Dina Bhavishya : 20 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ನಿಮ್ಮ ಕುಟುಂಬ ಮತ್ತು ಅವರ ನೆಮ್ಮದಿಯು ಇಂದು ನಿಮ್ಮ ಮೊದಲ ಆದ್ಯತೆಯಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ.ನಿಮ್ಮ ಮನೆಗೆ ಹೊಸ ರೂಪು ಕೊಡಲು, ಮನೆಯನ್ನು ಅಲಂಕರಿಸುವ ಕುರಿತಂತೆ ನೀವು ಯೋಚಿಸಬಹುದು. ಇಂದು ನೀವು ಅಧಿಕ ಸಮಯವನ್ನು ಮನೆಯಲ್ಲೇ ಕಳೆಯುವುದರಿಂದ ಅತ್ಯಂತ ಗಮನಹರಿಸಬೇಕಾಗಿರುವ ವಿವಿಧ ಕುಟುಂಬ ವಿಚಾರಗಳು ಹಾಗೂ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಾಗುತ್ತದೆ.

ಮತ್ತು ಒಮ್ಮೆ ನೀವು ಅದನ್ನು ಬಗೆಹರಿಸಲು ಪ್ರಾರಂಭಿಸಿದಲ್ಲಿ, ನೀವು ವಿಶ್ರಾಂತ ಹಾಗೂ ತೃಪ್ತಿಯ ಮನೋಭಾವವನ್ನು ಹೊಂದುತ್ತೀರಿ. ಇಂದು ನಿಮ್ಮ ಆದರ್ಶವು ಗುರುತಿಸಲ್ಪಡುತ್ತದೆ. ಆದರೆ, ನೀವು ಹೆಚ್ಚು ಆಶಾವಾದಿಯಾಗಿರುವ ಅಗತ್ಯವಿದೆ.

ವೃಷಭ :-

ವೃಷಭ ರಾಶಿಯವರಿಗೆ ಈ ದಿನವು ಸಾಮಾನ್ಯ ದಿನವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ವಿದೇಶದಲ್ಲಿ ನೆಲೆಸಿರುವ ಸಂಬಂಧಿಗಳಿಂದ ಮತ್ತು ಪ್ರೀತಿಪಾತ್ರರಿಂದ ನೀವು ಸುದ್ದಿಯನ್ನು ನಿರೀಕ್ಷಿಸಬಹುದು. ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿರುವವರಿಗೆ ಈ ದಿನವು ಸಾಮಾನ್ಯವಾಗಿರುತ್ತದೆ. ದೂರ ಪ್ರದೇಶಗಳಿಗೆ ಪ್ರವಾಸ ತೆರಳುವ ಸಿದ್ಧತೆಗಳು ಕಾರ್ಯರೂಪಕ್ಕೆ ಬರಲಿವೆ. ಮತ್ತು ಇವುಗಳಲ್ಲಿ ಧಾರ್ಮಿಕ ಕ್ಷೇತ್ರಗಳೂ ಒಳಗೊಂಡಿರುತ್ತವೆ. ವೃತ್ತಿಪರರಿಗೆ ಕಾರ್ಯದೊತ್ತಡದಿಂದಾಗಿ ಕುಕ್ಕರ್‌ನಲ್ಲಿ ಕೂತಂತೆ ಭಾಸವಾಗಬಹುದು. ನಿಮ್ಮ ಖರ್ಚು ಹೆಚ್ಚಾಗಲಿದೆ.

ಮಿಥುನ :-

ನಿಮ್ಮ ಮನದಲ್ಲಿ ಮನೆಮಾಡಿರು ಎಲ್ಲಾ ಋಣಾತ್ಮಕ ಆಲೋಚನೆಗಳು ಹೊರಹೋಗಲಿ ಎಂಬುದಾಗಿ ಗಣೇಶ ಹೇಳುತ್ತಾರೆ. ಯಾಕೆಂದರೆ, ಇಲ್ಲದಿದ್ದಲ್ಲ, ಈ ದಿನವು ಮಿಥುನ ರಾಶಿಯವರಿಗೆ ನೋವನ್ನು ತರಲಿದೆ. ನೀವು ಹೊಸ ಯೋಜನೆಯನ್ನು ಪ್ರಾರಂಭಿಸುವ ಆಲೋಚನೆಯಲ್ಲಿದ್ದಲ್ಲಿ, ಅವುಗಳನ್ನು ಮುಂದೂಡಿ. ಈ ದಿನವು ಅನುಕೂಲಕರ ದಿನವಲ್ಲ. ಆದ್ದರಿಂದ, ಹೆಚ್ಚು ದುರಾಕ್ರಮಣಕಾರಿಯಾಗುವುದನ್ನು ತಪ್ಪಿಸಿ ಇವು ನಿಮ್ಮ ಸುತ್ತಲಿರುವ ಜನರೊಂದಿಗಿನ ಸಂಬಂಧವನ್ನು ಹಾಳುಮಾಡಬಹುದು. ಇಂದು ನಿಮ್ಮ ಕಿಸೆ ಪೂರ್ತಿ ಖಾಲಿಯಾಗಬಹುದು. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಗಮನವಿಡಿ. ಒಟ್ಟಾರೆಯಾಗಿ, ಇಂದು ಅದ್ಭುತ ದಿನವಲ್ಲ. ಆದರೂ, ಧ್ಯಾನ ಮತ್ತು ಯೋಗದಿಂದ ಒತ್ತಡವನ್ನು ತಗ್ಗಿಸಬಹುದು.

ಕರ್ಕಾಟಕ :-

ಕರ್ಕಾಟಕ ರಾಶಿಯವರಿಗೆ ಇಂದು ಪರಿಪೂರ್ಣ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಸಾಕಷ್ಟು ಖುಷಿ ಹಾಗೂ ಸಂತೋಷ ತುಂಬಿರುತ್ತದೆ. ದಿನಪೂರ್ತಿ ನೀವು ಆರೋಗ್ಯದಿಂದಿರುತ್ತೀರಿ. ಇಂದು ನೀವು ನಿಮ್ಮ ಸ್ನೇಹಿತರ ಹಾಗೂ ಕುಟುಂಬ ಸದಸ್ಯರೊಂದಿಹೆ ಸಂತಸದ ಪ್ರವಾಸ ಅಥವಾ ವಿಹಾರದ ಯೋಜನೆಯಲ್ಲಿದ್ದರೆ ಇಂದು ಉತ್ತಮ ದಿನವಾಗಲಾರದು. ಸಾಮಾಜಿಕ ಕಾರ್ಯಗಳಲ್ಲಿ ನೀವು ಸಾಕಷ್ಟು ಪ್ರಶಂಸೆ ಗಳಿಸಬಹುದು. ಸಂಕ್ಷಿಪ್ತವಾಗಿ ಇದೊಂದು ಅವಿಸ್ಮರಣೀಯ ದಿನ.

ಸಿಂಹ :-

ಸಾಮಾನ್ಯ ದಿನವು ನಿಮ್ಮದಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸಿಟ್ಟಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ವಾಗ್ವಾದದಲ್ಲಿ ತೊಡಗಬಹುದು. ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಕೆಲಸವು ಕಷ್ಟಕರ ಅನಿಸುವುದರಿಂದ ಈ ದಿನವು ನಿಮಗೆ ಅನನುಕೂಲವೆನಿಸಲಿದೆ. ಸಾಕಷ್ಟು ಪರಿಶ್ರಮದ ನಂತರವೂ, ಫಲಿತಾಂಶವು ನಿಮ್ಮನ್ನು ನಿರಾಶೆಗೊಳಿಸಲಿದೆ. ನಿಮ್ಮ ತಾಯಿಯ ಆರೋಗ್ಯವು ನಿಮ್ಮ ಚಿಂತೆಯ ಕಾರಣವಾಗಬಹುದು.

ಕನ್ಯಾ :-

ಇಂದು ಚರ್ಚೆಗಳಿಂದ ದೂರಿವಿರುವುದ ಉತ್ತಮ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಆರೋಗ್ಯಕರ ಚರ್ಚೆಯ ವೇಳೆಗಿನ ನಿಮ್ಮ ಅನಿರೀಕ್ಷಿತ ದುರಾಕ್ರಮಣ ಪ್ರವೃತ್ತಿಯು ಉದ್ರೇಕದ ಚರ್ಚೆ ಹಾಗೂ ವಾಗ್ವಾದವಾಗಿ ಮಾರ್ಪಡಲಿದೆ. ಆಕಸ್ಮಿಕ ಖರ್ಚುವೆಚ್ಚಗಳು ಉಂಟಾಗಲಿದೆ. ನಿಮ್ಮ ಖಜಾನೆಯೊಂದಿಗೆ ಸಿದ್ಧರಾಗಿರಿ. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗಿನ ಸಮಾಗಮವು ನಿಮಗೆ ಸ್ವಲ್ಪ ನೆಮ್ಮದಿಯನ್ನು ತರಲಿದೆ. ಆದ್ದರಿಂದ ಅವರೊಂದಿಗೆ ತಿರುಗಾಟಕ್ಕೆ ತೆರಳಲು ಯೋಜನೆ ರೂಪಿಸಿ. ಉದರ ಸಂಬಂಧಿ ವ್ಯಾಧಿಗಳಿಂದ ನೀವು ನರಳಬಹುದು. ಆರೋಗ್ಯಕರ ಆಹಾರ ಸೇವಿಸಿ. ಹೂಡಿಕೆದಾರರು ಇಂದು ಎಚ್ಚರಿಕೆಯಿಂದಿರಬೇಕು.

ತುಲಾ :-

ಈ ದಿನಪೂರ್ತಿ ನೀವು ಅತೀ ಭಾವುರಾಗಿರುತ್ತೀರಿ ಮತ್ತು ಹೆಚ್ಚಿನ ಒತ್ತಡದಲ್ಲಿ ತುಂಬಿರುತ್ತೀರಿ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಋಣಾತ್ಮಕ ಚಿಂತನೆಗಳು ನಿಮ್ಮನ್ನು ನಿರಾಶರನ್ನಾಗಿಸಬಹುದು. ತಾಯಿ ಮತ್ತು ಪತ್ನಿ ಸಂಬಂಧಿ ವಿಚಾರಗಳು ನಿಮ್ಮನ್ನು ಇನ್ನಷ್ಟು ಆತಂಕಕ್ಕೀಡುಮಾಡಬಹುದು. ಪ್ರಯಾಣಗಳಿಗೆ ಈ ದಿನವು ಶುಭಕರವಲ್ಲ. ಬಾವಿ, ಕೆರೆ, ನದಿಗಳಿಂದ ದೂರವಿರಲು ಪ್ರಯತ್ನಿಸಿ. ನಿದ್ರೆಯ ಕೊರತೆಯಿಂದಾಗಿ ನೀವು ಆಲಸ್ಯದಿಂದಿರುತ್ತೀರಿ ಮತ್ತು ಜೀವಕಳೆಯಿಲ್ಲದಂತಿರುತ್ತೀರಿ. ಕುಟುಂಬ ಮತ್ತು ಆಸ್ತಿ ಸಂಬಂಧಿ ಜಗಳಗಳನ್ನು ದೂರವಿರಿಸಿ.

ವೃಶ್ಚಿಕ :-

ಇಂದು ದಿನಪೂರ್ತಿ ನೀವು ಲವಲವಿಕೆ ಹಾಗೂ ಚೈತನ್ಯದಿಂದ ಕೂಡಿರುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊಸ ಯೋಜನೆಗಳನ್ನು ಮತ್ತು ಕಾರ್ಯಗಳು ಪ್ರಾರಂಭಗೊಳ್ಳಬಹುದು. ನಿಮ್ಮ ಸಹೋದ್ಯೋಗಿಗಳು ಮತ್ತು ಜೊತೆಕೆಲಸಗಾರರು ಸ್ನೇಹ ಹಾಗೂ ಸಹಕಾರ ಮನೋಭಾವದಿಂದ ಕೂಡಿರುತ್ತಾರೆ. ನಿಮ್ಮ ಆತ್ಮೀಯ ಸ್ನೇಹಿತರನ್ನು ಅಥವಾ ಸಂಬಂಧಿಕರನ್ನು ಭೇಟಿ ಮಾಡಬಹುದು. ಈ ದಿನ ಕೈಗೊಂಡ ಕಾರ್ಯವು ಯಶಸ್ಸನ್ನು ನೀಡುತ್ತದೆ. ಅದೃಷ್ಟವು ನಿಮ್ಮತ್ತ ನಗು ಬೀರುತ್ತಿದೆ ಮತ್ತು ನಿಮಗೆ ಧನಲಾಭ ಉಂಟಾಗಬಹುದು. ಸಹೋದರರು ಹಾಗೂ ಸಹೋದರಿಯರಿಂದ ಲಾಭ ಉಂಟಾಗಬಹುದು. ಸ್ಪರ್ಧೆ ಮತ್ತು ಪರೀಕ್ಷೆಗಳಲ್ಲಿ ಯಶಸ್ಸು ಕಾಣಲಿದ್ದೀರಿ. ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ.

ಧನು :-

ಇಂದು ನೀವು ಗೊಂದಲದಲ್ಲಿರುವಿರಿ. ನಿಮ್ಮ ಕುಟುಂಬದ ವಾತಾವರಣವು ಅಸ್ಥಿರತೆಯಿಂದ ಕೂಡಿರುವ ಸಾಧ್ಯತೆಯಿದೆ. ದಿನನಿತ್ಯದ ಯೋಜನೆಗಳನ್ನು ಪೂರ್ಣಗೊಳಿಸಲು ಅಶಕ್ತರಾಗುವಿರಿ. ನಿರಾಶ ಭಾವನೆಯನ್ನು ಹೊಂದಬಹುದು. ಇಂದು ಪ್ರಮುಖ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ಕೈ ತುಂಬಾ ವೃತ್ತಿ ಹಾಗೂ ಮನೆಯ ಕೆಲಸಗಳು ಭರ್ತಿಯಾಗಿರುವ ಸಾಧ್ಯತೆಯಿದೆ.

ಮಕರ :-

ಮನೆಯಲ್ಲಿ ಸಂತಸದ ವೈವಾಹಿಕ ಅಥವಾ ಪ್ರಣಯ ಸಂಬಂಧವಿರುತ್ತದೆ ಮತ್ತು ಕಾರ್ಯದಲ್ಲಿನ ಖ್ಯಾತಿ ಹೆಚ್ಚುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ವೃತ್ತಿನಿರತರಿಗೆ ಹಾಗೂ ಉದ್ಯಮಿಗಳಿಗೆ ಅನುಕೂಲಕರ ದಿನ.ನಿಮಗೆ ಬಡ್ತಿ ಸಿಗುವ ಸಾಧ್ಯತೆಯಿದೆ. ವೇತನ ಹೆಚ್ಚಳವು ಇಂದು ನಿಗದಿಯಾಗಿದ್ದಲ್ಲಿ ಸೊಗಸಾದ ಫಲಿತಾಂಶವನ್ನು ನಿರೀಕ್ಷಿಸಬಹುದು. ನಿಯೋಜಿತ ಕಾರ್ಯಗಳು ಉತ್ತಮವಾಗಿಯೇ ಸಾಗುತ್ತವೆ ಮತ್ತು ನಿಗದಿತ ವೇಳೆಯೊಳಗೆ ಪೂರ್ಣಗೊಳಿಸುವಿರಿ. ಸಂಜೆಯ ವೇಳೆಯು ನಿಮ್ಮ ಪ್ರೇಮಿಯೊಂದಿಗೆ ಸಿನಿಮಾ ವೀಕ್ಷಣೆ ಅಥವಾ ಸ್ನೇಹಿತರೊಂದಿಗೆ ಔತಣಕೂಟಕ್ಕಾಗಿ ನಿಯೋಜಿಸುವಿರಿ. ದೇವರಿಗೆ ಧನ್ಯವಾದ ಅರ್ಪಿಸಲು ಮತ್ತು ನಿಮ್ಮ ಉತ್ತಮ ಅದೃಷ್ಟವನ್ನು ಇತರರೊಂದಿಗೆ ಹಂಚಲು ಬಯಸುವುದರಿಂದ ನೀವು ಪ್ರಾರ್ಥನೆ ಮತ್ತು ದಾನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿರಿ.

ಕುಂಭ :-

ವೆಚ್ಚ, ಖರ್ಚು, ವ್ಯಯ.. ಎಲ್ಲವೂ ಒಂದೇ. ಮತ್ಯಾಕೆ ಅದೇ ಪುನರಾವರ್ತನೆ? ನೀವು ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಇಲ್ಲವಾದಲ್ಲಿ ತೊಂದರೆಗೊಳಗಾಗುವಿರಿ ಎಂಬುದನ್ನು ಒತ್ತಿಹೇಳುವ ಅಗತ್ಯವಿದೆ ಎಂದು ಗಣೇಶ ಹೇಳುತ್ತಾರೆ. ಖರ್ಚುಗಳು ಹೆಚ್ಚಾಗಲಾರವು ಆದರೆ, ಹಣಕಾಸು ವಿಚಾರಗಳನ್ನು ನಿಭಾಯಿಸುವಾಗ ಮತ್ತು ಇತರರಿಗೆ ನೀಡುವಾಗ, ವೆಚ್ಚಕಡಿತದ ವೇಳೆ ಮತ್ತು ಸರಿಯಾದ ಹೂಡಿಕೆಯ ವೇಳೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಣ ನೀಡುವದರಿಂದ ಮತ್ತು ಇತರರಿಗೆ ಸಾಲ ನೀಡುವುದರಿಂದ ದೂರವಿರಿ. ಇದು ಅಹಿತಕರ ಮತ್ತು ಅಪಾಯದ ವಿಚಾರಗಳಾಗಿರುತ್ತದೆ ಯಾಕೆಂದರೆ ಇತರರು ಬೇರೆಯವರ ದೃಷ್ಟಿಕೋನದ ಕುರಿತಂತೆ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ. ಎಚ್ಚರಿಕೆಯಿಂದಿರಿ ಮತ್ತು ಆರೋಗ್ಯ, ಹಣಕಾಸು ಮತ್ತು ಮಾನಸಿಕ ಶಾಂತಿಯನ್ನು ಸಂರಕ್ಷಿಸಿ.

ಮೀನ :-

ನಿಮ್ಮ ಸಾಮಾಜಿಕ ಗ್ರಹಗತಿಯು ಪ್ರಜ್ವಲಿಸುವಂತೆ ಕಾಣುತ್ತದೆ ಎಂದು ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರಿಗೆ, ವರಿಷ್ಠರಿಗೆ ಮತ್ತು ಪ್ರೀತಿಪಾತ್ರರಿಗೆ ನೀವು ಅತೀ ಪ್ರೀತಿಯ ವ್ಯಕ್ತಿಯಾಗಿದ್ದೀರಿ. ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧಗಳು ಫಲಪ್ರದವಾಗಿರುತ್ತದೆ. ಅವರಿಗಾಗಿ ನೀವು ವೆಚ್ಚ ಮಾಡಬಹುದು. ಅವರ ಸ್ನೇಹಪರ ಹಾಗೂ ವಿಶ್ವಾಸವನ್ನು ಆನಂದಿಸುವಿರಿ. ಹೊಸ ಸಂಬಂಧಗಳು ಮತ್ತು ಪರಿಚಯಗಳು ಉಂಟಾಗಲಿವೆ ಮತ್ತು ಇದು ದೀರ್ಘಕಾಲದವರೆಗೆ ಅನುಕೂಲಕರವಾಗಿರುತ್ತೆದ. ಖುಷಿಭರಿತ ಪ್ರವಾಸಕ್ಕಾಗಿ ನೀವು ಪ್ರಣಯಭರಿತ ತಾಣಗಳಿಗೆ ತೆರಳಬಹುದು. ಮನೆಯಿಂದ, ಮಕ್ಕಳಿಂದ, ವಿದೇಶದಿಂದ, ಕಚೇರಿಯಿಂದ ಬರುವ ಶುಭಸುದ್ದಿಗಳು ನಿಮ್ಮನ್ನು ಭಾವೋತ್ಕರ್ಷದಲ್ಲಿರಿಸುತ್ತದೆ. ಮತ್ತು ಅನಿರೀಕ್ಷಿತ ಫಲಪ್ರಾಪ್ತಿ ಉಂಟಾಗಲಿದೆ. ಪರಹಿತಚಿಂತನೆ ಮತ್ತು ಸಹಾನುಭೂತಿಯು ನಿಮ್ಮನ್ನು ಉತ್ಸಾಹಗೊಳಿಸಲಿದೆ.

WhatsApp Group Join Now

Spread the love

Leave a Reply