Dina Bhavishya : 22 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಸ್ನೇಹಿತರೊಂದಿಗೆ ಕಾಲ ಕಳೆಯಲು ಇಂದು ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಬಹುಮಾನ ಮತ್ತು ಉಡುಗೊರೆಗಳನ್ನು ಪಡೆಯುವ ಸಂಭವವಿದೆ. ನೀವು ಅವರನ್ನು ಮನರಂಜಿಸಬಹುದು. ಹೊಸ ಸ್ನೇಹಿತರು ಭವಿಷ್ಯದಲ್ಲಿ ನಿಮಗೆ ಪ್ರಯೋಜನಕಾರಿಯಾಗಲಿದ್ದಾರೆ. ನಿಮ್ಮ ಮಕ್ಕಳು ಕೂಡ ನಿಮ್ಮ ಅದೃಷ್ಟವನ್ನು ವರ್ಧಿಸಲಿದ್ದಾರೆ.

ಆಕರ್ಷಕ ಪ್ರದೇಶಗಳಿಗೆ ನೀವು ಪ್ರವಾಸ ತೆರಳಬಹುದು. ಸರಕಾರ ಸಂಬಂಧಿ ವ್ಯವಹಾರಗಳು ಲಾಭಕರವಾಗಿ ಪೂರ್ಣಗೊಳ್ಳಬಹುದು.

ವೃಷಭ :-

ಈ ದಿನವು ನಿರೀಕ್ಷಿತವಾಗಿ ಶುಭಕರವಾಗಿರುವ ಭರವಸೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊಸ ಯೋಜನೆ ಮತ್ತು ಕಾರ್ಯಗಳನ್ನು ಪ್ರಾರಂಭಿಸುವ ಸೂಚನೆಯಿದೆ. ವೃತ್ತಿನಿರತರಿಗೆ ಮತ್ತು ಉದ್ಯಮಿಗಳಿಗೆ ಈ ದಿನವು ವಿಶೇಷವಾಗಿ ಲಾಭದಾಯಕ ದಿನವಾಗಲಿದೆ. ನಿಮ್ಮ ಮೇಲಾಧಿಕಾರಿಗಳು ಹೆಚ್ಚು ಕೃತಜ್ಞರಾಗಿರುತ್ತಾರೆ ಮತ್ತು ನಿಮ್ಮ ಬಳಿ ಉತ್ತಮರೀತಿಯಲ್ಲಿಯೇ ವರ್ತಿಸುತ್ತಾರೆ. ಬಡ್ತಿ ಸಿಗಬಹುದು ಮತ್ತು ವೇತನದಲ್ಲಿ ಹೆಚ್ಚಳ ಉಂಟಾಗಬಹುದು. ಬಾಕಿ ಉಳಿದಿರುವ ಕಾರ್ಯಗಳು ಕಾಲಕ್ರಮದಲ್ಲಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ, ವಿಶೇಷ ಪ್ರೀತಿ ಮತ್ತು ಗೌರವವನ್ನು ನೀವು ಎದುರುನೋಡಬಹುದು. ಉಡುಗೊರೆ ಮತ್ತು ಬಹುಮಾನಗಳು ನಿಮಗೆ ಇನ್ನಷ್ಟು ಸಂತಸವನ್ನು ತರಬಹುದು.

ಮಿಥುನ :-

ಇಂದಿನ ದಿನವು ತುಂಬಾ ಶುಭಕರವಾಗಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮಟ್ಟವು ಎಂದಿಗಿಂತ ಕಡಿಮೆಯಿರುವ ಸಾಧ್ಯತೆಯಿದೆ. ನಿಮ್ಮಲ್ಲಿ ಉತ್ಸಾಹದ ಕೊರತೆ ಕಂಡುಬರಬಹುದು ಮತ್ತು ನಿಮ್ಮ ಕೆಲಸಗಳಿಗೆ ಹಾಜರಾಗಲೇಬೇಕಾಗಿರಬಹುದು. ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ಸ್ನೇಹಪರ ಮನೋಭಾವವನ್ನು ಹೊಂದಿರುವುದಿಲ್ಲ ಮತ್ತು ಸಹಕಾರವನ್ನೂ ತೋರುವುದಿಲ್ಲ. ದುಂದುವೆಚ್ಚದ ಸಾಧ್ಯತೆಯನ್ನು ನಿರಾಕರಿಸಲಾಗದು. ಮಕ್ಕಳ ವರ್ತನೆಯು ಉತ್ತಮವಾಗಿರುವುದಿಲ್ಲ ಮತ್ತು ಇದು ಹೆಚ್ಚಿನ ನೋವಿಗೆ ಕಾರಣವಾಗಬಲ್ಲದು. ನಿಮ್ಮ ಸ್ಪರ್ಧಾಳುಗಳು ವಿಶೇಷವಾಗಿ ಪ್ರತಿಕೂಲತೆಯಿಂದ ಕೂಡಿರುತ್ತಾರೆ.

ಕರ್ಕಾಟಕ :-

ಈ ದಿನವು ಅಳುಕು ಮತ್ತು ದುರಾದೃಷ್ಟದಿಂದ ಕೂಡಿರುತ್ತದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ಹೊಸ ಯೋಜನೆಗಳ ಪ್ರಾರಂಭವನ್ನು, ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸಿ.ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಅನೈತಿಕ ಮತ್ತು ಮೋಸದ ಆಲೋಚನೆಗಳನ್ನು ಬಿಟ್ಟುಬಿಡಿ. ಕಾನೂನುಬಾಹಿರ ಕಾರ್ಯಗಳು ಯಾವಾಗಲೂ ತೀವ್ರ ತೊಂದರೆಯನ್ನು ತರುತ್ತದೆ. ಕಚೇರಿ ವಿಚಾರಗಳು ಅನುಕೂಲಕರ ತಿರುವನ್ನು ಪಡೆದುಕೊಳ್ಳುತ್ತದೆ. ಮನೆಯಲ್ಲಿನ ಶಾಂತಿ ಮತ್ತು ಸಾಮರಸ್ಯಕ್ಕೆ ಕಲ್ಲೆಸೆಯಬೇಡಿ. ಮಾನಸಿಕ ಅಸ್ಥಿರತೆ ಮತ್ತು ವ್ಯಥೆ ಉಂಟಾಗಬಹುದು. ನಿಮ್ಮ ಧೈರ್ಯ ಕಳೆದುಕೊಳ್ಳಬೇಡಿ.

ಸಿಂಹ :-

ಈ ದಿನವು ನೀವು ನಿರೀಕ್ಷಿಸಿದಂತೆ ಇರುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ತೀವ್ರ ವಾಗ್ವಾದ ಉಂಟಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತವಾಗಿ ಎಚ್ಚರಿಕೆಯಿಂದಿರಿ. ವ್ಯವಹಾರ ಸಂಬಂಧಿತ ಜಗಳಗಳಿಂದ ದೂರವಿರಿ. ಆರೋಗ್ಯದಿಂದ ಯಾವುದೇ ತೊಂದರೆ ಉಂಟಾಗುವ ಸಾಧ್ಯತೆಯಿಲ್ಲ. ಏನೇ ಆದರೂ, ನಿಮ್ಮ ಸಂಗಾತಿಯ ಆರೋಗ್ಯವು ಆತಂಕಕ್ಕೆ ಕಾರಣವಾಗಬಹುದು. ಸಾಮಾಜಿಕ ಮತ್ತು ಸಾರ್ವಜನಿಕ ವ್ಯವಹಾರಗಳು ಅನುಕೂಲಕರವಾಗಿಯೇ ನಡೆಯಲಿದೆ. ವಿದೇಶಿ ವ್ಯಕ್ತಿಗಳನ್ನು ಭೇಟಿಯಾಗುವ ಸಂಭಾವ್ಯತೆಯಿದೆ. ಏನೇ ಆದರೂ, ಯಾವುದನ್ನೂ ಸ್ಪಷ್ಟ ನಿರ್ಧಾರವೆಂದು ಪರಿಗಣಿಸಬೇಡಿ.

ಕನ್ಯಾ :-

ವೃತ್ತಿನಿರತರಿಗೆ ಮತ್ತು ಉದ್ಯಮಿಗಳಿಗೆ ಇಂದು ವಿಶೇಷ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸ್ಪರ್ಧಾಳುಗಳು, ಜೊತೆಗಾರರು ಮತ್ತು ಸಹೋದ್ಯೋಗಿಗಳಿಗಿಂತ ಹೆಚ್ಚಿನ ಅನುಕೂಲ ಸ್ಥಿತಿಯಲ್ಲಿ ಇರುತ್ತೀರಿ. ಸಹೋದ್ಯೋಗಿಗಳು ಸಹಕಾರ ಹಾಗೂ ಸ್ನೇಹಪರ ಮನೋಭಾವವನ್ನು ಹೊಂದಿರುವ ಸಾಧ್ಯತೆಯಿದೆ. ಮನೆಯಲ್ಲಿ ಸಾಕಷ್ಟು ಹರ್ಷ ಮತ್ತು ತೃಪ್ತಿಯು ನಿಮಗಾಗಿ ಕಾದಿದೆ. ಸಣ್ಣ ಮಟ್ಟಿನ ಆನಾರೋಗ್ಯ ಕಾಡುವ ಸಂಭಾವ್ಯತೆಯಿದೆ. ಲಾಭ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವವರು ತಮ್ಮ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು.

ತುಲಾ :-

ಮಾನಸಿಕವಾಗಿ ಇಂದು ನೀವು ಉನ್ನತಿಗೇರಿರುವಂತೆ ಗಣೇಶ ಕಾಣುತ್ತಾರೆ. ನಿಮ್ಮ ಸೌಜನ್ಯಶೀಲ ವೈಖರಿಯಿಂದ ನೀವು ಸ್ನೇಹಿತರ ಹಾಗೂ ಅಪರಿಚಿತರನ್ನು ಗೆಲ್ಲಬಹುದು. ಚರ್ಚೆ ಮತ್ತು ಮಾತುಕತೆಗಳಲ್ಲಿ ನಿಮ್ಮ ಆಲೋಚನೆಗಳು ಇತರರ ಮೇಲೆ ಪರಿಣಾಮ ಬೀರಬಹುದು ಹಾಗೂ ಇತರರನ್ನು ಪ್ರಭಾವಿತಗೊಳಿಸಬಹುದು. ಏನೇ ಆದರೂ, ವೃತ್ತಿಗೆ ಸಂಬಂಧಿಸಿ ನಿಮ್ಮ ಫಲಿತಾಂಶವು ಪ್ರಯತ್ನದೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಕಾರ್ಯಕ್ಷೇತ್ರದಲ್ಲಿ ಇತರರ ಗಮನ ಸೆಳೆಯದಿರಲು ಪ್ರಯತ್ನಿಸಿ. ಮಿತಿಮೀರಿದ ಉತ್ಸಾಹವನ್ನು ಹೊಂದಬೇಡಿ. ಇಂದು ನಿಮ್ಮ ಮೆಟಬಾಲಿಸಂ ತುಂಬಾ ಮಂದವಾಗಿರಬಹುದು. ನೀವು ಏನು ತಿನ್ನುತ್ತೀರಿ ಅದರ ಬಗ್ಗೆ ಎಚ್ಚರವಹಿಸಿ. ಸಾಹಿತ್ಯದ ತುಣುಕುಗಳನ್ನು ಬರೆಯುವ ಸಾಧ್ಯತೆಯಿದೆ.

ವೃಶ್ಚಿಕ :-

ಆತ್ಮೀಯ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಇಂದು ನೀವು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಲಿದೆ. ನಿಮ್ಮ ತಾಯಿಯು ಕೂಡ ಅಸ್ವಸ್ಥರಾಗಬಹುದು. ನಿಮ್ಮ ಹಣಕಾಸು ಸ್ಥಿತಿ ಮತ್ತು ಗೌರವವು ತಗ್ಗುತ್ತದೆ. ಹಗೆತನದಿಂದಾಗಿ ಮತ್ತು ಆಸ್ತಿ ಸಂಬಂಧ ಸಂಘರ್ಷದಿಂದಾಗಿ ನಿಮ್ಮ ಮನೆಯ ಶಾಂತಿ ಕದಡುವ ಸಾಧ್ಯತೆಯಿದೆ. ನೀವು ತುಂಬಾ ವ್ಯಾಕುಲ ಹಾಗೂ ಖಿನ್ನತೆಗೆ ಒಳಗಾಗುವಿರಿ. ಆರಾಮದಾಯಕ ನಿದ್ರೆಯು ಬರಲಾರದು.

ಧನು :-

ಇಂದು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸೂಕ್ತ ದಿನ. ನೀವು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಸಾಕಷ್ಟು ಸಂತಸದ ಕ್ಷಣಗಳನ್ನು ಕಳೆಯುವಿರಿ. ಸಣ್ಣ ಪ್ರವಾಸ ತೆರಳುವಿರಿ. ಆರೋಗ್ಯ ಸಮಸ್ಯೆಗಳು ದೂರವಾಗಲಿದೆ. ಆಧ್ಯಾತ್ಮ ಮತ್ತು ಅತೀಂದ್ರಿಯ ವಿಚಾರಗಳಲ್ಲಿ ಆಸಕ್ತಿ ತೋರಬಹುದು. ನೀವು ಕೈಗೊಂಡು ಕಾರ್ಯಗಳು ಯಶಸ್ವಿಯಾಗಬಹುದು. ನಿಮ್ಮ ಸಾಮಾಜಿಕ ಸ್ಥಾನವು ವೃದ್ಧಿಸಲಿದೆ. ಈ ದಿನವು ಸಂತಸ ಹಾಗೂ ಫಲಪ್ರದವಾಗಿರುವ ಭರವಸೆ ಇದೆ ಎಂಬುದಾಗಿ ಗಣೇಶ ಹೇಳುತ್ತಾರೆ.

ಮಕರ :-

ನಿಮ್ಮ ಕುಟುಂಬದ ಸದಸ್ಯರೊಂದಿಗೆ ಜಗಳ ಹಾಗೂ ಕಲಹವನ್ನು ತಪ್ಪಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ವಿನಯ ಹಾಗೂ ಮೃದು ಮಾತು ನಿಮ್ಮನ್ನು ತೊಂದರೆಯನ್ನು ದೂರಮಾಡಲಿದೆ. ಇಂದು ನೀವು ಶೇರು ಮತ್ತು ಶೇರುಮಾರುಕಟ್ಟೆಗಳಲ್ಲಿ ಬಂಡವಾಳ ಹೂಡಬಹುದು. ಆರೋಗ್ಯಕ್ಕೆ ಸಂಬಂಧಿಸಿ ಇಂದು ನೀವು ಎಂದಿನಂತೆ ಉತ್ತಮ ಸ್ಥಿತಿಯಲ್ಲಿರುವುದಿಲ್ಲ. ಕಣ್ಣಿನ ತೊಂದರೆ ಉಂಟಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಕಠಿಣ ಶ್ರಮಪಡಬೇಕಾಗುತ್ತದೆ.

ಕುಂಭ :-

ಸಂತಸ ಹಾಗೂ ಲಾಭದಾಯಕ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಅತ್ಯುತ್ತಮ ಸ್ಥಿತಿಯಲ್ಲಿರುತ್ತೀರಿ. ಲೌಕಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನೀವು ಸಂತೃಪ್ತಿಯಿಂದ ಕೂಡಿರುತ್ತೀರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ತಿರುಗಾಟ, ಉತ್ತಮ ಆಹಾರ ಮತ್ತು ಸಂಭ್ರಮ, ಉಡುಗೊರೆಗಳ ಪಡೆಯುವಿಕೆ ಇವೆಲ್ಲವನ್ನೂ ಇಂದಿನ ಗ್ರಹಗತಿಗಳು ನೀಡಲಿವೆ.ದಿನಪೂರ್ತಿ ನೀವು ಆಧ್ಯಾತ್ಮಿಕವಾಗಿ ಸುಧಾರಿತವಾಗಿರುತ್ತೀರಿ.

ಮೀನ :-

ನಿಮ್ಮ ನಿರೀಕ್ಷೆ ಮತ್ತು ದುರಾಸೆಗಳನ್ನು ಹತೋಟಿಯಲ್ಲಿಡುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಹಣಕಾಸು ವಿಚಾರಗಳನ್ನು ನಿಭಾಯಿಸುವಾಗ ಎಚ್ಚರಿಕೆಯಿಂದಿರಿ. ಒಪ್ಪಂದಗಳನ್ನು ಅಂತಿಮಗೊಳಿಸುವಾಗ ಮತ್ತು ಬಂಡವಾಳ ಹೂಡುವಾಗ ಎರಡೆರಡು ಬಾರಿ ಯೋಚಿಸಿ. ನಿಮ್ಮ ಆರೋಗ್ಯವು ತೊಂದರೆಗೆ ಕಾರಣವಾಗಬಹುದು. ಮಾನಸಿಕವಾಗಿ ನೀವು ಸಮತೋಲನದಲ್ಲಿರಲು ಮತ್ತು ಕೇಂದ್ರೀಕೃತವಾಗಲು ನಿಮಗೆ ಕಷ್ಟಕರವಾಗಬಹುದು. ಧಾರ್ಮಿಕ ವಿಚಾರಗಳಿಗಾಗಿ ಖರ್ಚನ್ನು ನಿರಾಕರಿಸುವಂತಿಲ್ಲ. ಕೌಟುಂಬಿಕ ಕಲಹದ ಸಂಭಾವ್ಯತೆಯಿದೆ.

WhatsApp Group Join Now

Spread the love

Leave a Reply