ಚಿಕ್ಕಬಳ್ಳಾಪುರ : ಮಾಜಿ ಪ್ರಿಯಕರನ ಕಿತಾಪತಿಯಿಂದ ನವ ವಿವಾಹಿತೆ ಬೀದಿಗೆ ಬಿದ್ದಿದ್ದಾರೆ. 20 ದಿನದ ಹಿಂದೆ ಮದುವೆಯಾಗಿದ್ದ ಮಾಜಿ ಪ್ರಿಯತಮೆ ಪತಿಗೆ ಮಾಜಿ ಪ್ರಿಯಕರ ಖಾಸಗಿ ವಿಡಿಯೋ ಕಳುಹಿಸಿದ್ದಾನೆ. ಪ್ರಿಯತಮೆಯ ಪತಿಗೆ ಆರೋಪಿ ಅಂಬರೀಶ್ ಖಾಸಗಿ ವಿಡಿಯೋ ಕಳುಹಿಸಿದ್ದಾನೆ.
ತನ್ನ ಪತ್ನಿಯ ವಿಡಿಯೋ ನೋಡುತ್ತಿದ್ದಂತೆ ಪತಿ ಆಕ್ರೋಶಗೊಂಡಿದ್ದಾನೆ. 20 ದಿನದ ಹಿಂದೆ ಮದುವೆಯಾಗಿದ್ದ ಯುವತಿಯನ್ನು ತವರು ಮನೆಗೆ ಕಳುಹಿಸಿದ್ದಾನೆ. ದಾಂಪತ್ಯ ಜೀವನ ಮುರಿದುಬಿದ್ದಿದ್ದಕ್ಕೆ ರೊಚ್ಚಿಗೆದ್ದ ನವವಿವಾಹಿತೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಪಲಿಚೆರ್ಲು ಗ್ರಾಮದಲ್ಲಿರುವ ಮಾಜಿ ಪ್ರಿಯಕರ ಅಂಬರೀಶನ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.
ತನ್ನ ಜೀವನ ಹಾಳು ಮಾಡಿದ ಅಂಬರೀಶನಿಂದ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾಳೆ. ಅಂಬರೀಶನೇ ನನ್ನ ಜೀವನ ಸರಿಪಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾಳೆ. ಮನೆಗೆ ಬೀಗ ಹಾಕಿ ಮಾಜಿ ಪ್ರಿಯಕರ ಅಂಬರೀಶ್ ಪರಾರಿಯಾಗಿದ್ದಾನೆ. ಅಂಬರೀಶನ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪತಿಗೆ ಪತ್ನಿಯ ಖಾಸಗಿ ವಿಡಿಯೋ ಕಳಿಸಿದ ಕಿಡಿಗೇಡಿ : ಮಾಜಿ ಪ್ರಿಯಕರನ ಕಿತಾಪತಿಯಿಂದ ಬೀದಿಗೆ ಬಿದ್ದ ನವ ವಿವಾಹಿತೆ
WhatsApp Group
Join Now