ಗಂಡನ ಆಸ್ತಿಗೆ ಕೇಳುವ ಹೆಂಡತಿಯರಿಗೆ ಹೇಗಿದೆ ನಿಯಮ | ಗಂಡನ ಆಸ್ತಿಯಲ್ಲಿ ಪತ್ನಿಗೆ ಪಾಲು ಇದೆಯಾ.? property Rules

Spread the love

ಆಸ್ತಿ ವಿಷಯವಾಗಿ ಅದೆಷ್ಟೋ ಸಂಬಂಧಗಳು ಈಗ ಕೋರ್ಟ್ ಮೆಟ್ಟಿಲು ಏರುತ್ತಾ ಇರುವುದನ್ನ ನೀವೆಲ್ಲರೂ ಕೂಡ ನೋಡಿರ್ತೀರಾ. ಆಸ್ತಿಯ ವಿಷಯವಾಗಿ ಗಂಡ-ಹೆಂಡತಿ, ಅಪ್ಪ-ಮಕ್ಕಳು, ಅಣ್ಣ-ತಂಗಿ, ಅಕ್ಕ-ತಂಗಿ ಸಂಬಂಧಗಳು ಈಗ ಕೋರ್ಟ್ ಮೆಟ್ಟಿಲೆರುತ್ತಿದೆ. ಈ ನಡುವೆ ಹೈಕೋರ್ಟ್ ಈಗ ಗಂಡನ ಆಸ್ತಿಗೆ ಸಂಬಂಧಪಟ್ಟಂತೆ ಬಹು ದೊಡ್ಡ ತೀರ್ಪು ಕೊಟ್ಟಿದೆ. ಗಂಡನ ಆಸ್ತಿಯಲ್ಲಿ ಹೆಂಡತಿಗೆ ಯಾವಾಗ ಪಾಲು ಸಿಗುತ್ತೆ ಮತ್ತು ಯಾವಾಗ ಪಾಲು ಸಿಗಲ್ಲ ಅನ್ನುವುದರ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪನ್ನ ಕೊಟ್ಟಿದೆ.

ಹಿಂದೂ ಉತ್ತರಾಧಿಕಾರಿ ಕಾಯ್ದೆ 1956ರ ಪ್ರಕಾರ ಗಂಡನ ಆಸ್ತಿಯನ್ನ ಎರಡು ವಿಧಗಳಾಗಿ ವಿಂಗಡಣೆ ಮಾಡಲಾಗಿದೆ. ಒಂದು ಸ್ವಯಂ ಗಳಿಸಿದ ಆಸ್ತಿ, ಇನ್ನೊಂದು ಪಿತ್ರಾರ್ಜಿತ ಆಸ್ತಿಯಾಗಿರುತ್ತೆ. ಸ್ವಯಂ ಆಸ್ತಿ ಅಂತ ಹೇಳಿದ್ರೆ ಗಂಡ ತನ್ನ ಸ್ವಂತ ಹಣದಿಂದ ಖರೀದಿ ಮಾಡಿದ ಆಸ್ತಿಯಾಗಿರುತ್ತದೆ. ಅದೇ ರೀತಿಯಲ್ಲಿ ಪಿತ್ರಾರ್ಜಿತ ಆಸ್ತಿ ಎಂದರೆ ಗಂಡನಿಗೆ ತನ್ನ ಪೂರ್ವಜರಿಂದ ಬಂದ ಆಸ್ತಿಯಾಗಿರುತ್ತದೆ.

ಗಂಡನಾದವನು ತನ್ನ ಸ್ವಂತ ಹಣದಲ್ಲಿ ಆಸ್ತಿಯನ್ನ ಖರೀದಿ ಮಾಡಿದರೆ ಹೆಂಡತಿಯಾದವಳಿಗೆ ಅದರ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಗಂಡ ಬದುಕಿರುವಾಗ ಆಕೆಗೆ ಆ ಆಸ್ತಿಯ ಮೇಲೆ ಯಾವುದೇ ಅಧಿಕಾರ ಸಿಗುವುದಿಲ್ಲ. ಒಂದುcವೇಳೆ ಗಂಡನಾದವನು ಸತ್ತಿದ್ದು, ಆತನಿಗೆ ಪಿತ್ರಾರ್ಜಿತ ಆಸ್ತಿ ಇದ್ದರೆ ಹೆಂಡತಿಯಾದವಳು ಗಂಡನ ಆಸ್ತಿ ಆಸ್ತಿಯನ್ನ ಕೇಳಬಹುದಾಗಿದೆ. ಒಂದು ವೇಳೆ ಪತಿಯಾದವನು ತನ್ನ ಸ್ವಂತ ಹಣದಿಂದ ಆಸ್ತಿಯನ್ನು ಖರೀದಿ ಮಾಡಿದ್ದು ಆತ ಇಹ ಲೋಕವನ್ನು ತ್ಯಜಿಸಿದರೆ, ಹೆಂಡತಿ ಆ ಆಸ್ತಿಯಲ್ಲಿ ಸಂಪೂರ್ಣ ಅಧಿಕಾರವನ್ನ ಪಡೆದುಕೊಳ್ಳಬಹುದು.

ಆದರೆ ಗಂಡನಾದವನು ಬದುಕಿರುವಾಗ ಹೆಂಡತಿಗೆ ಯಾವುದೇ ರೀತಿಯಲ್ಲಿ ನೇರವಾಗಿ ಪಾಲು ಸಿಗುವುದಿಲ್ಲ. ಒಂದು ವೇಳೆ ಗಂಡನಾದವನು ಹೆಂಡತಿಗೆ ವಿಚ್ಛೇದನವನ್ನ ಕೊಟ್ಟರೆ, ಆಕೆ ಆತನ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಬಹುದು. ಉದಾಹರಣೆಗೆ ಮುಸ್ಲಿಂ ಕಾನೂನಿನ ಪ್ರಕಾರ ಗಂಡ ಬದುಕಿರುವಾಗ ಹೆಂಡತಿಗೆ ಯಾವುದೇ ರೀತಿಯ ಪಾಲು ಇಲ್ಲ. ಆದರೆ ದಾನ ಅಥವಾ ಇಚ್ಛಾಪತ್ರದ ಮೂಲಕ ಆಕೆ ಪಾಲು ಪಡೆದುಕೊಳ್ಳಬಹುದು.

ಅದೇ ರೀತಿಯಲ್ಲಿ ಕ್ರಿಶ್ಚಿಯನ್ ಧರ್ಮದಲ್ಲಿ ಕೂಡ ಇದೇ ಕಾನೂನು ಜಾರಿಯಲ್ಲಿರುವುದನ್ನ ನಾವು ಗಮನಿಸಬಹುದು. ಕ್ರಿಶ್ಚಿಯನ್ ಧರ್ಮದಲ್ಲಿ ಸಾಮಾನ್ಯವಾಗಿ ವಿಚ್ಛೇದನ ಅಥವಾ ಜೀವನಾಂಶದ ಸಮಯದಲ್ಲಿ ಮಾತ್ರ ಹೆಂಡತಿಯಾದವಳು ಪಾಲು ಪಡೆದುಕೊಳ್ಳಬಹುದು. ಗಂಡನ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳುವ ಎಲ್ಲಾ ಪತ್ನಿಯರಿಗೆ ಈ ನಿಯಮಗಳು ಅನ್ವಯ ಆಗಲಿದೆ.

WhatsApp Group Join Now

Spread the love

Leave a Reply