ಮಾರುಕಟ್ಟೆಯಲ್ಲಿ ತರಕಾರಿ ಅಥವಾ ಹಣ್ಣುಗಳನ್ನು ಖರೀದಿಸಿದ ಬಳಿಕ, ಇವುಗಳನ್ನು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ, ಮನೆಗೆ ತಂದು ಫ್ರಿಡ್ಜ್ ನಲ್ಲಿ ಇಟ್ಟು ಬಿಡುತ್ತೇವೆ, ಕೆಲವರು ಜಿಪ್ಲಾಕ್ ಪೌಚ್ಗಳನ್ನು ಸಹ ಬಳಸುತ್ತಾರೆ.ಆದರೆ ತಜ್ಞರು ಹೇಳುವ ಪ್ರಕಾರ ಹಣ್ಣು ತರಕಾರಿಗಳನ್ನು ಈ ರೀತಿಯಾಗಿ ಸಂಗ್ರಹಿಸಿಡುವುದು, ಆರೋಗ್ಯಕ್ಕೆ ತುಂಬಾನೇ ಹಾನಿಕಾರ ಎನ್ನಲಾಗುತ್ತದೆ.
ಮಾರುಕಟ್ಟೆಗೆ ಹೋದರೆ ನಮಗೆ ಇಷ್ಟವಾಗುವ ಹಣ್ಣು ಹಾಗೂ ಹಸಿರೆಲೆ ತರಕಾರಿಗಳನ್ನು ಎರಡು ದಿನಕ್ಕೆ ಬೇಕಾಗುವಷ್ಟು ತಗೊಂಡು, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಮನೆಗೆ ಬರುತ್ತದೆ. ಕೆಲವರು ನಾಲ್ಕೈದು ದಿನಗಳಿಗೆ ಬೇಕಾಗುವಷ್ಟು ತರಕಾರಿಗಳನ್ನು ಒಮ್ಮೆಲೇ ಖರೀದಿ ಮಾಡುವರು. ತಮಗೆ ದಿನಿತ್ಯಕ್ಕೆ ಬೇಕಾದಷ್ಟನ್ನು ಮಾತ್ರ ತೆಗೆದಿಟ್ಟು, ಉಳಿದ ತರಕಾರಿಗಳನ್ನು ಪ್ಲಾಸ್ಟಿಕ್ ಕವರ್ ಸಮೇತ ಫ್ರಿಡ್ಜ್ ನಲ್ಲಿ ಇಟ್ಟುಬಿಡುವರು
ನಮ್ಮೆಲ್ಲರ ಉದ್ದೇಶ ಏನೆಂದ್ರೆ ಮಾರುಕಟ್ಟೆಯಿಂದ ತಂದು ಬಳಕೆ ಮಾಡಿ ಉಳಿದಿರುವ ತರಕಾರಿಗಳು ಅಥವಾ ಹಣ್ಣುಗಳು ಬೇಗನೇ ಹಾಳಾಗಬಾರದು ಹಾಗೂ ಹೆಚ್ಚಿನ ದಿನಗಳವರೆಗೆ ಬಳಕೆಗೆ ಬರಬೇಕು ಎನ್ನುವ ಆಸೆ ಮನದಲ್ಲಿರುತ್ತದೆ. ಯಾಕೆಂದ್ರೆ ಹಣ್ಣು ತರಕಾರಿಯ ಬೆಲೆ ಗಗನಕ್ಕೆ ಏರಿದೆ! ಆದರೆ ಎಡವಟ್ಟು ಇಲ್ಲಿಯೇ ಆಗುವುದು, ಅದು ಏನೆಂಬುದನ್ನು ನೋಡೋಣ.
ಆದರೆ ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ನಮ್ಮಲ್ಲಿ ಬಹುತೇಕ ಜನರು ಮಾರ್ಕೆಟ್ ನಿಂದ ತಂದಿರುವ ಹಣ್ಣು ತರಕಾರಿಗಳನ್ನು ಪ್ಲಾಸ್ಟಿಕ್ ಇಲ್ಲಾಂದರೆ ಪಾಲಿಥಿನ್ ಚೀಲಗಳಲ್ಲಿ ಸಂಗ್ರಹಿಸಿ ವಾರಗಳವರೆಗೆ ರೆಫ್ರಿಜರೇಟರ್ನಲ್ಲಿ ಸಂಗ್ರಹಿ ಸುತ್ತಾರೆ.
ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ತುಂಬಾನೇ ಅಪಾಯ ಎಂದು ತಜ್ಞರು ಸಲಹೆ ನೀಡುತ್ತಾರೆ. ಕೆಲವೊಮ್ಮೆ ನಾವು ತಿಳಿಯದೆಯೋ ಮಾಡುವಂತಹ ಸಣ್ಣ ಪುಟ್ಟ ತಪ್ಪುಗಳು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಯಾಕೆಂದ್ರೆ ನಾವು ಪಾಲಿಥಿನ್ನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸುತ್ತಿ ರೆಫ್ರಿಜರೇಟರ್ನಲ್ಲಿ ಇಟ್ಟು ಆಮೇಲೆ ನಮಗೆ ಬೇಕಾದಾಗಲೆಲ್ಲಾ ಬಳಕೆ ಮಾಡುವುದರಿಂದ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆದೆಯಂತೆ!
ಪಾಲಿಥಿಲೀನ್ ನಲ್ಲಿ ಕಂಡುಬರುವ ರಾಸಾಯನಿಕಗಳು ಅಂಶಗಳು
• ಪಾಲಿಥಿಲೀನ್ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಅಂಶಗಳು ಕಂಡುಬರುವುದರಿಂದ, ಇವು ಹಣ್ಣು ಹಾಗೂ ತರಕಾರಿಗಳಿಗೆ ಸೇರಿಕೊಳ್ಳುತ್ತವೆ. ಇಂತಹ ರಾಸಾಯನಿಕಗಳು ಆರೋಗ್ಯಕ್ಕೆ ತುಂಬಾನೇ ಹಾನಿ ಕಾರಕವಾಗಬಹುದು.
• ಪಾಲಿಥಿಲೀನ್ ಪ್ಲಾಸ್ಟಿಕ್ ಚೀಲಗಳನ್ನು ತಯಾರಿಕೆಯಲ್ಲಿ ಬಳಸುವ ಅನೇಕ ಬಗೆಯ ರಾಸಾಯನಿಕ ಅಂಶಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ.
• ಪ್ರಮುಖವಾಗಿ ಇವುಗಳನ್ನು ತಯಾರಿಸುವಾಗ ಬಳಸುವ ಬಿಸ್ಫೆನಾಲ್-ಎ (ಬಿಪಿಎ) ಮತ್ತು ಥಾಲೇಟ್ಗಳಂತಹ ರಾಸಾಯನಿಕ ಅಂಶಗಳು, ಹಣ್ಣು ತರಕಾರಿಗಳ ಜೊತೆಗೆ ಬಹಳ ಬೇಗನೇ ಬೆರೆತುಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ!
• ಯಾವಾಗ ನೀವು ಇಂತಹ ಕವರ್ ನಲ್ಲಿ ಸಂಗ್ರಹಿಸಿರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುತ್ತೀರೋ ಅಂತಹ ಸಮಯದಲ್ಲಿ ಈ ರಾಸಾಯನಿಕಗಳು ನೇರವಾಗಿ ಹೊಟ್ಟೆಗೆ ಹೋಗುತ್ತವೆ,
• ಇದರಿಂದ ಜೀರ್ಣಕಾರಿ ಸಮಸ್ಯೆ ಕಾಣಿಸಿಕೊಳ್ಳುವುದರ ಜೊತೆಗೆ ಹೊಟ್ಟೆಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಗಳು ಇರುತ್ತವೆ
ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆ
ಮಾರುಕಟ್ಟೆಯಿಂದ ತಂದಿರುವ ಹಣ್ಣು ತರಕಾರಿಗಳನ್ನು ಪ್ಲಾಸ್ಟಿಕ್ ಕವರ್ಗಳಿಂದ ತೆಗೆದು, ಸ್ವಲ್ಪ ಸಮಯದವರೆಗೆ ಹೊರಗಡೆ ಇಡಬೇಕು. ಆದರೆ ನಮ್ಮಲ್ಲಿ ಹೆಚ್ಚಿನ ವರು ಪ್ಲಾಸ್ಟಿಕ್ ಚೀಲದಲ್ಲಿರುವ ತರಕಾರಿಗಳನ್ನು ನೇರವಾಗಿ ಫ್ರಿಡ್ಜ್ನಲ್ಲಿ ಇಡು ವುದು ಸಾಮಾನ್ಯ. ಇಲ್ಲಿಯೇ ಎಡವಟ್ಟು ಆಗುವುದು.
ಇಂತಹ ಸಂದರ್ಭದಲ್ಲಿ ಪ್ಲಾಸ್ಟಿಕ್ ಕವರ್ಗಳಲ್ಲಿ ಸರಿಯಾಗಿ ಗಾಳಿಯ ಪ್ರವೇಶ ಇಲ್ಲದಿರುವುದರಿಂದ, ಕವರ್ ನಲ್ಲಿಯೇ ತೇವಾಂಶ ಸಂಗ್ರಹವಾಗಿ ಬಿಡುತ್ತದೆ, ಕೊನೆಗೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗಬಹುದು. ಈ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹಣ್ಣುಗಳು ಮತ್ತು ತರಕಾರಿಗಳ ಪೌಷ್ಟಿ ಕಾಂಶಗಳನ್ನು ಹಾಳು ಮಾಡುವುದರ ಜೊತೆಗೆ ಆರೋಗ್ಯಕ್ಕೂ ಹಾನಿ ಉಂಟು ಮಾಡಬಹುದು.
ವಿಟಮಿನ್ಸ್ ಮತ್ತು ಖನಿಜಾಂಶಗಳ ಕೊರತೆಗಳು
ಪಾಲಿಥಿನ್ನಲ್ಲಿ ಅಥವಾ ಪ್ಲಾಸ್ಟಿಕ್ ಕವರ್ಗಳಲ್ಲಿ ಹಣ್ಣುಗಳು ಮತ್ತು ತರಕಾರಿ ಗಳನ್ನು ಸುತ್ತಿ, ನೇರವಾಗಿ ಫ್ರಿಡ್ಜ್ನಲ್ಲಿ ಇಟ್ಟುಬಿಡುವುದರಿಂದ ಇವುಗಳ ಪೌಷ್ಟಿಕ ಮೌಲ್ಯವು ಕಡಿಮೆ ಆಗಿಬಿಡುತ್ತದೆ. ಪ್ರಮುಖವಾಗಿ ವಿಟಮಿನ್ಸ್ ಮತ್ತು ಖನಿಜಾಂಶ ಗಳು ಕಡಿಮೆಯಾಗಿ ಬಿಡುತ್ತದೆ.
ಅದರಲ್ಲೂ ಮುಖ್ಯವಾಗಿ ತರಕಾರಿಗಳನ್ನು ಪ್ಲಾಸ್ಟಿಕ್ ಕವರ್ಗಳಲ್ಲಿ ಸುತ್ತಿ ರೆಫ್ರಿಜರೇಟರ್ನಲ್ಲಿ ಹಲವಾರು ದಿನಗಳವರೆಗೆ ಸಂಗ್ರಹಿಸಿದರೆ, ಅವುಗಳ ಪೌಷ್ಟಿ ಕಾಂಶದ ಮೌಲ್ಯವು ಕಳೆದುಹೋಗುತ್ತದೆ
ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ!
ಪಾಲಿಥಿನ್ ಪ್ಲಾಸ್ಟಿಕ್ ಕವರ್ಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಹಲವಾರು ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಕವರ್ಗಳಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸುತ್ತಿ ಇಟ್ಟುಕೊಳ್ಳು ವುದರಿಂದ ಹಣ್ಣುಗಳು ಮತ್ತು ತರಕಾರಿಗಳು ಇಂತಹ ರಾಸಾಯನಿಕ ಗಳನ್ನು ಹೀರಲ್ಪಡುತ್ತವೆ, ಇದರ ಪರಿಣಾಮ ನೇರವಾಗಿ ನಮ್ಮ ಆರೋಗ್ಯದ ಮೇಲೆ ಬೀಳುತ್ತದೆ.
ಆದ್ದರಿಂದ, ಹಣ್ಣುಗಳು ಮತ್ತು ತರಕಾರಿಗಳನ್ನು ಯಾವಾಗಲೂ ರೆಫ್ರಿಜರೇಟರ್ ನಲ್ಲಿ ಒಂದು ಪಾತ್ರೆಯಲ್ಲಿ ಇಟ್ಟು ಸಂಗ್ರಹಿಸಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕವರ್ಗಳಲ್ಲಿ ಅಥವಾ ಪಾಲಿಥಿನ್ನಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸುತ್ತಿ, ನೇರವಾಗಿ ಫ್ರಿಡ್ಜ್ನಲ್ಲಿ ಇಟ್ಟುಕೊಳ್ಳಬಾರದು ಬದಲಾಗಿ, ನೀವು ಹಣ್ಣುಗಳು ಮತ್ತು ತರಕಾರಿಗಳನ್ನು ಸ್ವಚ್ಛವಾದ, ಒಣ ಪಾತ್ರೆಯಲ್ಲಿ ಸಂಗ್ರಹಿಸಬಹುದು ಇಲ್ಲಾಂದ್ರೆ ಹಣ್ಣುಗಳು ಮತ್ತು ತರಕಾರಿಗಳನ್ನು ಕಾಗದದ ಚೀಲ ಅಥವಾ ಸೆಣಬಿನ ಚೀಲದಲ್ಲಿಯೂ ಸಂಗ್ರಹಿಸಬಹುದು.
ತರಕಾರಿಗಳನ್ನು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಲು ಸರಿಯಾದ ಮಾರ್ಗ
• ಮೊದಲು ಅವುಗಳನ್ನು ಪ್ಲಾಸ್ಟಿಕ್ ಚೀಲದಿಂದ ತೆಗೆದು ಸ್ವಲ್ಪ ಸಮಯದ ವರೆಗೆ ಗಾಳಿಯಲ್ಲಿ ಒಣಗಲು ಬಿಡುವುದು. ತರಕಾರಿಗಳನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಚೀಲಗಳ ಬದಲಿಗೆ ಬಟ್ಟೆ ಅಥವಾ ಜಾಲರಿಯ ಚೀಲಗಳು (Mesh bags) ಬಳಸುವುದು ಉತ್ತಮ.
• ಎಲೆಗಳ ಹಸಿರು ತರಕಾರಿಗಳನ್ನು ಕಾಗದದಲ್ಲಿ ಸುತ್ತಿ ಇಡಬಹುದು. ಇದು ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.
• ತೇವಾಂಶ ಇರುವ ತರಕಾರಿಗಳನ್ನು ರೆಫ್ರಿಜರೇಟರ್ನಲ್ಲಿ ಇಡುವುದರಿಂದ ಶಿಲೀಂಧ್ರ ಉಂಟಾಗುತ್ತದೆ, ಆದ್ದರಿಂದ ಇಂತಹ ತರಕಾರಿಗಳನ್ನು ರೆಫ್ರಿಜರೇಟರ್ನಲ್ಲಿ ಇಟ್ಟುಕೊಳ್ಳಬೇಡಿ .
• ಶಿಲೀಂಧ್ರ-ಸೋಂಕಿತ ತರಕಾರಿಗಳನ್ನು ಸೇವಿಸುವುದರಿಂದ ಅನೇಕ ರೀತಿಯ ಸೋಂಕುಗಳು ಉಂಟಾಗಬಹುದು ಎಂಬುದನ್ನು ನೆನಪಿನಲ್ಲಿಡಿ.
ಈ ವಿಚಾರ ಗೊತ್ತಿರಲಿ
ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಲಾಗಿರುವ ಹಣ್ಣುಗಳು ಮತ್ತು ತರಕಾರಿ ಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸುವುದರಿಂದ ಗಾಳಿಯು ಅವುಗಳನ್ನು ತಲುಪು ವುದನ್ನು ತಡೆಯುತ್ತದೆ, ಇದರಿಂದಾಗಿ ಅವು ಬೇಗನೆ ಹಾಳಾಗುತ್ತವೆ.
ಆದಷ್ಟು ತೇವಾಂಶ ಹೀರಿಕೊಳ್ಳುವ ಹಣ್ಣು ತರಕಾರಿಗಳನ್ನು ರೆಫ್ರಿಜರೇಟರ್ ನಲ್ಲಿ ಇಟ್ಟುಕೊಳ್ಳಬೇಡಿ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಸಂಗತಿ ಏನೆಂದರೆ ಪ್ಲಾಸ್ಟಿಕ್ ಕವರ್ಗಳಲ್ಲಿ ಅಥವಾ ಜಿಪ್ ಲಾಗ್ ಕವರ್ ನಲ್ಲಿ ಹಣ್ಣು ತರಕಾರಿಗ
ಳನ್ನು ಪ್ಯಾಕ್ ಮಾಡಿ ರೆಫ್ರಿಜರೇಟರ್ ನಲ್ಲಿ ಇರಿಸಿದಾಗ, ಇವುಗಳ ತೇವಾಂಶವು ಕವರ್ ಒಳಗೆ ಹಾಗೆಯೇ ಉಳಿದುಬಿಡುತ್ತದೆ. ಯಾಕೆಂದ್ರೆ ಇಲ್ಲಿ ಗಾಳಿ ಒಳಗೆ ಬರದಂತೆ ಕವರ್ ತಡೆಯುತ್ತವೆ
ಅದರಲ್ಲೂ ನಾವು ತರಕಾರಿಗಳನ್ನು ಮೂರು-ನಾಲ್ಕು ದಿನಗಳವರೆಗೂ ಕೂಡ ಹಾಗೆಯೇ ಇಟ್ಟುಕೊಳ್ಳುವುದರಿಂದ, ಇದರ ತೇವಾಂಶದ ಕಾಣಗಳಿಂದಾಗಿ ಬ್ಯಾಕ್ಟೀ ರಿಯಾ ಮತ್ತು ಶಿಲೀಂಧ್ರಗಳು ಬೇಗನೇ ಬೆಳವಣಿಗೆ ಹೊಂದಿ, ತರಕಾರಿ ಹಣ್ಣುಗಳ ಪೌಷ್ಟಿಕ ಸತ್ವಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಬೇಗನೆ ಹಾಳಾ ಗುವಂತೆ ಮಾಡಿಬಿಡುತ್ತದೆ. ಪಾಲಿಥಿನ್ ಅಥವಾ ಪ್ಲಾಸ್ಟಿಕ್ ಕವರ್ಗಳಲ್ಲಿ ಬಿಸ್ಫೆನಾಲ್-ಎ (ಬಿಪಿಎ) ಮತ್ತು ಥಾಲೇಟ್ ನಂತಹ ಎರಡು ಅಪಾಯಕಾರಿ ರಾಸಾಯನಿಕ ಅಂಶಗಳು ಕಾಣಿಸಿ ಕೊಳ್ಳುತ್ತವೆ. ಹೀಗಾಗಿ ಇಂತಹ ಕವರ್ ಬಳಸಿ ನಾವು ಹಣ್ಣು-ತರಕಾರಿಗಳನ್ನು ರೆಫ್ರಿಜರೇ ಟರ್ನಲ್ಲಿ ಅಥವಾ ಫ್ರಿಡ್ಜ್ ನಲ್ಲಿ ಇರಿಸಿದಾಗ, ಈ ರಾಸಾಯನಿಕಗಳು ಬಹಳ ಬೇಗನೇ ಹಣ್ಣು-ತರಕಾರಿಗಳಿಗೆ ಅಂಟುಕೊಂಡು ಬಿಡುತ್ತವೆ!
ಇನ್ನು ಮುಂದೆ ಪ್ಲಾಸ್ಟಿಕ್ ಅಥವಾ ಜಿಪ್ ಲಾಕ್ ಕವರ್ಗಳ ಬಳಸುವ ಬದಲು ಪೇಪರ್ ಬ್ಯಾಗ್ ಅಥವಾ ಸಣ್ಣಗೆ ರಂಧ್ರಗಳಿರುವ ಜಾಲರಿ ಚೀಲಗಳನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ.
ಇನ್ನು ಹಣ್ಣುಗಳನ್ನು ಆದಷ್ಟು ಪೇಪರ್ ನಲ್ಲಿ ಸುತ್ತಿ ಇಟ್ಟುಕೊಳ್ಳಿ. ತರಕಾರಿ ಗಳನ್ನು ಆದಷ್ಟು ದಿನಬಳಕೆಗೆ ಬೇಕಾಗುವಷ್ಟನ್ನು ಅಥವಾ ಒಂದೆರಡು ದಿನಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ ಖರೀದಿಸಿ. ಆದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ
ಹಕ್ಕು ನಿರಾಕರಣೆ: ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲೂ ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. Kannada News Time ಇದರ ಸತ್ಯತೆ, ನಿಖರತೆ ಮತ್ತು ಪರಿಣಾಮದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.