‘ಈಶ್ವರನಿಗಿಂತ ದೊಡ್ಡ ದೇವರಿಲ್ಲ ನಂಬಿಕೆಗಿಂತ ದೊಡ್ಡ ಗುಣವಿಲ್ಲ’ : ಮತ್ತೆ ಸಿಎಂಗೆ ಪರೋಕ್ಷವಾಗಿ ಕುಟುಕಿದ ಡಿಸಿಎಂ ಡಿಕೆಶಿ

Spread the love

ನಿಂಬೆಗಿಂತ ಹುಳಿ ಇಲ್ಲ ದುಂಬಿಗಿಂತ ತಪ್ಪಿಲ್ಲ ಈಶ್ವರನಿಗಿಂತ ದೊಡ್ಡ ದೇವರಿಲ್ಲ ನಂಬಿಕೆಗಿಂತ ದೊಡ್ಡ ಗುಣವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸರ್ವಜ್ಞನ ವಚನ ಉಲ್ಲೇಖಿಸಿ ಮಾತನಾಡಿದರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಸಮಗ್ರ ಕೃಷಿ ಅಭಿವೃದ್ಧಿ ಯೋಜನೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಸರ್ವಜ್ಞನ ವಚನ ದೊಂದಿಗೆ ಭಾಷಣ ಆರಂಭಿಸಿದರು.

ಈಶ್ವರನಿಗಿಂತ ದೊಡ್ಡ ದೇವರಿಲ್ಲ ನಂಬಿಕೆಗಿಂತ ದೊಡ್ಡ ಗುಣವಿಲ್ಲ ನಿಂಬೆಗಿಂತ ಹುಳಿ ಇಲ್ಲ ದುಂಬಿಗಿಂತ ಕಪ್ಪಿಲ್ಲ ದೇವರು ವರನೂ ಕೊಡಲ್ಲ ಶಾಪವೂ ಕೊಡಲ್ಲ ಆದರೆ ಅವಕಾಶ ಕೊಡುತ್ತಾನೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಭಾಷಣದಲ್ಲಿ ತಿಳಿಸಿದರು.

ಇನ್ನು ನಿನ್ನೆಯೂ ಸಹ ಸಿಎಂ ಡಿಸಿಎಂ ನಡುವೆ ಟ್ವೀಟ್ ವಾರ್ ನಡೆದಿತ್ತು. ಬೆಳಿಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿ ದೊಡ್ಡ ಶಕ್ತಿ. ಯಾರೇ ಆಗಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ಜಡ್ಜ್ ಆಗಲಿ, ಅಧ್ಯಕ್ಷರಾಗಲಿ, ಯಾರೇ ಆಗಿರಲಿ. ನನ್ನನ್ನು ಸೇರಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ” ಎಂದು ಡಿಕೆ ಶಿವಕುಮಾರ್ ಅವರ ಅಧಿಕೃತ ಖಾತೆಯಿಂದ ಟ್ವೀಟ್‌ ಮಾಡಿದ್ದರು. ಆದರೆ, ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ” ನಾನು ಆ ರೀತಿ ಪೋಸ್ಟ್ ಮಾಡಿಲ್ಲ ” ಎಂದು ಪ್ರತಿಕ್ರಿಯೆ ನೀಡಿದರು.

ಬಳಿಕ ಸಿಎಂ ಸಿದ್ದರಾಮಯ್ಯ ಒಂದು ಮಾತು ಜಗತ್ತನ್ನು ಉತ್ತಮಗೊಳಿಸದ ಹೊರತು ಅದು ಶಕ್ತಿಯಲ್ಲ. ಶಕ್ತಿ ಯೋಜನೆಯು ನಮ್ಮ ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಬಸ್‌ ಪ್ರಯಾಣವನ್ನು ತಲುಪಿಸಿದೆ. ಸರ್ಕಾರವನ್ನು ರಚಿಸಿದ ಮೊದಲ ತಿಂಗಳಿನಿಂದಲೇ, ನಾವು ನಮ್ಮ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಪದಗಳಲ್ಲಿ ಅಲ್ಲ, ಕಾರ್ಯದಲ್ಲಿದೆ.

ಶಕ್ತಿ – 600 ಕೋಟಿಗೂ ಹೆಚ್ಚು ಉಚಿತ ಪ್ರವಾಸಗಳು ಪೂರ್ಣವಾಗಿವೆ. ಗೃಹ ಲಕ್ಷ್ಮಿ ಯೋಜನೆಯಲ್ಲಿ 1.24 ಕೋಟಿ ಮಹಿಳಾ ನೇತೃತ್ವದ ಕುಟುಂಬಗಳಿಗೆ ಸಬಲೀಕರಣ, ಯುವ ನಿಧಿ – 3 ಲಕ್ಷಕ್ಕೂ ಹೆಚ್ಚು ಯುವಕರಿಗೆ ಭದ್ರತೆ ಮತ್ತು ಭರವಸೆಯೊಂದಿಗೆ ಬೆಂಬಲ ನೀಡಲಾಗಿದೆ. ಅನ್ನ ಭಾಗ್ಯ 2.0 – 4.08 ಕೋಟಿ ನಾಗರಿಕರಿಗೆ ಆಹಾರ ಭದ್ರತೆ, ಗೃಹ ಜ್ಯೋತಿ – 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ ಎಂದು ಸಿಎಂ ಪ್ರಸ್ತಾಪ ಮಾಡಿದ್ದಾರೆ.

WhatsApp Group Join Now

Spread the love

Leave a Reply