ಇಂದಿನ ಡಿಜಿಟಲ್ ಯುಗದಲ್ಲಿ ಯಾರ ವೀಡಿಯೋ ಅಥವಾ ಫೋಟೋ ಯಾವಾಗ, ಎಲ್ಲಿಂದ ರೆಕಾರ್ಡ್ ಆಗಿ ಆನ್ಲೈನ್ನಲ್ಲಿ ಹರಿಬಿಡಲಾಗುತ್ತದೆ ಎಂಬುದನ್ನು ಊಹಿಸುವುದೇ ಕಷ್ಟವಾಗಿದೆ. ಮೊಬೈಲ್ ಫೋನ್, ಸಾಮಾಜಿಕ ಮಾಧ್ಯಮಗಳು ಮತ್ತು ವಿವಿಧ ವೆಬ್ಸೈಟ್ಗಳ ವ್ಯಾಪಕ ಬಳಕೆಯಿಂದ ಖಾಸಗಿತನಕ್ಕೆ ದೊಡ್ಡ ಸವಾಲು ಎದುರಾಗಿದೆ.
ಹಾಗಾಗಿ, ಖಾಸಗಿ ಫೋಟೋ ಅಥವಾ ವೀಡಿಯೊ ಸೋರಿಕೆಯಾದರೆ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ಇಲ್ಲಿದೆ:
ಸೋರಿಕೆಯಾದ ಗೊತ್ತಾದ ತಕ್ಷಣ ಏನು ಮಾಡಬೇಕು?
ಯಾರಾದರೂ ನಿಮ್ಮ ಒಪ್ಪಿಗೆಯಿಲ್ಲದೆ ಫೋಟೋ ಅಥವಾ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಎಂದು ತಿಳಿದ ತಕ್ಷಣ ವಿಳಂಬ ಮಾಡಬಾರದು. ಮೊದಲು ಆ ಪೋಸ್ಟ್ನ ಲಿಂಕ್, ಸ್ಕ್ರೀನ್ಶಾಟ್, ಪೋಸ್ಟ್ ಆದ ದಿನಾಂಕ ಮತ್ತು ಖಾತೆಯ ವಿವರಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ. ಇವು ಮುಂದಿನ ದೂರು ಪ್ರಕ್ರಿಯೆಯಲ್ಲಿ ಪ್ರಮುಖ ಸಾಕ್ಷಿಗಳಾಗುತ್ತವೆ.
Stopncii.Org ಮೂಲಕ ಅಳಿಸುವ ಪ್ರಯತ್ನ:
ಭಾರತದಲ್ಲಿ ಖಾಸಗಿ ಮತ್ತು ಅಶ್ಲೀಲ ವಿಷಯ ಸೋರಿಕೆಯಾದಾಗ ಸಹಾಯ ಮಾಡುವ Stopncii.Org ಎಂಬ ವೆಬ್ಸೈಟ್ ಇದೆ. ಇಲ್ಲಿ ನೀವು ದೂರು ಸಲ್ಲಿಸಿದರೆ, ಆ ವೆಬ್ಸೈಟ್ ತಂಡವು ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ವಿವಿಧ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಲು ಪ್ರಯತ್ನಿಸುತ್ತದೆ. ಇದು ಕಾನೂನು ಪ್ರಕ್ರಿಯೆಗಿಂತ ವೇಗವಾಗಿ ಕೆಲಸ ಮಾಡುವ ಒಂದು ಉಪಾಯವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ಲಾಟ್ಫಾರ್ಮ್ನಲ್ಲಿ ವರದಿ:
ವಿಷಯ ಯಾವ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ ಎಂಬುದನ್ನು ಗುರುತಿಸಿ, ಆ ಪ್ಲಾಟ್ಫಾರ್ಮ್ನಲ್ಲೇ Report ಆಯ್ಕೆಯನ್ನು ಬಳಸಿ ದೂರು ನೀಡುವುದು ಬಹಳ ಮುಖ್ಯ. ಫೇಸ್ಬುಕ್, ಇನ್ಸ್ಟಾಗ್ರಾಮ್, ಎಕ್ಸ್ ಅಥವಾ ಯೂಟ್ಯೂಬ್ ಮುಂತಾದ ತಾಣಗಳು ಖಾಸಗಿ ಮತ್ತು ಅಶ್ಲೀಲ ವಿಷಯಗಳ ವಿರುದ್ಧ ಕಠಿಣ ನೀತಿಗಳನ್ನು ಹೊಂದಿವೆ. ಸರಿಯಾಗಿ ವರದಿ ಮಾಡಿದರೆ ಪೋಸ್ಟ್ ತೆಗೆದುಹಾಕುವ ಸಾಧ್ಯತೆ ಹೆಚ್ಚು.
ಸರ್ಕಾರಿ ಸೈಬರ್ ಅಪರಾಧ ಪೋರ್ಟಲ್ನಲ್ಲಿ ದೂರು:
ಸಾಮಾಜಿಕ ಮಾಧ್ಯಮದ ಜೊತೆಗೆ ಸರ್ಕಾರದ ಅಧಿಕೃತ ವೆಬ್ಸೈಟ್ cybercrime.gov.in ನಲ್ಲಿ ಆನ್ಲೈನ್ ದೂರು ಸಲ್ಲಿಸಬಹುದು. ಇಲ್ಲಿ ನೀಡುವ ದೂರು ಆಧರಿಸಿ ಪೊಲೀಸರು ಮತ್ತು ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಮಹಿಳೆಯರನ್ನು ಒಳಗೊಂಡ ಪ್ರಕರಣಗಳಲ್ಲಿ ತ್ವರಿತವಾಗಿ ಕಾರ್ಯಾಚರಣೆ ನಡೆಯುತ್ತದೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ವಿಧಾನ:
ನೀವು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ನೇರವಾಗಿ ಎಫ್ಐಆರ್ ದಾಖಲಿಸಬಹುದು. ಭಾರತೀಯ ದಂಡ ಸಂಹಿತೆ 2023ರ ಅಡಿಯಲ್ಲಿ, ಅನುಮತಿಯಿಲ್ಲದೆ ವೀಡಿಯೊ ರೆಕಾರ್ಡ್ ಮಾಡುವುದು, ಹಂಚುವುದು ಅಥವಾ ವೈರಲ್ ಮಾಡುವುದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ. ಅಪರಾಧ ಸಾಬೀತಾದರೆ 3ರಿಂದ 7 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿ ಇದೆ.
ಸಹಾಯವಾಣಿ ಮತ್ತು ಎಚ್ಚರಿಕೆ ಕ್ರಮಗಳು:
ಸೈಬರ್ ಅಪರಾಧಕ್ಕೆ ಸಂಬಂಧಿಸಿದ ತಕ್ಷಣದ ಸಲಹೆಗಾಗಿ 1930 ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಇಂತಹ ಸಂದರ್ಭಗಳಲ್ಲಿ ಮೌನವಾಗಿರುವುದು ಅಥವಾ ತಡಮಾಡುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಬಹುದು. ಸಮಯಕ್ಕೆ ಸರಿಯಾದ ಕ್ರಮವೇ ನಿಮ್ಮ ಗೌಪ್ಯತೆ ಮತ್ತು ಗೌರವವನ್ನು ರಕ್ಷಿಸುವ ಪ್ರಮುಖ ಅಸ್ತ್ರವಾಗಿದೆ.
ನಿಮ್ಮ ಖಾಸಗಿ ಫೋಟೋ-ವಿಡಿಯೋ ವೈರಲ್ ಆದ್ರೆ ಭಯ ಪಡಬೇಡಿ, ತಕ್ಷಣ ಇದೊಂದು ಕೆಲಸ ಮಾಡಿ
WhatsApp Group
Join Now