ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra ) ವಿರುದ್ಧ ಡಿಸಿಎಂ ಡಿಕೆಶಿ (Dkshivakumar) ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರಗೆ ರಾಜಕೀಯ ಅನುಭವ ಇಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಆರೋಪಿಸಿರೋ ವಿಜಯೇಂದ್ರ ಮಾತಿಗೆ ಡಿಸಿಎಂ ಡಿಕೆಶಿ ಗರಂ ಆದರು. ವಿಜಯೇಂದ್ರಗೆ ರಾಜಕೀಯ ಅನುಭವ ಇಲ್ಲ. ಆತ ಕಲೆಕ್ಷನ್ ಕಿಂಗ್ ಹೀಗಾಗಿಯೇ ಈ ರೀತಿ ಮಾತಾಡ್ತಿದ್ದಾನೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾತಾಡಿದ ಅವರು, ಯಾವ ಖಜಾನೆಯೂ ಖಾಲಿಯಾಗಿಲ್ಲ. ವಿಜಯೇಂದ್ರ ಸುಮ್ಮನೆ ಮಾತಾಡ್ತಿದ್ದಾರೆ. ಅಂಕಿ ಅಂಶಗಳಿದ್ದರೆ ಬಂದು ಸದನದಲ್ಲಿ ಆರೋಪ ಮಾಡಲಿ. ಅದನ್ನು ಬಿಟ್ಟು ಎಲ್ಲೋ ಓಡಿ ಹೋಗಿ ಆರೋಪ ಮಾಡೋದನ್ನು ನಿಲ್ಲಿಸಲಿ. ಇವತ್ತು ಅಪ್ಪ ಯಡಿಯೂರಪ್ಪ ಹೆಸರೇಳಿ ಕಲೆಕ್ಷನ್ ಮಾಡ್ತಿರೋದು ವಿಜಯೇಂದ್ರ, ಹೆಚ್ಚು ಮಾತಾಡಿದರೆ ಎಲ್ಲವನ್ನೂ ಬಿಚ್ಚಿಡುತ್ತೇವೆ ಎಂದು ಹೇಳಿದರು.
ಚಳಿಗಾಲದ ಅಧಿವೇಶನ ಯಶಸ್ವಿಯಾಗಿ ನಡೆದಿದೆ. ನಾಳೆ ಮುಕ್ತಾಯವಾಗುತ್ತಿದ್ದು ಮೆಕ್ಕೆ ಜೋಳ, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸೋ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ ಎಂದು ಡಿಕೆಶಿ ಹೇಳಿದರು.
ವಿಜಯೇಂದ್ರ ಕಲೆಕ್ಷನ್ ಕಿಂಗ್, ರಾಜಕೀಯ ಅನುಭವ ಇಲ್ಲ : ಡಿಸಿಎಂ ಡಿ.ಕೆ ಶಿವಕುಮಾರ್
WhatsApp Group
Join Now