ಈಗಾಗಲೇ ನಾವು ಸುಸ್ತಾಗಿದ್ದೇವೆ. ಹಾಗಾಗಿ ಹೊಸ ಪಿಂಚಣಿ ಹಳೇ ಪಿಂಚಣಿಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ ಹಾಗೂ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಶಿಕ್ಷಕರ ಸಂಘದ 26 ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಶಿಕ್ಷಕರ ಸಂಘಕ್ಕೆ ಜಾಗ ಕೊಡುವುದು ನಮ ವ್ಯಾಪ್ತಿಯಲ್ಲಿ ಇದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುವದಾಗಿ ಭರವಸೆ ನೀಡಿದರು.ಮತದಾರರ ಪಟ್ಟಿ ಪರಿಷ್ಕರಣೆಯಿಂದ ಕೈ ಬಿಡುವಂತೆ ಶಿಕ್ಷಕರು ಬೇಡಿಕೆ ಸಲ್ಲಿಸಿರುವುದನ್ನು ಪರಿಗಣಿಸಲು ಸಾಧ್ಯವಿಲ್ಲ. ಬೇರೆಯವರು ಈ ಕೆಲಸವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಹಾಗಾಗಿ ಶಿಕ್ಷಕರೇ ಈ ಕೆಲಸ ಮಾಡಬೇಕು ಎಂದು ಒತ್ತಿ ಹೇಳಿದರು.
ಶಿಕ್ಷಕ ವೃತ್ತಿಯ ಬಗ್ಗೆ ಅಪಾರವಾದ ಗೌರವ ಇದೆ. ಸರ್ಕಾರಿ ಶಿಕ್ಷಕರಿಗೆ ಲಂಚ ಸಿಗುವುದಿಲ್ಲ. ಅವರ ಶಿಷ್ಯರು ಉನ್ನತ ಹುದ್ದೆಗೆ ಹೋಗುವುದೇ ಶಿಕ್ಷಕರಿಗೆ ದೊರೆಯುವ ನಿಜವಾದ ಆತ ಸಂತೃಪ್ತಿಯಾಗಿದೆ. ಇತಿಹಾಸ ನಿರ್ಮಿಸುವ ಶಿಕ್ಷಕರನ್ನು ಸಿದ್ಧಪಡಿಸುವ ಮಹತ್ವಕಾಂಕ್ಷೆಯನ್ನು ಪ್ರತಿಯೊಬ್ಬರು ಹೊಂದಿರುತ್ತಾರೆ. ಮಕ್ಕಳನ್ನು ಉನ್ನತ ಹುದ್ದೆಯ ಕನಸು ಕಾಣುವ ಮಟ್ಟಕ್ಕೆ ಬೆಳೆಸಬೇಕು ಎಂದರು.
ಶಿಕ್ಷಕರು ತಮ್ಮ ಬದುಕಿನಲ್ಲಿ ದೊಡ್ಡ ತ್ಯಾಗ ಮಾಡಿರುತ್ತಾರೆ. ಶಿಕ್ಷಕರ ಹೋರಾಟ ಮತ್ತು ಬದುಕುಗಳು ನಮಗೆ ಗೊತ್ತಿದೆ. ರಾಜಕೀಯದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಚುನಾವಣೆಯಲ್ಲಿ ಸೋಲಿಸುವ ಅಥವಾ ಗೆಲ್ಲಿಸುವ ಸಾಮರ್ಥ್ಯ ಶಿಕ್ಷಕರಿಗೆ ಎಂದರು. ಶಿಕ್ಷಕರ ಬೇಡಿಕೆಗಳಿಗೆ ತಮ್ಮಸರ್ಕಾರ ಸ್ಪಂದಿಸಿದೆ. ಅದರ ಉಪಕಾರ ಸರಣೆ ಇರಲಿ ಎಂದು ಹೇಳಿದರು.
ಒಂದು ಲಕ್ಷ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಚರ್ಚೆಯಾಗಿದೆ. ಮೊದಲ ಹಂತದಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ಸಂಪುಟದಲ್ಲಿ 5 ಗಂಟೆಗಳ ಕಾಲ ಚರ್ಚೆ ಮಾಡಿದ್ದೇವೆ. ಒಳ ಮೀಸಲಾತಿಯ ಗೊಂದಲ, ಸಾಧಕ-ಭಾದಕಗಳು, ನ್ಯಾಯಾಲಯದ ತೀರ್ಮಾನಗಳ ಬಗ್ಗೆ ಸಮಾಲೋಚನೆಗಳಾಗಿವೆ ಎಂದರು.
ಮಕ್ಕಳಲ್ಲಿ ಆತವಿಶ್ವಾಸ ಹೆಚ್ಚಿಸಲು ಶಿಕ್ಷಕರು ಆಸಕ್ತಿ ವಹಿಸಬೇಕು. ಸಾಮಾಜಿಕ ಹೊಣೆಗಾರಿಕೆ ಅಡಿ ರಾಜ್ಯದಲ್ಲಿ 8 ಸಾವಿರ ಕೋಟಿ ರೂಪಾಯಿ ಉತ್ಪಾದನೆಯಾಗುತ್ತಿದೆ. ಅದು ಎಲ್ಲಿಯೂ ಹೋಗಬಾರದು. ಗ್ರಾಮೀಣ ಭಾಗದ ಶಿಕ್ಷಣಕ್ಕೆ ಉತ್ತಮ ಮೂಲಭೂತ ಸೌಲಭ್ಯ ಕಲ್ಪಿಸಲು ಈ ಹಣವನ್ನು ಖರ್ಚು ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ಇದಕ್ಕಾಗಿ ರೂಪಿಸಿರುವ ನಿಯಮಗಳು ನನಗೆ ಸಮಾಧಾನ ತಂದಿಲ್ಲ ಎಂದರು.
ಹಳ್ಳಿಗಳಿಂದ ನಗರಕ್ಕೆ ವಿದ್ಯಾರ್ಥಿಗಳು ವಲಸೆ ಬರುವುದನ್ನು ತಪ್ಪಿಸಲು, ಸ್ಥಳೀಯವಾಗಿವೆಯೇ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಸ್ಥಳೀಯ ಶಾಲೆಗಳಿಗೆ 90 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು, ಸ್ಥಳೀಯವಾಗಿಯೇ ಸಂಬಳ ಕೊಟ್ಟು ಶಾಲೆಗಳನ್ನು ನಡೆಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಬಂಗಾರಪ್ಪ ಅವರ ಕಾಲದಲ್ಲಿ ಗ್ರಾಮೀಣ ಕೃಪಾಂಕ ನೀಡಲಾಗಿತ್ತು. ರಾಜೀವ್ ಗಾಂಧಿ ಅವರು ಕಪ್ಪುಹಲಗೆ ಯೋಜನೆ ಜಾರಿಗೆ ತಂದಿದ್ದರು. ಉತ್ತಮ ಯೋಜನೆಗಳ ಮೂಲಕ ಶಿಕ್ಷಕರಿಗೆ ಕುದುರೆ ನೀಡಲಾಗಿದೆ, ಅದನ್ನು ಸರಿಯಾಗಿ ನಡೆಸಿ. ಬೆಂಗಳೂರಿನ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಎಂದರು.
ಹೆಚ್ಚು ಕೆಲಸ ಮಾಡಿದರೆ, ತಪ್ಪುಗಳಾಗುತ್ತವೆ, ಕೆಲಸ ಮಾಡದೇ ಇದ್ದರೆ ತಪ್ಪುಗಳೇ ಆಗುವುದಿಲ್ಲ. ಹಾಗಾಗಿ ಕೆಲಸ ಮಾಡಿ ಎಂದ ಅವರು, ಇಲ್ಲಿ ನಾನು ಏನು ಮಾತನಾಡಿದರೂ ಕಷ್ಟ. ಟಿವಿಯವರಂತೆ ನಮ ಹೇಳಿಕೆಯನ್ನು ನಮಗೆ ಹಾಕಿ ತೋರಿಸಲಾಗುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಈಗಾಗಲೇ ನಾವು ಸುಸ್ತಾಗಿದ್ದೇವೆ, ಪಿಂಚಣಿಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ : ಡಿಸಿಎಂ ಡಿ.ಕೆ ಶಿವಕುಮಾರ್
WhatsApp Group
Join Now