Dina Bhavishya : 15 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love


ಮೇಷ :-

ಆಧ್ಯಾತ್ಮ ಮಾತುಕತೆ ಮುಂತಾದವುಗಳಿಂದ ಇಂದು ನೀವು ಏನೋ ವಿಶೇಷ ಅನುಭವವನ್ನು ಪಡೆಯಲಿದ್ದೀರಿ. ಅತೀಂದ್ರಿಯ ಮತ್ತು ವಿಲಕ್ಷಣ ವಿಚಾರಗಳತ್ತ ನೀವು ಅವಿವರಣೀಯವಾಗಿ ಆಕರ್ಷಿತರಾಗುತ್ತೀರಿ. ನಿಮ್ಮ ಅಂತರಾತ್ಮದೊಂದಿಗೆ ದೀರ್ಘ ಸಂಪರ್ಕದಲ್ಲಿ ನೀವು ಕೆಲವು ಆಲೋಚನೆಗಳನ್ನು ನಿರೀಕ್ಷಿಸಬಹುದು.

ನೀವು ಆಧ್ಯಾತ್ಮವಾಗಿ ವೃದ್ಧಿಯಾಗಿದ್ದೀರಿ ಎಂಬ ಭಾವನೆ ನಿಮ್ಮಲ್ಲಿ ಬರಬಹುದು. ಇದು ನೀವು ಇತರರಿಗಿಂತ ಮೇಲ್ಮಟ್ಟದಲ್ಲಿದ್ದೀರಿ ಎಂಬ ಭಾವನೆ ನಿಮ್ಮಲ್ಲಿ ಬರದಂತೆ ನೋಡಿಕೊಳ್ಳಿ. ಪ್ರಯಾಣಕ್ಕೆ ಶುಭದಿನವಲ್ಲ.

ವೃಷಭ :-

ಗಣೇಶನ ಆಶೀರ್ವಾದದಿಂದ ಕುಟುಂಬದ ವ್ಯಕ್ತಿಯಾಗ ನಿಮ್ಮ ಜೀವನವು ಸುಂದರವಾಗಿರುತ್ತದೆ.ನೀವು ನಿಮ್ಮ ಕುಟುಂಬ ಸದಸ್ಯರು ಹಾಗೂ ಪ್ರೀತಿಪಾತ್ರರೊಂದಿಗೆ ಸಂಭ್ರಮದಿಂದಿರುತ್ತೀರಿ. ಸಣ್ಣ ಪ್ರವಾಸ ಅಥವಾ ಯಾತ್ರೆಯನ್ನು ನಿರಾಕರಿಸುವಂತಿಲ್ಲ. ವಿದೇಶದಲ್ಲಿ ನೆಲೆಸಿರುವ ನಿಮ್ಮ ಪ್ರೀತಿಪಾತರಿಂದ ಬರುವ ಸುದ್ದಿಯನ್ನು ನಿಮ್ಮನ್ನು ಇನ್ನಷ್ಟು ಖುಷಿಯಲ್ಲಿರಿಸಲಿದೆ. ಐಶ್ವರ್ಯ ದೇವತೆ ಲಕ್ಷ್ಮಿಯು ಇಂದು ನಿಮ್ಮನ್ನು ಹರಸುತ್ತಾಳೆ ಎಂಬುದಾಗಿ ಗಣೇಶ ಹೇಳುತ್ತಾರೆ.

ಮಿಥುನ :-

ಇಂದು ಅದ್ಭುತ ದಿನ. ಇದು ನಿಮಗೆ ಉತ್ತಮ ಅದೃಷ್ಟವನ್ನು ತರಲಿದೆ. ಮನೆಯಲ್ಲಿನ ವಾತಾವರಣವು ನೆಮ್ಮದಿ ಹಾಗೂ ಶಾಂತಿಯಿಂದಿರುತ್ತದೆ. ಹಣಕಾಸು ಲಾಭವನ್ನು ನಿರೀಕ್ಷಿಸಬಹುದು. ಆದರೂ, ನೀವು ಎಂದಿಗಿಂತ ಸ್ವಲ್ಪ ಹೆಚ್ಚೇ ವೆಚ್ಚಮಾಡಬಹುದು. ಈ ಖರ್ಚುಗಳು ನಿಷ್ಫಲವಲ್ಲ. ನಿಮ್ಮ ಆರೋಗ್ಯ ವೃದ್ಧಿಸುತ್ತದೆ ಮತ್ತು ನೀವು ನಿಮ್ಮ ಕೋಪದ ಮೇಲೆ ನಿಯಂತ್ರಣವಿರಿಸಬೇಕು. ಮಾತಿನ ವೇಳೆ ಎಚ್ಚರದಿಂದಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ.

ಕರ್ಕಾಟಕ :-

ಈ ದಿನವನ್ನು ಹಗುರವಾಗಿ ತೆಗೆದುಕೊಳ್ಳುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿ ನೀವು ಉತ್ತಮವಾಗಿರುವುದಿಲ್ಲ. ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳು ಕಂಡುಬರಬಹುದು. ಮಾನಸಿಕವಾಗಿ ಏನೋ ಒಂದು ನಿಮ್ಮನ್ನು ಕಾಡಬಹುದು. ಯಾವುದನ್ನೇ ಒತ್ತಡವಾಗಿ ಮಾಡುವುದನ್ನು ತಪ್ಪಿಸುವುದು ಉತ್ತಮ ಕ್ರಿಯಾ ಮಾರ್ಗ. ಖರ್ಚು ಹೆಚ್ಚಾಗಲಿವೆ ಮತ್ತು ನೀವು ವಾಗ್ವಾದಗಳಲ್ಲಿ ತೊಡಗಿದಲ್ಲಿ ತಾಳ್ಮೆ ಕಳೆದುಕೊಳ್ಳುವಿರಿ. ಆದ್ದರಿಂದ ಚರ್ಚೆಗಳಿಂದ ದೂರವಿರುವಂತೆ ಸಲಹೆ ನೀಡಲಾಗುತ್ತದೆ. ನಿಮ್ಮ ಪ್ರಯಾಣ ಯೋಜನೆಗಳಿಗೆ ನೀವು ವಿದಾಯ ಹೇಳುವ ಅಗತ್ಯವಿದೆ.

ಸಿಂಹ :-

ಇಂದು ನೀವು ದೈಹಿಕ ತೊಂದರೆ ಹಾಗೂ ಮಾನಸಿಕ ಒತ್ತಡವನ್ನು ಇಂದು ನೀವು ಅನುಭವಿಸುತ್ತೀರಿ.ನಿಮ್ಮ ಪ್ರೀತಿಪಾತ್ರರೊಂದಿಗೆ ಸಣ್ಣ ಜಗಳ ಉಂಟಾಗಬಹುದು. ಇದು ನಿಮ್ಮ ಮಾನಸಿಕ ಪ್ರಕ್ಷುಬ್ಧತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮ್ಮ ತಾಯಿಯೊಂದಿಗಿನ ಸಂಬಂಧವು ಹಾಳಾಗುತ್ತದೆ. ಸಾಮಾನ್ಯವಾಗಿಯೇ ಹಿಂತಿರುಗುವಂತಹ ಯಾವುದನ್ನೇ ಆದರೂ ಮಾಡಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಸರಕಾರಿ ಸಂಸ್ಥೆಗಳೊಂದಿಗಿನ ವ್ಯವಹಾರನ್ನು ಅತ್ಯಂತ ಎಚ್ಚರದಿಂದ ನಿಭಾಯಿಸಬೇಕು. ಸಹಿ ಹಾಕುವ ಮುನ್ನ ದಾಖಲೆ ಪತ್ರಗಳನ್ನು ಸರಿಯಾಗಿ ಓದಿಕೊಳ್ಳಿ.

ಕನ್ಯಾ :-

ಸಂದಾಯ ಮಾಡದೆ ಯಾವುದೇ ಯೋಜನೆಯಲ್ಲಿ ಮುಂದೆ ಸಾಗಬೇಡಿ. ನಂತರ ನೀವು ಪಶ್ಚಾತ್ತಾಪ ಪಡಬೇಕಾದೀತು. ಆದರೂ, ನಿಮ್ಮ ಒಡಹುಟ್ಟಿದವರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲು ಅಷ್ಟೊಂದು ಆಲೋಚಿಸಬೇಕಾಗಿಲ್ಲ. ನೀವು ನಿಮ್ಮ ಸ್ನೇಹಿತರನ್ನು ಮತ್ತು ಕುಟುಂಬ ಸದಸ್ಯರನ್ನು ಭೇಟಿಯಾಗುವಿರಿ ನಿಮ್ಮ ಮಾರ್ಗವು ಸರಿಯಾಗಿದೆ. ನೀವು ಕೈಗೊಂಡ ಕಾರ್ಯಗಳೆಲ್ಲವೂ ಯಶಸ್ವಿಯಾಗುತ್ತದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನೀವು ಉತ್ತಮ ನಿರ್ವಹಣೆ ತೋರುತ್ತೀರಿ.

ತುಲಾ :-

ನಿರ್ಧರಿತವಾಗುವುದರಲ್ಲಿ ನಿಮಗೆ ಯಾವುದೋ ತೊಂದರೆಯಿದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ಈ ಮಾನಸಿಕ ಸಾಮರ್ಥ್ಯದ ಕೊರತೆಯು ಅತೀ ಮುಖ್ಯ ಯೋಜನೆಯನ್ನು ವಿಳಂಬವಾಗಿಸುತ್ತದೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಡಿ. ಅವುಗಳು ನಿಮ್ಮ ಅನಿರ್ಧರಿತ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಬಹುದು. ವಾಗ್ವಾದಗಳ ವೇಳೆ ನಿಮ್ಮ ಪ್ರೀತಿಪಾತ್ರರ ತಪ್ಪುಗಳನ್ನು ಕಡೆಗಣಿಸಲು ಪ್ರಯತ್ನಿಸಿ. ಇದು ವಿಚಾರವನ್ನು ಇನ್ನಷ್ಟು ಜಟಿಲಗೊಳಿಸುತ್ತದೆ.ಇತರರ ದೃಷ್ಟಿಕೋನವನ್ನು ಕಾಣುವ ನಿಮ್ಮ ಪ್ರಾಮಾಣಿಕ ಪ್ರಯತ್ನವು ಒತ್ತಡವನ್ನು ಸ್ವಲ್ಪ ತಗ್ಗಿಸುತ್ತದೆ. ಇದು ಪ್ರಯತ್ನಿಲೇಬಾಕದದ್ದು.

ವೃಶ್ಚಿಕ :-

ಈ ದಿನವು ನಿಮಗೆ ಉತ್ತಮ ದಿನವಾಗಿದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ನಿಮ್ಮ ಮನಸ್ಸು ಮತ್ತು ದೇಹದೊಂದಿಗೆ ಈ ಆತ್ಮವು ಹೊಂದಾಣಿಕೆಯಿಂದಿರುತ್ತದೆ ಮತ್ತು ಇದು ನಿಮಗೆ ಅದ್ಭುತ ಅನುಭವವನ್ನು ನೀಡುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ನಿಮ್ಮನ್ನು ಖುಷಿಯಲ್ಲಿ ನಲಿಯುವಂತೆ ಮಾಡುವ ಶುಭಸುದ್ದಿಯನ್ನು ನಿರೀಕ್ಷಿಸಿ. ಸಾಕಷ್ಟು ಉಡುಗೊರೆಗಳು ಮತ್ತು ವಸ್ತುಗಳು ನಿಮಗೆ ಸಿಗಲಿವೆ.

ಧನು :-

ಇಂದು ನೀವು ಸೋಮಾರಿಯಾಗಿರುತ್ತೀರಿ. ಈ ದಿನವು ತೊಂದರೆಗೊಳಿಂದ ತುಂಬಿರುತ್ತದೆ ಮತ್ತು ಅವುಗಳು ಕೊನೆಯಾಗುವಂತೆ ನೀವು ಪ್ರಾರ್ಥಿಸುತ್ತೀರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ತೀವ್ರ ವಾಗ್ವಾದವನ್ನು ಹೊಂದುತ್ತೀರಿ ಇದು ನಿಮ್ಮನ್ನು ವಿಶೇಷವಾಗಿ ವ್ಯಥೆಯಲ್ಲಿರಿಸುತ್ತದೆ. ನೀವು ಒಂಟಿಯಾಗಿದ್ದು, ನಿಮ್ಮ ತಪ್ಪಿನ ಬಗ್ಗೆ ವಿಮರ್ಶೆ ನಡೆಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ಇತರ ಯಾವುದೇ ವಿಚಾರಗಳಲ್ಲಿ ತಾಳ್ಮೆ ಕಳೆದುಕೊಳ್ಳುವುದು ಯಾವುದೇ ಪರಿಹಾರವಲ್ಲ. ಜಾಗರೂಕರತೆಯಿಂದ ವಾಹನ ಚಲಾಯಿಸಿ ಮತ್ತು ನಿಮ್ಮ ಜೀವನ ಅದಕ್ಕೆ ಅವಲಂಬಿತವಾಗಿದ್ದರೆ, ಸಂಚಾರಿ ನಿಯಮಗಳನ್ನು ಪಾಲಿಸಿ. ಸದ್ಯಕ್ಕೆ ನೀವು ಪ್ರಯಾಣ ಯೋಜನೆಗಳನ್ನು ಮುಂದೂಡಿದರೆ ಉತ್ತಮ.

ಮಕರ :-

ಉತ್ತಮ ಮತ್ತು ವಿಶೇಷ ದಿನವಾಗಿದೆ. ನೀವು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರನ್ನು ಭೇಟಿ ಮಾಡುವಿರಿ. ಇದು ಹಲವು ಸಮಯಗಳ ಕಾಲ ನಡೆಯದೇ ಇದ್ದಿರಬಹುದು. ವ್ಯವಹಾರ, ಸಮಾಜವಾದ ಮತ್ತು ಇತರ ಚಟುವಟಿಕೆಗಳಿಗೆ ಈ ದಿನವ ಉತ್ತಮ. ನೀವು ಸಂಗಾತಿಗಾಗಿ ಅನ್ವೇಷಣೆಯಲ್ಲಿ ತೊಡಗಿದ್ದರೆ ಇಂದು ಅದಕ್ಕೆ ಪೂರ್ಣವಿರಾಮ ಸಿಗಬಹುದು. ಆಕರ್ಷಕ ಪ್ರದೇಶಗಳಿಗೆ ಸಣ್ಣ ಪ್ರವಾಸ ತೆರಳುವ ಸಾಧ್ಯತೆಯಿದೆ ಮತ್ತು ಕೆಲವು ಅನುಕೂಲಕರ ಸಮಾರಂಭಗಳು ಮನೆಯಲ್ಲಿ ನಡೆಯಲಿವೆ.

ಕುಂಭ :-

ಇಂದು ನಿಮಗೆ ಅದೃಷ್ಟದ ದಿನ. ಇಂದು ನೀವು ಕೈಗೆತ್ತಿಕೊಂಡ ಕಾರ್ಯಗಳನ್ನು ಶ್ರಮವಿಲ್ಲದೆ ಪೂರೈಸುತ್ತೀರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ದಿನಪೂರ್ತಿ ನೀವು ಉಲ್ಲಾಸದಿಂದಿರುತ್ತೀರಿ. ನಿಮ್ಮ ಕಾರ್ಯದಲ್ಲಿನ ದಕ್ಷತೆಯು ನಿಮ್ಮ ಮೇಲಾಧಿಕಾರಿಗಳನ್ನು ಪ್ರಭಾವಿತಗೊಳಿಸುತ್ತದೆ ಮತ್ತು ಬಡ್ತಿ ನೀಡುವ ಬಗ್ಗೆ ಇದು ಅವರನ್ನು ಪ್ರಚೋದಿಸಬಹುದು. ನೀವು ಹಿರಿಯರಿಂದ ಆಶೀರ್ವಾದವನ್ನು ಪಡೆಯುವಿರಿ ಮತ್ತು ನೀವು ಅವರಿಗಾಗಿ ಸಾಯಲು ಬಯಸುವಂತಹ ಅತೀ ಉತ್ತಮ ಕುಟುಂಬವನ್ನು ನೀವು ಹೊಂದಿರುವಿರಿ.

ಮೀನ :-

ನಿಮ್ಮ ದಿನದಲ್ಲಿ ಇವತ್ತು ಉದ್ವೇಗ ಹಾಗು ಶಾ೦ತಿ ಎರಡನ್ನೂ ಕಾಣುವಿರಿ ಎ೦ದು ಗಣೇಶ ಹೇಳುತ್ತಾರೆ. ಆದಷ್ಟು ತಾಳ್ಮೆ ಮತ್ತು ನ೦ಬಿಕೆ ಇಡಿ. ಆದರೆ ಈ ವಾತಾವರಣದಲ್ಲಿ ನೀವು ಆಯಾಸ ಮತ್ತು ಉದಾಸೀನದ ಅನುಭವ ಕಾಣುತ್ತೀರಿ. ಇದು ನಿಮ್ಮ ಯಾವುದೋ ಬೇಸರದಿ೦ದ ಆಗಿರಬಹುದು. ಆದಷ್ಟು ನಿಮ್ಮ ಮೇಲಧಿಕಾರಿಯಿ೦ದ ದೂರವಿದ್ದು , ಬೇಡದ ತೊ೦ದರೆಯಿ೦ದ ದೂರವಿರಿ. ಇದು ನಿಮ್ಮನ್ನು ನಿಮ್ಮ ವೈರಿಗಳ ಕಿರುಕುಳದಿ೦ದ ದೂರವಿಡುವುದು. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ನಿಮ್ಮ ಮಕ್ಕಳೊ೦ದಿಗೆ ಸಮಯವನ್ನು ಕಳೆಯಿರಿ. ಧನಾತ್ಮಕವಾಗಿ ಯೋಚಿಸಿ.

WhatsApp Group Join Now

Spread the love

Leave a Reply