ಮೈಸೂರು : ಚಪ್ಪಲಿ ಹೊರಗೆ ಬಿಟ್ಟು ಬನ್ನಿ ಎಂದು ವೈದ್ಯ ಹೇಳಿದ್ದಕ್ಕೆ ಮಗುವನ್ನು ಕರೆದುಕೊಂಡು ಬಂದಿದ್ದ ಕುಟುಂಬವೊಂದು ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ (Crime) ಮೈಸೂರಿನ ಉದಯರಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಾ. ಅನೂಪ್ ಹಲ್ಲೆಗೊಳಗಾದ ವೈದ್ಯರಾಗಿದ್ದು, ರುಬಿಯಾಷ್ ಷರೀಫ್ ಎಂಬಾತ ಹಾಗೂ ಆತನ ತಂದೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ರುಬಿಯಾಜ್ ಷರೀಫ್ ನ ಮೂರು ವರ್ಷದ ಮಗು ಆಸ್ಪತ್ರೆಗೆ ದಾಖಲಾಗಿತ್ತು. ಈ ವೇಳೆ ಮಗುವನ್ನು ನೋಡಲು ರುಬಿಯಾಜ್ ಷರೀಫ್ ಚಪ್ಪಲಿ ಧರಿಸಿಯೇ ಆಸ್ಪತ್ರೆಯೊಳಗೆ ಬಂದಿದ್ದ. ಆಗ ವೈದ್ಯರು ಚಪ್ಪಲಿ ಹೊರಗೆ ಬಿಟ್ಟು ಬನ್ನಿ ಎಂದು ಹೇಳಿದ್ದರು. ಚಪ್ಪಲಿ ಹೊರಗೆ ಬಿಡುವುದಿಲ್ಲ ಎಂದು ಗಲಾಟೆ ಮಾಡಿದ್ದ ರುಬಿಯಾಜ್, ನೀವು ಮಾತ್ರ ಹಾಕಿಕೊಳ್ಳಬಹುದಾ ಎಂದು ಪುಂಡಾಟಿಕೆ ಶುರು ಮಾಡಿದ್ದ. ಅದಕ್ಕೆ ಉತ್ತರಿಸಿದ ವೈದ್ಯರು ನಾನೂ ಹೊರಗೆ ಬಿಟ್ಟು ಬಂದಿದ್ದೇನೆ ನೋಡಿ ಎಂದು ತೋರಿಸಲು ಹೊರಗೆ ಬಂದಿದ್ದರು. ಈ ವೇಳೆ ಏಕಾಏಕಿ ರುಬಿಯಾಜ್ ವೈದ್ಯರ ಮೇಲೆ ಹಲ್ಲೆ ನಡೆಸಿದ್ದ.
ಹಲ್ಲೆಗೆ ರುಬಿಯಾಜ್ ತಂದೆಯೂ ಸಾಥ್ ನೀಡಿದ್ದ. ಆರೋಪಿಗಳ ವಿರುದ್ದ ಉದಯಗಿರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾದರೂ ಸಹ ಆರೋಪಿಗಳನ್ನು ಬಂದಿಸಿಲ್ಲ ಎಂದು ಪೊಲೀಸರ ವಿರುದ್ದವೂ ವೈದ್ಯರು ದೂರಿದ್ದಾರೆ.
ಚಪ್ಪಲಿ ಆಚೆ ಬಿಟ್ಟು ಬನ್ನಿ ಎಂದಿದ್ದಕ್ಕೆ ವೈದ್ಯನ ಮೇಲೆ ಹಲ್ಲೆ – ವಿಡಿಯೋ ವೈರಲ್
WhatsApp Group
Join Now