ದೇಶದಾದ್ಯಂತ ಜಿಎಸ್ಟಿ ದರಗಳ ಇಳಿಕೆಯ ಲಾಭವನ್ನ ಜನರು ನಿರೀಕ್ಷೆ ಮಾಡ್ತಾ ಇರುವಾಗಲೇ ಕರ್ನಾಟಕ ಸರ್ಕಾರ ಇದೀಗ ವಾಣಿಜ್ಯ ಬಳಕೆ ವಿದ್ಯುತ್ ದರವನ್ನ ಹೆಚ್ಚಿಸಲು ಮುಂದಾಗಿದೆ. ಇದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಗಾದೆ ಮಾತಿನಂತೆ ಆಗಿದೆ. ಜಿಎಸ್ಟಿ ಇಳಿಕೆಯಿಂದ ಸಿಗಬಹುದಾದ ಸಣ್ಣ ಲಾಭವು ವಿದ್ಯುತ್ ದರ ಹೆಚ್ಚಳದಿಂದಾಗಿ ನಷ್ಟವಾಗಿ ಪರಿಣಮಿಸಲಿದೆ.
ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರ ಜಿಎಸ್ಟಿ ಕೌನ್ಸಿಲ್ ಸಭೆಗಳಲ್ಲಿ ಹಲವು ವಸ್ತುಗಳು ಮತ್ತೆ ಸೇವೆಗಳ ಮೇಲಿನ ತೆರಿಗೆ ದರವನ್ನ ಇಳಿಕೆ ಮಾಡಿದೆ. ಇದರಿಂದಾಗಿ ಉತ್ಪಾದನ ವೆಚ್ಚ ಕಡಿಮೆಗೊಂಡು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗುವ ನಿರೀಕ್ಷೆ ಇತ್ತು. ಆದರೆ ವಿದ್ಯುತ್ ದರ ಏರಿಕೆಯು ಇದೀಗ ಈ ನಿರೀಕ್ಷೆಗೆ ತಣ್ಣೀರು ಸುರಿತಿದೆ.
ಹಾಗಾದರೆ ಯಾಕೆ ಈ ಏರಿಕೆ.?
ವಿದ್ಯುತ್ ಸರಬರಾಜು ಕಂಪನಿಗಳು ಅಂದ್ರೆ ಎಸ್ಕಮ್ ಗಳು ನಷ್ಟವನ್ನ ಸರಿದೂಗಿಸಲು ಮತ್ತೆ ಹೆಚ್ಚುತ್ತಿರುವ ಬೇಡಿಕೆಯನ್ನ ಪೂರೈಸಲು ಇದೀಗ ಈ ರೀತಿ ಏರಿಕೆ ಮಾಡಿವೆ. ಆದರೆ ಕೋವಿಡ್ ನಂತರದ ಆರ್ಥಿಕ ಚೇತರಿಕೆ ಸಮಯದಲ್ಲಿ ಇಂತಹ ನಿರ್ಧಾರವು ಸಣ್ಣ ಮತ್ತೆ ಮಧ್ಯಮ ಕೈಗಾರಿಕೆಗಳಿಗೆ ದೊಡ್ಡ ಒಂದು ಹೊಡೆತ ನೀಡಿದಂತೆ ಆಗಿದೆ.
ಇದರಿಂದ ಉಂಟಾಗುವ ಪರಿಣಾಮಗಳೇನು.?
ಮೊದಲನೆಯದಾಗಿ ಉತ್ಪಾದನಾ ವೆಚ್ಚ ಹೆಚ್ಚಳ ಆಗ್ತದೆ. ವಿದ್ಯುತ್ ತರ ಹೆಚ್ಚಳದಿಂದಾಗಿ ಕೈಗಾರಿಕೆಗಳ ಉತ್ಪಾದನ ವೆಚ್ಚ ನೇರವಾಗಿ ಏರಿಕೆಯಾಗಲಿದೆ. ಇದು ಅಂತಿಮವಾಗಿ ವಸ್ತುಗಳ ಬೆಲೆಯನ್ನ ಕೂಡ ಹೆಚ್ಚಿಸುತ್ತದೆ. ಎರಡನೇದಾಗಿ ಸಣ್ಣ ಉದ್ದಿಮೆಗಳಿಗೆ ಹೊಡೆತ ಬೀಳಲಿದೆ. ಯಾಕಂತ ಹೇಳಿದ್ರೆ ದೊಡ್ಡ ಉದ್ದಿಮೆಗಳಿಗೆ ಹೋಲಿಸಿದರೆ ಸಣ್ಣ ಮತ್ತೆ ಮಧ್ಯಮ ಕೈಗಾರಿಕೆಗಳು ಈಗ ಏರಿಕೆಯಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತವೆ. ಇನ್ನು ನಿರುದ್ಯೋಗದ ಭೀತಿ ಕೂಡ ಹೆಚ್ಚಾಗಬಹುದು. ವೆಚ್ಚ ಹೆಚ್ಚಾದಾಗ ಕೆಲವು ಉದ್ಯಮಗಳು ಉತ್ಪಾದನೆಯನ್ನ ಕಡಿಮೆ ಮಾಡಬಹುದು ಅಥವಾ ಉದ್ಯೋಗಿಗಳನ್ನ ಕಡಿತಗೊಳಿಸುವ ನಿರ್ಧಾರಕ್ಕೆ ಸಹ ಬರಬಹುದು.
ಒಟ್ಟಿನಲ್ಲಿ ಜಿ.ಎಸ್.ಟಿ ದರ ಇಳಿಕೆಯಿಂದ ಸಿಗಬೇಕಿದ್ದ ಲಾಭವನ್ನ ಇದೀಗ ವಿದ್ಯುತ್ ದರ ಏರಿಕೆಯು ನುಂಗಿ ಹಾಕ್ತಾ ಇದೆ. ಸರ್ಕಾರದ ಈ ನಡೆಯು ಇದೀಗ ವ್ಯಾಪಾರ ವಲಯದಲ್ಲಿ ಬಾರಿ ಬೇಸರ ಉಂಟು ಮಾಡ್ತಾ ಇದೆ.