e-Shram Card 2024 : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಈ ಯೋಜನೆಯಡಿ ಅರ್ಹ ಕಾರ್ಮಿಕರಿಗೆ ಉಚಿತ ಇ-ಶ್ರಮ್ ಕಾರ್ಡ್(e-Shram Card) ನೀಡಲಾಗುತ್ತದೆ. ಇದು ಅರ್ಹ ಫಲಾನುಭವಿ ಕಾರ್ಮಿಕರಿಗೆ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಇ-ಶ್ರಮ್ ಕಾರ್ಡ್(e-Shram Card) ಯೋಜನೆಯ ಉದ್ದೇಶಗಳೇನು.? ಅರ್ಹತಾ ಮಾನದಂಡ, ನೋಂದಣಿ ಪ್ರಕ್ರಿಯೆ ಹೇಗೆ.? ಲಭ್ಯವಿರುವ ಪ್ರಯೋಜನಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇ-ಶ್ರಮ್ ಕಾರ್ಡ್(e-Shram Card) ಯೋಜನೆಯ ಉದ್ದೇಶಗಳೇನು.?
- ಸಾಮಾಜಿಕ ಭದ್ರತೆ : ಈ ಯೋಜನೆಯಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ದುರ್ಘಟನೆ, ಅನಾರೋಗ್ಯ, ವೃದ್ಧಾಪ್ಯ ಮತ್ತು ಮರಣದಂತಹ ಸಂದರ್ಭಗಳಲ್ಲಿ ಆರ್ಥಿಕ ನೆರವು ಒದಗಿಸುವುದು.
- ವಿಮಾ ರಕ್ಷಣೆ : ಈ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿ ಕಾರ್ಮಿಕರಿಗೆ ಅಪಘಾತ ವಿಮೆ ಮತ್ತು ಜೀವ ವಿಮೆಯನ್ನು ಒದಗಿಸಲಾಗುವುದು.
- ಕೌಶಲ್ಯ ಅಭಿವೃದ್ಧಿ : ಅರ್ಹ ಫಲಾನುಭವಿ ಕಾರ್ಮಿಕರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು.
- ಸರ್ಕಾರಿ ಯೋಜನೆಗಳಿಗೆ ಪ್ರವೇಶ : ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ಕಾರ್ಮಿಕರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಜನ್ ಧನ ಯೋಜನೆ ಮತ್ತು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಗಳಂತಹ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಇ-ಶ್ರಮ್ ಕಾರ್ಡ್(e-Shram Card) ಯೋಜನೆಯ ಬಗ್ಗೆ ಮಾಹಿತಿ :-
- ಇ-ಶ್ರಮ್ ಕಾರ್ಡ್(e-Shram Card) ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರದಿಂದ ಒದಗಿಸಲಾದ ಒಂದು ಯೋಜನೆಯಾಗಿದೆ. ಈ ಕಾರ್ಡ್ ಹೊಂದಿರುವವರು ಹಲವಾರು ಸೌಲಭ್ಯಗಳ ಪ್ರಯೋಜನವನ್ನ ಪಡೆದುಕೊಳ್ಳಬಹುದು.
- ಅಪಘಾತ ವಿಮೆ : ಯಾವುದೇ ಅಪಘಾತದ ಸಂದರ್ಭದಲ್ಲಿ, ಇ-ಶ್ರಮ್ ಕಾರ್ಡ್(e-Shram Card) ಹೊಂದಿರುವವರಿಗೆ ₹2 ಲಕ್ಷದವರೆಗೆ ವಿಮೆ ಲಭ್ಯವಿದೆ.
- ಮರಣೋತ್ತರ ಪರಿಹಾರ : ಕಾರ್ಮಿಕ ಮೃತಪಟ್ಟರೆ, ಅವರ ಕುಟುಂಬಕ್ಕೆ ₹3,000 ಪರಿಹಾರ ನೀಡಲಾಗುತ್ತದೆ.
- ವೃದ್ಧಾಪ್ಯ ಪಿಂಚಣಿ : 60 ವರ್ಷಕ್ಕೆ ತಲುಪಿದ ನಂತರ ಅರ್ಹ ಫಲಾನುಭವಿ ಕಾರ್ಮಿಕರಿಗೆ ತಿಂಗಳಿಗೆ ₹3,000 ರೂಪಾಯಿ ವೃದ್ಧಾಪ್ಯ ಪಿಂಚಣಿ ಸಿಗುತ್ತದೆ.
- ಶಿಕ್ಷಣ ಸಹಾಯ : ಇ-ಶ್ರಮ್ ಕಾರ್ಡ್(e-Shram Card) ಯೋಜನೆಯಡಿಯಲ್ಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಧನ ನೀಡಲಾಗುವುದು.
- ಆರೋಗ್ಯ ವಿಮೆ : ಈ ಯೋಜನೆಯಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಆರೋಗ್ಯ ವಿಮೆಯನ್ನ ಪಡೆಯಬಹುದು.
ಇ-ಶ್ರಮ್ ಕಾರ್ಡ್(e-Shram Card) ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು.?
- ಭಾರತೀಯ ನಾಗರಿಕರಾಗಿರಬೇಕು.
- 16 ರಿಂದ 59 ವರ್ಷ ವಯಸ್ಸಿನವರಾಗಿರಬೇಕು.
- ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರಬೇಕು. (ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಮನೆಗೆಲಸದವರು, ಕೃಷಿ ಕಾರ್ಮಿಕರು ಇತ್ಯಾದಿ)
ಇ-ಶ್ರಮ್ ಕಾರ್ಡ್(e-Shram Card)ಗೆ ಬೇಕಾದ ಅಗತ್ಯ ದಾಖಲೆಗಳೇನು.?
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐಡಿ
- ಮೊಬೈಲ್ ಸಂಖ್ಯೆ
- ಪಾಸ್‌ಪೋರ್ಟ್ ಗಾತ್ರದ ಫೋಟೋ
ಆನ್‌ಲೈನ್ ಹೇಗೆ ನೋಂದಣಿ ಮಾಡಿಸುವುದು :-
Ministry of Labour & Employment Government of India ವೆಬ್ ಸೈಟ್ ಗೆ ಭೇಟಿ ನೀಡಿ.“ರೆಜಿಸ್ಟರ್ ಆನ್‌ಲೈನ್” ಮೇಲೆ ಕ್ಲಿಕ್ ಮಾಡಿ.ನಂತರ ಅರ್ಜಿದಾರರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಎಂಟರ್ ಮಾಡಿ ಮತ್ತು “OTP ಯನ್ನು ನಮೂದಿಸಿ ಕ್ಲಿಕ್ ಮಾಡಿ.ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ, ಕೆಲಸದ ವಿವರಗಳು ಇತ್ಯಾದಿಗಳನ್ನು ಭರ್ತಿ ಮಾಡಿ. ಅಲ್ಲಿ ಕೇಳಿರುವಅಗತ್ಯವಿರುವ ದಾಖಲೆಗಳನ್ನು (ಆಧಾರ್ ಕಾರ್ಡ್, ಫೋಟೋ) ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Arecanut Price : ಇಂದಿನ ಅಡಿಕೆ ಧಾರಣೆ – 28 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?
- ಗಾಳಿಪಟದ ಮಾಂಜಾ ದಾರಕ್ಕೆ ಮತ್ತೊಂದು ಬಲಿ : ಕುತ್ತಿಗೆ ಕಟ್ ಆಗಿ `LKG’ ಬಾಲಕಿ ಸಾವು.!
- Horoscope Today : 28 ಜನವರಿ 2026 ಬುಧವಾರ ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- Cooking Oil Usage : ನಾಲ್ಕು ಜನರ ಕುಟುಂಬವು ತಿಂಗಳಿಗೆ ಎಷ್ಟು ಅಡುಗೆ ಎಣ್ಣೆ ಬಳಸಬೇಕು ಗೊತ್ತಾ?
- ಅಟ್ಟಾಡಿಸಿ ಹಲ್ಲೆಗೈದು, 2 ನೇ ಮಹಡಿಯಿಂದ ತಳ್ಳಿ ಯುವಕನ ಕಗ್ಗೊಲೆ- ನಾಲ್ವರ ಬಂಧನ
- ಬಿಗ್ ಬಾಸ್ ಗೆದ್ದಿದ್ದು ಗಿಲ್ಲಿ ಅಲ್ಲ ನಿರ್ಮಲಾ ಸೀತಾರಾಮನ್ ಎಂದ ಶಾಸಕ ಪ್ರದೀಪ್ ಈಶ್ವರ್
- ಸರ್ಕಾರಿ ಶಾಲೆಯಲ್ಲಿ ಮಾತ್ರೆ ಸೇವನೆ ಬಳಿಕ 59 ವಿದ್ಯಾರ್ಥಿಗಳು ಅಸ್ವಸ್ಥ
- ಹಲ್ಲುಜ್ಜಿದ ಬಳಿಕ ವಸಡಿನಲ್ಲಿ ರಕ್ತಸ್ರಾವ ಆಗುವುದು ಕಾಯಿಲೆಯ ಮುನ್ಸೂಚನೆಯೇ?
- ಬೆಳ್ಳಂಬೆಳಗ್ಗೆಯೇ ದೇವರ ಜಾತ್ರೆಗೆ ಹೊರಟ ಭಕ್ತ; ದೈವ ದರ್ಶನಕ್ಕೂ ಮುನ್ನವೇ ಯಮರಾಜ ಕರೆದೊಯ್ದ!
- ಇವನೆಂಥಾ ನೀಚ ಮಗ.! ಹಣಕ್ಕಾಗಿ ಕಲ್ಲಿನಿಂದ ಹೊಡೆದು ತಾಯಿಯನ್ನೇ ಕೊಂದ ಮಗ.! ಆರೋಪಿಯ ಬಂಧನ
- ಆಹಾ ನೋಡೋಕೆ 2 ಕಣ್ಣು ಸಾಲದು ; ಡಿಕೆಶಿ ತಲೆಗೆ ಸ್ವತಃ ಟವೆಲ್ ಕಟ್ಟಿದ ಸಿಎಂ ಸಿದ್ದರಾಮಯ್ಯ.!
- ರಾತ್ರಿ ಹೊತ್ತು ಗೋಚರಿಸುವ ಈ ಬದಲಾವಣೆಗಳು `ಕಿಡ್ನಿ ವೈಫಲ್ಯ’ದ ಲಕ್ಷಣವಾಗಿರಬಹುದು ಎಚ್ಚರ.!
- ಚೀಲದಲ್ಲಿ ಯುವತಿಯ ಶಿರವಿಲ್ಲದ ದೇಹ ಪತ್ತೆ; ಸಹೋದ್ಯೋಗಿ ಅರೆಸ್ಟ್, ಆತ ಸಿಕ್ಕಿಬಿದ್ದಿದ್ದೇ ರೋಚಕ ಕಹಾನಿ!
- Arecanut Price : ಇಂದಿನ ಅಡಿಕೆ ಧಾರಣೆ – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?
- Dina Bhavishya : 27 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಹಣದ ಆಸೆಗಾಗಿ ಪತ್ನಿಯನ್ನು ಪರಪುರುಷರ ಬಳಿಗೆ ಕಳುಹಿಸಿ ಖಾಸಗಿ ಕ್ಷಣ ಸೆರೆ ಹಿಡಿಯುತ್ತಿದ್ದ ಪತಿ ; ಬೆಚ್ಚಿಬೀಳಿಸುವ ಹನಿ ಟ್ರ್ಯಾಪ್ ಜಾಲ ಬಯಲು
- ದಿನಕ್ಕೆ ಎರಡು ಸಿಗರೇಟ್ ಮಾತ್ರ! ಈ ಸುಳ್ಳು ಎಷ್ಟು ಅಪಾಯಕಾರಿ ಗೊತ್ತಾ?
- ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣ ಸೇರಿದ ಮಗಳು ಕೀರ್ತಿ!
- ಮದುವೆಯಾಗಿ ಮಕ್ಕಳಿದ್ದರೂ ಅನೈತಿಕ ಸಂಬಂಧ- ದುರಂತ ಅಂತ್ಯ ಕಂಡ ಜೋಡಿ!
- ಸೆಕ್ಸ್ ಗೆ ಅಡ್ಡಿಯಾಗುತ್ತಿದ್ದಾನೆ ಅಂತ 1 ವರ್ಷದ ಮಗನನ್ನೇ ಹೊಡೆದು ಕೊಂದ ಪಾಪಿ ತಂದೆ



















