Dina Bhavishya : 27 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಇಂದು ನೀವು ಉತ್ಸಾಹದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ನಿಮ್ಮ ಕುಟುಂಬ ವಾತಾವರಣವು ಖುಷಿಯಿಂದ ಕೂಡಿರುತ್ತದೆ. ಏನೇ ಆದರೂ, ಮಧ್ಯಾಹ್ನದ ಬಳಿಕ, ನಿಮ್ಮ ಆರೋಗ್ಯದಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು.ನಿಮ್ಮ ಮನೆಮಂದಿಯೊಂದಿಗೆ ಮಾತುಕತೆ ನಡೆಸುವ ಸಂಭಾವ್ಯತೆಯಿದೆ.

ಮಿತಿಮೀರಿ ತಿನ್ನಬೇಡಿ. ಜನರೊಂದಿಗೆ ದುರಾಕ್ರಮಣಕಾರಿ ಪ್ರವೃತ್ತಿಯನ್ನು ತಪ್ಪಿಸಲು ನಿಮ್ಮ ಮಾತಿನ ಮೇಲೆ ಹಿಡಿತವಿರಿಸಿ. ನಿಮ್ಮ ಉತ್ಸಾಹ ಮತ್ತು ಚೈತನ್ಯವನ್ನು ಕಾಯ್ದುಕೊಳ್ಳಲು ವೃತ್ತಿಯಲ್ಲಿ ಮತ್ತು ಸಾಮಾಜಿಕವಾಗಿ ನಿಷ್ಪಕ್ಷಪಾತ ದೃಷ್ಟಿಯನ್ನು ಕಾಯ್ದುಕೊಳ್ಳುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.

ವೃಷಭ :-

ಇಂದು ನಿಮ್ಮ ಆಲೋಚನೆಗಳನ್ನು ವಿನಿಮಯಗೊಳಿಸುವ ಮನಸ್ಥಿತಿಯಲ್ಲಿರುವುದರಿಂದ ಮನೆಯಲ್ಲಿನ ಮಾತುಕತೆಗಳು ಮೃದುವಾಗಿ ಸಾಗಲಿ. ನಿಮ್ಮ ಮನೆಯನ್ನು ನವೀಕರಿಸಲು ಹಾಗೂ ಸೌಂದರ್ಯವನ್ನು ವೃದ್ಧಿಗೊಳಿಸಲು ನೀವು ಇಂದು ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವಿರಿ. ನೀವು ನಿಮ್ಮ ತಾಯಿ ಹಾಗೂ ಕಚೇರಿಯಲ್ಲಿನ ಜನರೊಂದಿಗೆ ಉತ್ತಮ ಸಹಮತವನ್ನು ಆನಂದಿಸುವಿರಿ. ಸಂಜೆಯ ವೇಳೆಗೆ ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವ ಯೋಜನೆಯನ್ನು ನೀವು ರೂಪಿಸಬಹುದು. ಈ ಸಮಾರಂಭದಲ್ಲಿ ನಿಮಗೆ ಅನೇಕ ಮಂದಿಯ ಪರಿಚಯವಾಗಬಹುದು ಮತ್ತು ಭವಿಷ್ಯದಲ್ಲಿ ಇದು ನಿಮಗೆ ಪ್ರಯೋಜನವನ್ನು ಸಾಬೀತುಪಡಿಸಲಿದೆ. ನಿಮ್ಮ ಮಕ್ಕಳೂ ಇಂದು ನಿಮ್ಮ ಸ್ನೇಹಿತರಾಗಲಿದ್ದಾರೆ. ಹಳೆಯ ಜೀನ್ಸ್ ಕಿಸೆಯಲ್ಲಿ ಹಣವಿರುವುದು ಕಂಡುಬರಬಹುದು- ಈ ಮೂಲಕ ಅನಿರೀಕ್ಷಿತ ಧನಲಾಭ ಉಂಟಾಗುತ್ತದೆ.

ಮಿಥುನ :-

ಗಣೇಶ ಹೇಳುವಂತೆ, ವೈಯಕ್ತಿಕ ಹಾಗೂ ವೃತ್ತಿ ನೆಲೆಯಲ್ಲಿ ಈ ದಿನವು ನಿಮಗೆ ಸಾಕಷ್ಟು ಅವಕಾಶಗಳನ್ನು ತರುತ್ತದೆ. ಬಹಳ ಸಮಯದ ನಂತರ, ದೃಢ ಬೌದ್ಧಿಕ ಚರ್ಚೆಗಳಲ್ಲಿ ನಿರ್ಧಾರಕ್ಕೆ ಬರುವಲ್ಲಿ ನೀವು ಗೆಲುವು ಮತ್ತು ತೃಪ್ತಿಯನ್ನು ಹೊಂದುತ್ತೀರಿ. ಇಂದು ನೀವು ಕಾರ್ಯದೊತ್ತಡಕ್ಕೆ ಒಳಗಾಗಬಹುದು.ಆದರೆ, ಇದನ್ನು ಸಂಜೆಯೊಳಗೆ ಯೋಗ್ಯವಾಗಿ ನಿಭಾಯಿಸುತ್ತೀರಿ. ಸ್ನೇಹಿತರನ್ನು ಭೇಟಿಯಾಗುವ ಮೂಲಕ ಅವರೊಂದಿಗೆ ಕಾಫಿ ಹಂಚಿಕೊಳ್ಳುವ ಮೂಲಕ ನಿಮ್ಮ ಒತ್ತಡಗಳಿಂದ ನೆಮ್ಮದಿಯನ್ನು ಕಾಣಿ. ಇಂದು ನೀವು ಸಕ್ರಿಯವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಮಾನವೀಯತೆಯು ಕಾರ್ಯನಿರ್ವಹಿಸುತ್ತದೆ.

ಕರ್ಕಾಟಕ :-

ಇಂದು ನೀವು ಕ್ರಮಬದ್ಧವಾಗಿರುತ್ತೀರಿ ಮತ್ತು ಕೇವಲ ನಿಮ್ಮ ನಿಲುವಿನಲ್ಲಿ ಮಾತ್ರವೇ ಇರುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಏನೇ ಆದರೂ, ನೀವು ಮನೋಧರ್ಮವನ್ನು ಹೊಂದಿರುತ್ತೀರಿ. ಅನಿರೀಕ್ಷಿತ ಕಾರ್ಯಗಳನ್ನು ನೀವು ಇಂದು ಕೈಗೆತ್ತಿಕೊಳ್ಳಬಹುದು ಆದರೆ, ಪರಿಸ್ಥಿತಿಯು ಸೂಕ್ತವಾಗಿಲ್ಲ ಎಂಬುದು ನಿಮಗೆ ನಂತರ ಅರಿವಾಗಬಹುದು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೆಯ ವೇಳೆಗೆ ನೀವು ನಿಮ್ಮ ಮೇಲಾಧಿಕಾರಿಗಳನ್ನು ಚಿಂತೆಗೊಳಿಸಬಹುದು. ಮುಂಜಾನೆಯು ಆಲಸ್ಯದಿಂದ ಕೂಡಿರಬಹುದು ಆದರೆ, ದ್ವಿತೀಯಾರ್ಧದಲ್ಲಿ ನೀವು ಚೈತನ್ಯದಿಂದ ಕೂಡಿರುವಂತೆ ಅನಿಸಬಹುದು. ನಿಮ್ಮ ಮನೆಗೆ ಹೊಸ ರೂಪವನ್ನು ನೀಡುವಲ್ಲಿ ಶಕ್ತರಾಗಲು, ನೀವು ಪೀಠೋಪಕರಣಗಳನ್ನು ಬದಲಾಯಿಸಬಹುದು.

ಸಿಂಹ :-

ಇಂದು ಮುಂಜಾನೆಯ ವೇಳೆ ನೀವು ನಿರಾಸಕ್ತಿ, ನಿತ್ರಾಣ ಹಾಗೂ ಅಹಿತರ ಭಾವನೆಯಿಂದ ಕೂಡಿರಬಹುದು. ಸಮಾಧಾನದಿಂದಿರುವಂತೆ ಮತ್ತು ನಿಮ್ಮ ಕೆಟ್ಟನಡತೆಗಳಿಂದ ಯಾರೊಬ್ಬರನ್ನೂ ಬೇಸರಗೊಳಿಸದಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಗ್ರಹಗತಿಗಳು ಹೆಚ್ಚು ಉಲ್ಲಾಸಕರವಾಗಿರುತ್ತದೆ ಮತ್ತು ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಗಣನೀಯ ವೃದ್ಧಿಯನ್ನು ಕಾಣಬಹುದು. ಮನೆ ಮತ್ತು ಕಚೇರಿಯಲ್ಲಿ ಪರಸ್ಪರ ಚರ್ಚೆಗಳು ಉಂಟಾಗಬಹುದು. ಸಂಜೆಯನ್ನು ನಿಮ್ಮ ಮನೆಮಂದಿಯೊಂದಿಗೆ ಸಂತೋಷದಿಂದ ಕಳೆಯಿರಿ.

ಕನ್ಯಾ :-

ಗಣೇಶನ ಶಕುನದ ಪ್ರಕಾರ ಇಂದು ನಿಮ್ಮ ಗ್ರಹಗತಿಗಳು ದುರ್ಬಲವಾಗಿವೆ. ಪ್ರಯಾಣ ಮತ್ತು ಹೊಸ ಕಾರ್ಯಗಳನ್ನು ಪ್ರಾರಂಭಿಸುವ ನಿಮ್ಮ ಯೋಜನೆಗಳನ್ನು ಸದ್ಯಕ್ಕೆ ಮುಂದೂಡಿ. ಯಾಕೆಂದರೆ, ಈ ದಿನವು ನೀವೆಣಿಸಿದಂತೆ ಸಾಗುವುದಿಲ್ಲ ಮತ್ತು ನೀವು ಅಹಿತಕರ ಭಾವನೆಯನ್ನು ಹೊಂದಬಹುದು. ಯಾವುದೇ ಅಸಂಬದ್ಧ ಮಾತುಗಳನ್ನು ಆಡುವ ಮುನ್ನವೇ ನಿಮ್ಮ ನಾಲಗೆಯನ್ನು ನಿಯಂತ್ರಿಸಿ. ಇಲ್ಲವಾದಲ್ಲಿ ಇವು ನಿಮ್ಮ ಸಹೋದ್ಯೋಗಿಗಳೊಂದಿಗಿನ ಸಹಮತವನ್ನು ಹಾಳುಗೆಡಹಬಹುದು. ಧ್ಯಾನ ಮಾಡಿ ಮತ್ತು ನಿಮ್ಮ ಅವಿಶ್ರಾಂತ ಮನಸ್ಸಿನಿಂದ ವಿರಾಮ ಪಡೆಯಿರಿ.ಸಂಜೆಯ ವೇಳೆ ಧಾರ್ಮಿಕ ಸಮಾರಂಭಗಳ ಭಾಗವಹಿಸುವಿಕೆಯು ನಿಮ್ಮ ದಿನವನ್ನು ಪ್ರಖರವಾಗಿಸುತ್ತದೆ.

ತುಲಾ :-

ಕಾಂತಿಭರಿತ ಮತ್ತು ಉಲ್ಲಾಸಕರ ಮುಂಜಾನೆಯೊಂದಿಗೆ ನೀವು ನಿಮ್ಮ ದಿನವನ್ನು ಪ್ರಾರಂಭಿಸುವಿರಿ. ಏನೇ ಆದರೂ, ಇದೇ ಸ್ಥಿತಿಯು ದೀರ್ಘಸಮಯದವರೆಗೆ ಇರುತ್ತದೆ. ಆಲೋಚನೆಗಳ ಸರಮಾಲೆಯು ನಿಮ್ಮನ್ನು ಹಿಂಬಾಲಿಸುತ್ತದೆ ಮತ್ತು ನಿಮ್ಮನ್ನು ಚಿಂತೆಯಲ್ಲಿರಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಏನನ್ನಾದರೂ ಹೇಳುವ ಮುನ್ನ ಎರಡೆರಡು ಬಾರಿ ಯೋಚಿಸಿ ಇಲ್ಲವಾದಲ್ಲಿ ಇದು ಅನಿರೀಕ್ಷಿತ ಸಂದರ್ಭಗಳಿಗೆ ಹಾದಿಮಾಡಿಕೊಡುತ್ತದೆ. ಎಚ್ಚರದಿಂದಿರಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮೇಲೆ ಕಣ್ಣಿಟ್ಟಿದ್ದಾರ. ಈ ಸಮಯವು ಅನುಕೂಲಕರವಾಗಿರದ ಕಾರಣ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ಹಣಕಾಸು ಲಾಭ ಉಂಟಾಗಬಹುದು. ಪ್ರಯಾಣ ತೆರಳುವಿರಿ.

ವೃಶ್ಚಿಕ :-

ಈ ದಿನಪೂರ್ತಿ ಬೌದ್ಧಿಕ ಚರ್ಚೆಗಳು ಮತ್ತು ಸಾಮಾಜಿಕ ಸಂವಾದಗಳಿರುತ್ತವೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಹೂಡಿಕೆ ಅಥವಾ ಹಣಕಾಸು ಮೂಲಗಳ ಸಿದ್ಧತೆಗೆ ಇದು ಉತ್ತಮ ಸಮಯ. ಸಂಜೆಯ ವೇಳೆ ನಿಮ್ಮ ಅದೃಷ್ಟದ ಸಮಯವು ಪ್ರಾರಂಭಗೊಳ್ಳುತ್ತದೆ ಮತ್ತು ನೀವು ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಖುಷಿ ಹಾಗೂ ಸಂಭ್ರಮದಿಂದ ಕಾಲ ಕಳೆಯುವಿರಿ. ನಿಮ್ಮ ಸ್ನೇಹಿತರಿಗೆ ಸ್ವಾದಿಷ್ಟಕರವಾದ ತಿನಿಸುಗಳನ್ನು ಉಣಬಡಿಸಲು ಇದು ಉತ್ತಮ ಸಮಯ. ಅವರೊಂದಿಗೆ ಸಣ್ಣ ವಿಹಾರವನ್ನು ನೀವು ಕೈಗೊಳ್ಳಬಹುದು. ಈ ಅನುಗ್ರಹಭರಿತ ಸಮಯದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ.

ಧನು :-

ನಿಮ್ಮ ಆರೋಗ್ಯ ನಕ್ಷೆಯು ಇಂದು ದಕ್ಷಿಣಾಭಿಮುಖವಾಗಿ ಸಾಗುತ್ತದೆ, ಆದ್ದರಿಂದ ಜಾಗರೂಕರಾಗಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಕಠಿಣ ಪರಿಶ್ರಮವು ಉತ್ತಮ ಫಲಿತಾಂಶವನ್ನೇ ನೀಡಲಿದೆ. ಏನೇ ಆದರೂ ಇದು ಸ್ವಲ್ಪ ಕಾಲಾವಕಾಶ ಪಡೆಯಬಹುದು. ತಾಳ್ಮೆಯಿಂದಿರಿ ಮತ್ತು ಅಸಮಾಧಾನ ಹೊಂದಬೇಡಿ. ನಿಮ್ಮ ಪ್ರಯಾಣ ಯೋಜನೆಗಳನ್ನು ಮುಂದಿನ ವಾರಕ್ಕೆ ಮುಂದೂಡಿ. ಏನೇ ಆದರೂ, ಮಧ್ಯಾಹ್ನದ ಬಳಿಕ ನಿಮ್ಮ ಗ್ರಹಗತಿಗಳು ಸಕ್ರಿಯಗೊಳ್ಳುತ್ತವೆ. ನಿಮ್ಮ ಆರೋಗ್ಯ, ಹಣಕಾಸು ಅಥವಾ ವಿವಿಧ ವಿಚಾರಗಳಲ್ಲಿನ ನಿಮ್ಮ ಬಾಹ್ಯ ಆಲೋಚನೆಗಳು ಯಾವುದೇ ಇರಲಿ, ಎಲ್ಲವೂ ನಿಮ್ಮಪರವಾಗಿರುತ್ತದೆ ಮತ್ತು ಧನಾತ್ಮಕವಾಗಿರುತ್ತದೆ. ಒಳ್ಳೆಯ ಸಂಗೀತದೊಂದಿಗೆ ಸಂಜೆಯನ್ನು ಆನಂದಿಸಿ.

ಮಕರ :-

ಈ ದಿನವು ನಿಮಗೆ ಕಷ್ಟಕರವಾಗಿರುವುದರಿಂದ ಆಲಸ್ಯ ಬಿಟ್ಟು ಸಿದ್ಧರಾಗಿ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಅತೀ ಭಾವೋದ್ವೇಗಕ್ಕೆ ಒಳಗಾಗುವಿರಿ. ಜನರು ನಿಮ್ಮ ಭಾವನೆಗಳಿಗೆ ನೋವುಂಟುಮಾಡುವ ಸಾಧ್ಯತೆಯಿರುವುದರಿಂದ ಜಾಗರೂಕರಾಗಿರಿ. ತೊಂದರೆ ನೀಡುವಂತಹ ಸನ್ನಿವೇಶಗಳಿಂದ ವಿಶೇಷವಾಗಿ ಕುಟುಂಬದಲ್ಲಿನ ಸಂಘರ್ಷಗಳಿಂದ ದೂರವಿರಿ. ನಿರ್ಧಾರ ಕೈಗೊಳ್ಳುವಲ್ಲಿನ ವಿಳಂಬವು ನಿಮ್ಮ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕಚೇರಿಯ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಲು ನೀವು ಇಂದು ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಇಂದು ಅಪಘಾತದ ಸಂಭಾವ್ಯತೆಯಿರುವುದರಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸಬೇಡಿ.

ಕುಂಭ :-

ಇಂದು ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಲಿರುವುದರಿಂದ ನಿಮ್ಮ ಸಹೋದ್ಯೋಗಿಗಳಿಗೆ ಉತ್ಸಾಹ ತುಂಬಿ. ಏನೇ ಆದರೂ, ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವುದು ಇಂದು ಸೂಕ್ತವಲ್ಲ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಇಂದು ದಿನದ ದ್ವಿತೀಯಾರ್ಧದಲ್ಲಿ ದಿನವು ಉತ್ತಮ ಚಿಹ್ನೆಯನ್ನು ಸೂಚಿಸುವುದಿಲ್ಲ.ಮನೆ ಅಥವಾ ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯವಹರಿಸಲು ಇದು ಉತ್ತಮ ಸಮಯವಲ್ಲ. ವಿದ್ಯಾರ್ಥಿಗಳಿಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಸಾಧಾರಣ ದಿನವಾಗಿರುತ್ತದೆ. ನಿಮ್ಮ ತಾಯಿಯ ಆರೋಗ್ಯವು ನಿಮ್ಮನ್ನು ಚಿಂತೆ ಮತ್ತು ಉದ್ವೇಗದಲ್ಲಿರಿಸುತ್ತದೆ. ಸ್ವಸಹಾಯ ಪುಸ್ತಕಗಳು ನಿಮಗೆ ನೆಮ್ಮದಿಯನ್ನು ನೀಡಬಲ್ಲದು.

ಮೀನ :-

ನಿಮ್ಮ ಗ್ರಹಗತಿಗಳು ಎಷ್ಟು ಸಕ್ರಿಯವಾಗಿರಬೇಕೋ ಅಷ್ಟಿಲ್ಲ. ಅಧಿಕ ಖರ್ಚುವೆಚ್ಚಗಳು ನಿಮ್ಮನ್ನು ಅಸಮಾಧಾನಗೊಳಿಸಲಿವೆ ಆದ್ದರಿಂದ ನಿಮ್ಮ ಕಿಸೆಯತ್ತ ಗಮನವಿರಲಿ. ನಿಮ್ಮ ನಾಲಗೆಯನ್ನು ಹಿಡಿತದಲ್ಲಿರಿಸಿ ಇಲ್ಲವಾದಲ್ಲಿ ಆಕಸ್ಮಿಕ ಪರಿಸ್ಥಿತಿಗಳಿಗೆ ಹಾದಿ ಮಾಡಿಕೊಡುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾದೀತು. ನಿಮ್ಮ ಅಸ್ಪಷ್ಟ ಮನಸ್ಸು ನಿಮ್ಮನ್ನು ಗೊಂದಲದಲ್ಲಿರಿಸುವ ಸಾಧ್ಯತೆಯಿದೆ. ಇಂದು ನೀವು ಉತ್ತಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯದ ಕೊರತೆ ಎದುರಿಸುವಿರಿ.

WhatsApp Group Join Now

Spread the love

Leave a Reply