ರಾಜ್ಯ ಸರ್ಕಾರ ಜಾತಿ ಜನಗಣತಿಗಾಗಿ ಶಾಲಾ ಮಕ್ಕಳ ದಸರಾ ಹಬ್ಬದ ರಜೆಯನ್ನ ಅಕ್ಟೋಬರ್ 18ರವರೆಗೆ ವಿಸ್ತರಣೆ ಮಾಡಿರುವುದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಸದ್ಯ ಅಕ್ಟೋಬರ್ 18ರವರೆಗೆ ರಜೆಯನ್ನ ವಿಸ್ತರಣೆ ಮಾಡಿರುವ ಕರ್ನಾಟಕ ರಾಜ್ಯ ಸರ್ಕಾರ ಈಗ ಶಾಲಾ ಮಕ್ಕಳಿಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ.
ಅಕ್ಟೋಬರ್ 18 ರಿಂದ ಶಾಲೆಗೆ ಹೋಗುವ ಎಲ್ಲಾ ಮಕ್ಕಳು ಈ ನಿಯಮವನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ಕರ್ನಾಟಕದಲ್ಲಿ ಈ ಹಿಂದೆ ಮಳೆಯಿಂದಾಗಿ ಶಾಲಾ ಮಕ್ಕಳು ಸಾಕಷ್ಟು ರಜೆಯನ್ನ ಪಡೆದುಕೊಂಡಿದ್ದರು. ಅದೇ ರೀತಿಯಲ್ಲಿ ಈಗ ಜಾತಿ ಜನಗಣತಿಗಾಗಿ ದಸರಾ ಹಬ್ಬದ ರಜೆಯನ್ನು ಕೂಡ ವಿಸ್ತರಣೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಇಷ್ಟೊಂದು ರಜೆಯನ್ನು ನೀಡುತ್ತಿರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ಸಮಸ್ಯೆ ಉಂಟಾಗುತ್ತಿದೆ ಅಂತ ಸಾಕಷ್ಟು ಪೋಷಕರು ತಮ್ಮ ಕಳವಳವನ್ನ ವ್ಯಕ್ತಪಡಿಸಿದ್ದಾರೆ.
ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ ಶಾಲಾ ಮಕ್ಕಳಿಗೆ ದಸರಾ ಹಬ್ಬದ ರಜೆಯನ್ನ ಸರಿದೂಗಿಸುವ ಉದ್ದೇಶದಿಂದ ಭಾನುವಾರ ಕೂಡ ತರಗತಿಗಳನ್ನು ತೆಗೆದುಕೊಳ್ಳುವಂತೆ ಆದೇಶವನ್ನು ಹೊರಡಿಸಲು ಮುಂದಾಗಿದೆ. ದಸರಾ ಹಬ್ಬದ ರಜೆಯನ್ನ ಸರಿದೂಗಿಸುವ ಉದ್ದೇಶದಿಂದ ಮಕ್ಕಳು ಭಾನುವಾರ ಕೂಡ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ. ಒಂದೆರಡು ತಿಂಗಳು ಭಾನುವಾರ ಕೂಡ ಮಕ್ಕಳಿಗೆ ತರಗತಿಯನ್ನ ಮಾಡುವುದರ ಮೂಲಕ ದಸರಾ ಹಬ್ಬದ ರಜೆಯನ್ನ ಸರಿದೂಗಿಸಲು ರಾಜ್ಯ ಸರ್ಕಾರ ಈಗ ಮುಂದಾಗಿದೆ.
ಶಾಲಾ ಮಕ್ಕಳ ದಸರಾ ಹಬ್ಬದ ರಜಾ ಅವಧಿಯನ್ನ ವಿಸ್ತರಣೆ ಮಾಡಿರುವುದು ಅವರ ವಿದ್ಯಾಭ್ಯಾಸದ ಮೇಲೆ ನೇರವಾಗಿ ಪರಿಣಾಮವನ್ನ ಉಂಟುಮಾಡಿದೆ. ಈ ಕಾರಣಗಳಿಂದ ಮಕ್ಕಳ ಪಠ್ಯಕ್ರಮವನ್ನ ಪೂರ್ಣ ಮಾಡುವ ಉದ್ದೇಶದಿಂದ ಭಾನುವಾರ ಕೂಡ ತರಗತಿಗಳನ್ನ ನಡೆಸುವಂತೆ ರಾಜ್ಯ ಸರ್ಕಾರ ಈಗ ಆದೇಶವನ್ನು ಹೊರಡಿಸಲು ಮುಂದಾಗಿದೆ.

ದಸರಾ ರಜೆ ಮುಂದೂಡಿದ ಬೆನ್ನಲ್ಲೇ ಮಕ್ಕಳಿಗೆ ಹೊಸ ರೂಲ್ಸ್ | Dasara Holiday
WhatsApp Group
Join Now