ನಮ್ಮ ತಾಳ್ಮೆಗೂ ಮಿತಿಯಿದೆ ಎಂದ ಡಿಕೆ ಸುರೇಶ್‌ ; ಸಕಾರಾತ್ಮಕ ಸಂದೇಶ ಬಂದಿದೆ – ಶಾಸಕರ ಸಭೆ ಬೇಡವೆಂದ ಡಿಕೆ ಶಿವಕುಮಾರ್!

Spread the love

ಕರ್ನಾಟಕ ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ 2 ಮಹತ್ವದ ವಿದ್ಯಮಾನ ನಡೆದಿವೆ. ನಮ್ಮ ತಾಳ್ಮೆಗೂ ಮಿತಿಯಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್‌ ಹೇಳಿದ್ರೆ, ಸಕಾರಾತ್ಮಕ ಸಂದೇಶ ಬಂದಿದೆ, ಶಾಸಕರ ಸಭೆ ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.

ಅಧಿಕಾರ ಹಸ್ತಾಂತರ ವಿಚಾರದಲ್ಲಿ ವಿಳಂಬ ತಂತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ ಸಹೋದರ ಡಿಕೆ ಸುರೇಶ್‌ ಗರಂ ಆಗಿದ್ದು, ‘ಮಾತು ಕೊಟ್ಟಿದ್ದೀರಿ, ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಬಹಳ ಕಷ್ಟ’ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷ ಟಾಂಗ್‌ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ”ಎಲ್ಲದಕ್ಕೂ ಅಂತ್ಯ ಎಂಬುದು ಇದ್ದೇ ಇದೆ. ರಾಜಕೀಯದಲ್ಲಿಅಧಿಕಾರ ಶಾಶ್ವತವಲ್ಲ. ತಾಳ್ಮೆಗೂ ಕೊನೆಯಿದೆ,” ಎನ್ನುವ ಮೂಲಕ ಇನ್ನು ಕಾಯಲು ಸಿದ್ಧರಿಲ್ಲಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. ‘ಡಿಕೆ ಶಿವಕುಮಾರ್‌ ಪಕ್ಷಕ್ಕೆ ನಿಷ್ಠರಾಗಿದ್ದಾರೆಯೇ ಹೊರತು ವ್ಯಕ್ತಿಗಲ್ಲ. ಕೆಲವರು ವ್ಯಕ್ತಿಗೆ ನಿಷ್ಠರಾಗಿದ್ದಾರೆ. ಅವರು ಅಧಿಕಾರಕ್ಕಾಗಿಯೇ ಇರುತ್ತಾರೆ. ಡಿಕೆಶಿ ಅಧಿಕಾರದಲ್ಲಿಇದ್ದಾಗ, ಇಲ್ಲದಿದ್ದಾಗ ಎಲ್ಲ ರೀತಿಯ ನೋವು, ಕಷ್ಟಗಳನ್ನು ಪಕ್ಷದೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿದ್ದಾರೆ,” ಎಂದು ಹೇಳಿದರು.

ಬಿಟ್ಟುಕೊಡಿ ಅನ್ನೋದು ಕಷ್ಟ

”ರಾಜಕಾರಣದಲ್ಲಿನಂಬಿಕೆ ಬಹಳ ಮುಖ್ಯ. ಆದರೆ, ಪಂಚಾಯಿತಿ ಚೇರ್ಮನ್‌ಗಳೇ ತಮ್ಮ ಸ್ಥಾನ ಬಿಡಲು ಬಯಸುವುದಿಲ್ಲ. ಅವಕಾಶ ಸಿಕ್ಕ ಬಳಿಕ ಬಿಟ್ಟುಕೊಡಲು ನಾನಾ ನೆಪ ಹುಡುಕುತ್ತಾರೆ. ಶಿವಕುಮಾರ್‌ ಚಿಕ್ಕ ವಯಸ್ಸಿನಿಂದ ಇದೆಲ್ಲವನ್ನು ನೋಡಿಕೊಂಡು ಬಂದಿದ್ದಾರೆ,” ಎಂದು ಸುರೇಶ್‌ ಹೇಳಿದರು.

ಮಾರ್ಚ್ ಅಂತ್ಯಕ್ಕೆ ಅಧಿಕಾರ ಹಸ್ತಾಂತರ ಆಗಬಹುದೇ ಎಂಬ ಪ್ರಶ್ನೆ ಮತ್ತೊಮ್ಮೆ ಎದುರಾದಾಗ, ”ನಾನು ಸಿಎಂ ವಿಚಾರವಾಗಿ ಹೇಳುತ್ತೇನೆ ಎಂದು ಭಾವಿಸಬೇಡಿ. ಹಳ್ಳಿಗಳಲ್ಲಿಹೇಳುವ ನೆಪಗಳನ್ನು ಹೇಳುತ್ತಿದ್ದೇನೆ. ನಮ್ಮ ಊರಿನಲ್ಲಿನಡೆಯುವುದರ ಬಗ್ಗೆ ಹೇಳಿದೆ ಅಷ್ಟೇ,” ಎಂದು ಸ್ಪಷ್ಟಪಡಿಸಿದರು.

WhatsApp Group Join Now

ಎಲ್ಲದಕ್ಕೂ ಅಂತ್ಯ

ಅಧಿಕಾರ ಹಂಚಿಕೆಗಾಗಿ ನೀವು ಎರಡು ವರ್ಷಗಳಿಂದ ಕಾಯುತ್ತಿದ್ದೀರಿ ಎಂಬ ಪ್ರಶ್ನೆಗೆ ”ಭಗವಂತನ ಇಚ್ಛೆ, ಏನೇನು ತೀರ್ಮಾನವಾಗುತ್ತದೋ ಕಾದು ನೋಡೋಣ, ಎಲ್ಲದಕ್ಕೂ ಅಂತ್ಯ ಇದ್ದೇ ಇರುತ್ತದೆ,” ಎಂದು ತಿಳಿಸಿದರು. ”ತಾಳ್ಮೆಯಿಂದ ಇರಲು ಪಕ್ಷ ಸೂಚಿಸಿದೆ. ರಾಹುಲ್‌ ಗಾಂಧಿ ಅವರನ್ನು ಮೈಸೂರಿನಲ್ಲಿಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಣ್ಣನಿಗೆ ಭರವಸೆ ನೀಡಿದ್ದಾರೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಗುರಿಯೊಂದಿಗೆ ಪಕ್ಷದ ಆದೇಶಕ್ಕಾಗಿ ಅಧಿಣ್ಣ ಕಾಯುತ್ತಿದ್ದಾರೆ,” ಎಂದು ಹೇಳಿದರು.

ಅಧಿಕಾರ ಸುಲಭವಲ್ಲ

”ಅಧಿಕಾರ ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ಹಣೆಯಲ್ಲಿಬರೆದಿದ್ದರೆ ನಮ್ಮ ಅಣ್ಣ ಸಿಎಂ ಆಗುತ್ತಾರೆ. ಈ ಮೊದಲು ಹೇಳಿದ್ದೆ. ಮುಖ್ಯಮಂತ್ರಿ ಹುದ್ದೆ ಸುಲಭವಾಗಿ ಸಿಗುವಂಥದ್ದು ಅಲ್ಲವೇ ಅಲ್ಲ. ಶಿವಕುಮಾರ್‌ ಪಕ್ಷದ ಅಧ್ಯಕ್ಷರೂ ಆಗಿದ್ದು, ಶಿಸ್ತು ಪಾಲಿಸುತ್ತಿದ್ದಾರೆ,” ಎಂದು ತಿಳಿಸಿದರು.

ಡಿಸಿಎಂ ಬೆಂಬಲಿಗರ ಸಭೆಗೆ ಬ್ರೇಕ್‌

ಅಧಿಕಾರ ಹಸ್ತಾಂತರ ವಿಚಾರದಲ್ಲಿಹೈಕಮಾಂಡ್‌ ಮೌನದಿಂದ ಅಸಮಾಧಾನಗೊಂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಬೆಂಬಲಿಗ ಶಾಸಕರು ಬುಧವಾರ (ಜ.21) ಸಭೆ ನಡೆಸುವ ಉದ್ದೇಶಕ್ಕೆ ಬ್ರೇಕ್‌ ಬಿದ್ದಿದೆ. ಎಚ್‌.ಸಿ.ಬಾಲಕೃಷ್ಣ ನೇತೃತ್ವದಲ್ಲಿರಾಜ್ಯದ ನಾನಾ ಭಾಗಗಳ ಸುಮಾರು 45 ಶಾಸಕರನ್ನು ಒಟ್ಟುಗೂಡಿಸಿ ಒತ್ತಡ ತಂತ್ರ ಹೆಣೆಯಲು ಸಭೆ ನಡೆಸುವುದು ಏರ್ಪಾಟಾಗಿತ್ತು. ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ಮುನ್ನ ಬುಧವಾರ ಸಂಜೆ ಬೆಂಗಳೂರಿನಲ್ಲಿಈ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಈ ಪ್ರಯತ್ನಕ್ಕೆ ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಬ್ರೇಕ್‌ ಹಾಕಿದ್ದಾರೆ.

ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕೆ.ಸಿ.ವೇಣುಗೋಪಾಲ್‌ ಅವರಿಂದ ಸಕಾರಾತ್ಮಕ ಸಂದೇಶ ಬಂದಿದ್ದು, ಸದ್ಯಕ್ಕೆ ಯಾವುದೇ ಸಭೆ, ಬಹಿರಂಗ ಹೇಳಿಕೆಗಳು ಬೇಡ. ಅಧಿವೇಶನ ಸಂದರ್ಭದಲ್ಲಿಇದರಿಂದ ತಪ್ಪು ಸಂದೇಶ ಹೋಗುತ್ತದೆ ಎಂದು ಬೆಂಬಲಿಗ ಶಾಸಕರಿಗೆ ಸಲಹೆ ನೀಡಿ ಡಿಸಿಎಂ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ವರಿಷ್ಠರು ಕರೆದರೆ ದಿಲ್ಲಿಗೆ

ಈ ನಡುವೆ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ”ಎಐಸಿಸಿ ವರಿಷ್ಠ ನಾಯಕರು ಕರೆ ಮಾಡಿದರೆ ದಿಲ್ಲಿಗೆ ತೆರಳುತ್ತೇನೆ,” ಎಂದು ಹೇಳಿದ್ದಾರೆ.

WhatsApp Group Join Now

Spread the love

Leave a Reply