ಆತ ಬಿಟ್ರೂ ಆಕೆ ಬಿಡ್ಲಿಲ್ಲ : ವ್ಯಕ್ತಿಯನ್ನು ಬಲಿ ಪಡೆಯಿತಾ ಮಹಿಳೆಯ ಅಕ್ರಮ ಸಂಬಂಧ.? ಆತ್ಮಹತ್ಯೆಗೆ ಶರಣು.!

Spread the love

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ವಿವಾಹಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಹಿಂದೆ ಹನಿಟ್ರ್ಯಾಪ್‌ ಶಂಕೆ ವ್ಯಕ್ತವಾಗಿದೆ. ಶಿಡ್ಲಘಟ್ಟ ಮೂಲದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕ, ಆಕೆಯ ಬ್ಲ್ಯಾಕ್‌ಮೇಲ್‌ಗೆ ಹೆದರಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.

WhatsApp Group Join Now

ಹನಿಟ್ರ್ಯಾಪ್‌ಗೆ ವಿವಾಹಿತ ಯುವಕನೊಬ್ಬ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

30 ವರ್ಷದ ಬಾಲಾಜಿ ಸಿಂಗ್‌ ಮೃತ ವ್ಯಕ್ತಿ. ಈತ ಸಾವಿನ ಹಿಂದೆ ಹನಿಟ್ರ್ಯಾಪ್‌ ಅನುಮಾನ ಬಂದಿದೆ. ಮೃತ ಬಾಲಾಜಿಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇದೆ. ಆದರೂ ಕೂಡ ಶಿಡ್ಲಘಟ್ಟ ಮೂಲದ ಮಹಿಳೆಯ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಆಕೆಯ ಜೊತೆಯೇ ಪ್ರತಿದಿನ ಫೋನ್‌ನಲ್ಲಿ ಬ್ಯುಸಿ ಆಗಿರುತ್ತಿದ್ದ ಎನ್ನಲಾಗಿದೆ.

ಇನ್ನು ಆರೋಪಿಯಾಗಿರುವ ಶಿಡ್ಲಘಟ್ಟ ಮೂಲದ ಮಹಿಳೆ ಗಾಯತ್ರಿಗೆ ಕೂಡ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಇಬ್ಬರ ನಡುವೆ ಆರಂಭದಲ್ಲಿ ಸ್ನೇಹ ಶುರುವಾಗಿತ್ತು.

ಈ ಸ್ನೇಹ ಶುರುವಾಗಿದ್ದರ ಹಿಂದೆಯೂ ಸ್ಟೋರಿ ಇದೆ. ಆರೋಪಿಯಾಗಿರುವ ಗಾಯತ್ರಿಯ ಗಂಡ, ಬಾಲಾಜಿ ಸಿಂಗ್‌ ಅವರ ಮನೆಗೆ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿದ್ದ.

WhatsApp Group Join Now

ಈ ಹಂತದಲ್ಲಿ ಬಾಲಾಜಿ ಸಿಂಗ್‌ಗೆ ಗಾಯತ್ರಿಯ ಪರಿಚಯ ಆಗಿದೆ. ಅದು ಸ್ನೇಹಕ್ಕೆ ತಿರುಗಿ ಬಳಿಕ ಅಕ್ರಮ ಸಂಬಂಧದವರೆಗೆ ಬೆಳೆದಿದೆ. ಗಾಯತ್ರಿಯ ಅಕ್ರಮ ಸಂಬಂಧ ಗೊತ್ತಾದ ಬಳಿಕ ಆಕೆಯ ಗಂಡ ಆಕೆಯನ್ನು ಬಿಟ್ಟು ಹೋಗಿದ್ದಾನೆ. ಕೊನೆಗೆ ಈ ವಿಚಾರ, ಬಾಲಾಜಿ ಸಿಂಗ್‌ ಮನೆಯವರಿಗೂ ಗೊತ್ತಾಗಿದೆ.

ಬಾಲಾಜಿ ಸಿಂಗ್‌ ಪತ್ನಿ ವಿಚಾರ ತಿಳಿದು ರೌದ್ರಾವತಾರ ತಾಳಿದ್ದಾಳೆ. ಈ ಹಂತದಲ್ಲಿ ಬಾಲಾಜಿ, ‘ನನಗೆ ನೀನು ಬೇಕು. ಆಕೆಯನ್ನು ಬೇಕಾದರೆ ಬಿಡ್ತಿನಿ. ಆದರೆ, ಆಕೆ ನನ್ನ ಬ್ಲ್ಯಾಕ್‌ಮೇಲ್‌ ಮಾಡಿ ಹೆದರಿಸುತ್ತಿದ್ದಾಳೆ’ ಎಂದು ಪತ್ನಿಗೆ ತಿಳಿಸಿದ್ದ. ಇದರ ಬೆನ್ನಲ್ಲಿಯೇ ಆರೋಪಿ ಮಹಿಳೆಗೆ ಕುಟುಂಬ ವಾರ್ನ್‌ ಮಾಡಿತ್ತು.

ಆದರೆ ಬಾಲಾಜಿ ಸಿಂಗ್‌ಮನೆಗೆ ಬಂದಿದ್ದ ಗಾಯತ್ರಿ, ಇವನನ್ನು ಬಿಡೋದಿಲ್ಲ ಎಂದಿದ್ದಳು. ಇದೇ ವಿಚಾರಕ್ಕೆ ಹಲವು ಬಾರಿ ಗಲಾಟೆ ಮಾಡಿದ್ದಳು. ಹನಿಟ್ರ್ಯಾಪ್‌ ಮಾಡಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದಳು. ಇದೇ ವಿಚಾರಕ್ಕೆ ಶುಕ್ರವಾರ ಗಾಯತ್ರಿ ಜೊತೆ ಗಲಾಟೆ ಮಾಡಿದ್ದ. ಆ ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

WhatsApp Group Join Now

Spread the love

Leave a Reply