರ್‌ ಹಾಗೂ ಮಹೇಂದ್ರ ಗಂಭೀರ ಗಾಯಗೊಂಡವರಾಗಿದ್ದಾರೆ. ಈ ಮೂವರು ಕಾರ್ಮಿಕರು ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಇವರನ್ನು ಬಾಗಲಕೋಟ ‌ಜಿಲ್ಲೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಮೇಶ್‌ ಮೃತಪಟ್ಟಿದ್ದಾನೆ. ಈ ಕಾರ್ಮಿಕರು ಬಿಹಾರದಿಂದ ಆಗಮಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ರಮೇಶ್‌ ಮೃತಪಟ್ಟ ವಿಷಯ ಕೇಳಿ ಆಕ್ರೋಶಗೊಂಡ ಕಾರ್ಮಿಕರು ಕಾರ್ಖಾನೆಯ ಸೆಕ್ಯೂರಿಟಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದರು. ಘಟನೆಯ ಹಿನ್ನೆಲೆಯಲ್ಲಿ ಕಾರ್ಖಾನೆಯ ಸುತ್ತಲು ಬಿಗಿ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿ ಕುಲಗೋಡ ಠಾಣೆ ಪೊಲೀಸರ ಭೇಟಿ ಪರಿಶೀಲನೆ‌ ನಡೆಸಿದ್ದಾರೆ.

ಪ್ರತ್ಯೇಕ ಘಟನೆ :- ಬೈಕ್ ಡಿಕ್ಕಿ ಹೊಡೆದು ವೃದ್ಧ ಸಾವು:

ಇತ್ತ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಬೈಕ್ ಸವಾರನ ವೇಗಕ್ಕೆ ಇದೀಗ ವೃದ್ಧರೊಬ್ಬರು ಬಲಿಯಾಗಿದ್ದಾರೆ.

ಕೆಟಿಎಂ ಬೈಕ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವೃದ್ದ ಸಾವನ್ನಪ್ಪಿದ ಘಟನೆ ಬೆಂಗಳೂರಿನ ನಾಗರಬಾವಿಯ ಮುಖ್ಯರಸ್ತೆಯಲ್ಲಿ ನಡೆದಿದೆ. ಮಂಗನಹಳ್ಳಿಯ ಮಧು, (74) ಅಪಘಾತದಿಂದ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.ಕೆಟಿಎಂ ಬೈಕ್ ಸವಾರ ಶ್ರೀನಿವಾಸ್ ಎಂಬಾತನ ಅಜಾಗರೂಕತೆಯ ಡ್ರೈವಿಂಗ್ ನಿಂದ ಅವಘಡ ನಡೆದಿದೆ

ಮಧು ರಸ್ತೆ ದಾಟುವಾಗ ಕೆಟಿಎಂ ಬೈಕ್ ಡಿಕ್ಕಿಯಾಗಿತ್ತು. ಅಪಘಾತದಿಂದ ಮಧು ತಲೆಗೆ ತೀವ್ರ ಪೆಟ್ಟಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಿಸದೆ ಮಧು ಮೃತಾಪಟ್ಟಿದ್ದಾರೆ.

ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸದ್ಯ ಆರೋಪಿ ಶ್ರೀನಿವಾಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೃತ ಮಧು ಅವರ ನಿವಾಸದಲ್ಲಿ ನೀರವಮೌನ ಆವರಿಸಿದ್ದು, ಇಡೀ ಮನೆಯಲ್ಲಿ ಶೋಕ ಮಡುಗಟ್ಟಿದೆ.

WhatsApp Group Join Now

Spread the love

Leave a Reply