ತಂದೆಯ ಆಸ್ತಿಗೆ ಸಂಬಂಧಪಟ್ಟಂತೆ ಈಗ ಸುಪ್ರೀಂ ಕೋರ್ಟ್ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಇನ್ನು ಮುಂದೆ ಸ್ವಂತ ಮಗನಾದರೂ ಕೂಡ ಅಪ್ಪನ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲು ಸಿಗುವುದಿಲ್ಲ. ಅಪ್ಪನ ಆಸ್ತಿಯಲ್ಲಿ ಪಾಲು ಕೇಳುವ ಮಕ್ಕಳಿಗೆ ಈಗ ಸುಪ್ರೀಂ ಕೋರ್ಟ್ ಹೊಸ ನಿಯಮವನ್ನ ಜಾರಿಗೆ ತಂದಿದೆ. ಪೋಷಕರನ್ನ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ರಕ್ಷಣೆ ಮಾಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ಆದೇಶವನ್ನ ಹೊರಡಿಸಿದೆ.
ಕೆಲವೊಮ್ಮೆ ಮಕ್ಕಳಾದವರು ತಂದೆಯ ಆಸ್ತಿಯಲ್ಲಿ ಪಾಲು ಬೇಕು ಅಂತ ಕೋರ್ಟ್ ಮೆಟ್ಟಿಲನ್ನ ಏರುತ್ತಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಾಮಾನ್ಯವಾಗಿ ಮಕ್ಕಳಿಗೆ ಅಧಿಕಾರ ಬರುತ್ತದೆ. ಆದರೆ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಅಧಿಕಾರವಿಲ್ಲ. ತಂದೆ ತನ್ನ ಸ್ವಂತ ಹಣದಿಂದ ಆಸ್ತಿಯನ್ನ ಖರೀದಿ ಮಾಡಿದರೆ ಅದು ಸ್ವಯಾರ್ಜಿತ ಆಸ್ತಿಯಾಗಿರುತ್ತದೆ. ಒಬ್ಬ ತಂದೆಯಾದವನು ತಾನು ಸಂಪಾದನೆ ಮಾಡಿದ ಹಣದಿಂದ ಆಸ್ತಿಯನ್ನ ಖರೀದಿ ಮಾಡುತ್ತಾನೆ.
ಅಂತಹ ಆಸ್ತಿಯನ್ನ ಸ್ವಯಾರ್ಜಿತ ಆಸ್ತಿ ಅಂತ ಕರೆಯಲಾಗುತ್ತದೆ. ತಂದೆ ಅಥವಾ ತಾಯಿಯ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳಾದವರಿಗೆ ಅಂದರೆ ಗಂಡು ಮಗುವಾಗಲಿ ಅಥವಾ ಹೆಣ್ಣು ಮಗುವಾಗಲಿ ಯಾವುದೇ ರೀತಿಯ ಪಾಲಿಲ್ಲ. ತಂದೆಯಾದವನು ತನಗೆ ಇಷ್ಟವಿದ್ದರೆ ಮಾತ್ರ ಆ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಕೊಡಬಹುದು. ಒಂದು ವೇಳೆ ತಂದೆಯಾದವನು ಮಕ್ಕಳಿಗೆ ಆಸ್ತಿಯನ್ನು ಕೊಡದೇ ಇದ್ದರೆ, ಆ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲು ಕೇಳುವ ಅಧಿಕಾರ ಮಕ್ಕಳು ಹೊಂದಿರುವುದಿಲ್ಲ.
ತಂದೆಯಾದವನು ತನ್ನ ಸ್ವಂತ ಖರೀದಿ ಮಾಡಿದ ಆಸ್ತಿಯನ್ನ ಆತ ಯಾರಿಗೆ ಬೇಕಾದರೂ ದಾನ ಮಾಡಬಹುದು. ತಂದೆಗೆ ಪಿತ್ರಾರ್ಜಿತ ಆಸ್ತಿ ಬಂದಿದ್ದರೆ ಮಾತ್ರ ಆ ಆಸ್ತಿಯಲ್ಲಿ ಮಕ್ಕಳು ಪಾಲು ಕೇಳಬಹುದು. ಅದೇ ರೀತಿಯಲ್ಲಿ ಸುಪ್ರೀಂ ಕೋರ್ಟ್ ಇನ್ನೊಂದು ಆದೇಶವನ್ನು ಹೊರಡಿಸಿದ್ದು, ತಂದೆ ಅಥವಾ ತಾಯಿಯ ಆಸ್ತಿಯಲ್ಲಿ ಪಾಲು ಪಡೆದುಕೊಂಡ ನಂತರ ಆ ತಂದೆ ಅಥವಾ ತಾಯಿಯನ್ನ ಅನಾಥಾಶ್ರಮ ಅಥವಾ ವೃದ್ಧಾಶ್ರಮಕ್ಕೆ ಕಳುವಿಸಿದರೆ ಅವರ ಆಸ್ತಿಯನ್ನ ವಾಪಸ್ ಪಡೆದುಕೊಳ್ಳಲಾಗುತ್ತದೆ.
ಅಂದರೆ ತಂದೆ ಅಥವಾ ತಾಯಿಯಾದವರು ತಾವು ಮಕ್ಕಳಿಗೆ ಕೊಟ್ಟ ಆಸ್ತಿಯನ್ನ ಅಂದರೆ ದಾನಪತ್ರದ ಮೂಲಕ ಕೊಟ್ಟ ಆಸ್ತಿಯನ್ನ ಮರಳಿ ವಾಪಸ್ ಪಡೆದುಕೊಳ್ಳಬಹುದು. ಅಂದರೆ ದಾನಪತ್ರವನ್ನ ರದ್ದು ಮಾಡಬಹುದು. ದೇಶದಲ್ಲಿ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ತಂದೆ ಅಥವಾ ತಾಯಿಯ ಆಸ್ತಿಯಲ್ಲಿ ಪಾಲು ಪಡೆದುಕೊಂಡ ನಂತರ ಮಕ್ಕಳಾದವರು ಅವರನ್ನ ಅನಾಥಾಶ್ರಮ ಅಥವಾ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ.
ಕೆಲವು ಮಕ್ಕಳು ಅವರ ಖರ್ಚಿಗೆ ಹಣ ಕೊಡುವುದಿಲ್ಲ ಮತ್ತು ಅವರ ಆಸ್ಪತ್ರೆಯ ವೆಚ್ಚವನ್ನು ಕೂಡ ನೋಡಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ತಂದೆ ಅಥವಾ ತಾಯಿಯಾದವರು ತಾವು ಮಕ್ಕಳಿಗೆ ದಾನಪತ್ರದ ಮೂಲಕ ಕೊಟ್ಟ ಆಸ್ತಿಯನ್ನ ರದ್ದು ಮಾಡಬಹುದು. ಅಂದರೆ ಆ ದಾನಪತ್ರವನ್ನ ರದ್ದು ಮಾಡುವ ಅಧಿಕಾರವನ್ನ ತಂದೆ ತಾಯಿ ಹೊಂದಿರುತ್ತಾರೆ. ಪೋಷಕರಿಗೆ ರಕ್ಷಣೆಯನ್ನು ಕೊಡಬೇಕು ಅನ್ನುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ನಿಯಮವನ್ನ ದೇಶಾದ್ಯಂತ ಜಾರಿಗೆ ತಂದಿದೆ.

ಮಗನಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇಲ್ಲ.? ಕೋರ್ಟ್ ಆದೇಶ – ಏನಿದು ಹೊಸ ನಿಯಮ.?
WhatsApp Group
Join Now