ರಾಜ್ಯ ಕಾಂಗ್ರೆಸ್ಸಿನ ಕುರ್ಚಿ ಕದನ ತಾರಕಕ್ಕೇರಿದೆ. ಸಿಎಂ ಪಟ್ಟ ಕೇಳಲು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ. ಇದ್ರ ಮಧ್ಯೆ ಹೈಕಮಾಂಡ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ‘ರಾಹುಲ್ ಗಾಂಧಿ ಪ್ರಧಾನಿ ಮಾಡೋದೇ ಪ್ರಿಯಾಂಕಾ ಗಾಂಧಿ ಆಸೆ.. ಅವ್ರ ಆಸೆಯೇ ನಮ್ ಆಸೆ. ಪ್ರಿಯಾಂಕಾ ಗಾಂಧಿಯವರ ಏಕೈಕ ಧ್ಯೇಯ ರಾಹುಲ್ ಗಾಂಧಿಯವರನ್ನು ದೇಶದ ಪ್ರಧಾನಿಯಾಗಿ ಮಾಡುವುದು’ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ‘ಪ್ರಿಯಾಂಕಾ ಗಾಂಧಿ ಪ್ರಧಾನಿ ಆದರೆ, ಬಾಂಗ್ಲಾದೇಶದ ವಿರುದ್ಧ ಸಮರ ಸಾರುತ್ತಾರೆ’ ಎಂದು ಹೇಳಿದ್ದರು.
ಇಮ್ರಾನ್ ಮಸೂದ್ ಹೇಳಿಕೆ ಬಗ್ಗೆ ಮಾಧ್ಯಮಗಳು ಡಿಕೆ ಶಿವಕುಮಾರ್ರನ್ನು ಪ್ರಶ್ನೆ ಮಾಡಿದರು. ‘ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಡಿರೋ ಪಕ್ಷ. ರಾಹುಲ್ ಗಾಂಧಿ ನಮ್ಮ ಪ್ರಧಾನಿ ಆಗಬೇಕು ಎಂಬುದು ನಮ್ಮೆಲ್ಲರ ಆಸೆ. ಪ್ರಿಯಾಂಕಾ ಗಾಂಧಿ ಕೂಡಾ ಅದೇ ಆಸೆ ಹೊಂದಿದ್ದಾರೆ’ ಎಂದು ಡಿಕೆ ಶಿವಕುಮಾರ್ ಹೇಳಿದರು.
‘ನನ್ನ ನಾಯಕರು ಎಐಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ. ಅವರು ಏನು ನಿರ್ಧಾರ ಮಾಡಿದರೂ ಅದನ್ನು ಸ್ವೀಕರಿಸುತ್ತೇನೆ. ಯಾವ ಹೆಸರುಗಳನ್ನೂ ಊಹಿಸಬಾರದು. ಯಾವುದೇ ದಿನ ಕಾಂಗ್ರೆಸ್ ಪಕ್ಷ ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಪರ ಕಾಂಗ್ರೆಸ್ಗೆ ಒಲವು..!
ರಾಹುಲ್ ಗಾಂಧಿಯನ್ನು ರೀಲಾಂಚ್ ಮಾಡಿ ಮಾಡಿ ಕಾಂಗ್ರೆಸ್ ಬೇಸತ್ತಿದೆ. ಕೆಲ ಬಿಜೆಪಿಗರಂತೂ ರಾಹುಲ್ ಗಾಂಧಿ ನಮ್ಮ ಏಜೆಂಟ್ ಅಂತ ಕಾಮಿಡಿ ಮಾಡ್ತಾರೆ. ಅದರಲ್ಲೂ ಕಳೆದ ಬಿಹಾರ ವಿಧಾನಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ ಬಿಹಾರ ಯಾತ್ರೆ ಮಾಡಿದ್ದರು. ಬಿಹಾರದ 25 ಜಿಲ್ಲೆಗಳಲ್ಲಿ 110 ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಯಾತ್ರೆ ಮಾಡಿದ್ದರು. ಆದ್ರೆ ಅಷ್ಟೂ ಸ್ಥಾನಗಳಲ್ಲಿ ಪಕ್ಷ ಸೋತು ಸುಣ್ಣವಾಗಿತ್ತು.
ರಾಹುಲ್ ಗಾಂಧಿ ನಾಯಕತ್ವದಲ್ಲಿ ಸೋತು ಸುಣ್ಣವಾಗಿರೋ ಕಾಂಗ್ರೆಸ್, ಹೊಸ ನಾಯಕತ್ವದ ಕಡೆ ಮುಖ ಮಾಡುತ್ತಿರುವಂತೆ ಕಾಣ್ತಿದೆ. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿಯಾಗಿ ಮಾಡೇ ಮಾಡ್ತೀವಿ. ಇಂದಿರಾ ಗಾಂಧಿಯಂತೆ ಹೇಗೆ ಸೇಡು ತೀರಿಸಿಕೊಳ್ಳುತ್ತಾರೆ ಅಂತ ನೋಡ್ತಾ ಇರಿ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹೇಳಿದ್ದಾರೆ.
‘ಪ್ರಿಯಾಂಕಾ ಗಾಂಧಿ ಸದ್ಯಕ್ಕೆ ಪ್ರಧಾನಮಂತ್ರಿ ಅಲ್ಲ. ಅವರನ್ನು ಪ್ರಧಾನಮಂತ್ರಿ ಮಾಡಿ ನೋಡಿ. ಇಂದಿರಾ ಗಾಂಧಿಯಂತೆ ಹೇಗೆ ಸೇಡು ತೀರಿಸಿಕೊಳ್ಳುತ್ತಾರೆ ಅಂತ ನೋಡ್ತಾ ಇರಿ. ಆಕೆ ಪ್ರಿಯಾಂಕಾ ಗಾಂಧಿ. ಆಕೆಯ ಹೆಸರಿನ ಮುಂದೆ ಗಾಂಧಿ ಇದೆ. ಇಂದಿರಾ ಗಾಂಧಿ ಮೊಮ್ಮಗಳು. ಅವರು ಪಾಕಿಸ್ತಾನಕ್ಕೆ ತುಂಬಾ ಹಾನಿಯನ್ನುಂಟು ಮಾಡಿದ್ದಾರೆ. ಆ ಗಾಯಗಳು ಇನ್ನೂ ವಾಸಿಯಾಗಿಲ್ಲ. ಪ್ರಧಾನಿಯಾಗಿ ಮಾಡಿದರೆ ಆಕೆ ಹೇಗೆ ಪ್ರತೀಕಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ನೋಡಿ, ನಿಮಗೆ ಆ ಎದೆಗಾರಿಕೆ ಇಲ್ಲ’ ಎಂದು ಮಸೂದ್ ಹೇಳಿದ್ದಾರೆ
‘ರಾಹುಲ್ ಗಾಂಧಿ ಪ್ರಧಾನಿ ಮಾಡೋದೇ ಪ್ರಿಯಾಂಕಾ ಆಸೆ’ : ‘ಅವ್ರ ಆಸೆಯೇ ನಮ್ ಆಸೆ’ ಎಂದ ಕನಕಪುರ ಬಂಡೆ
WhatsApp Group
Join Now