ದಿನ ಭವಿಷ್ಯ 26 ಜೂನ್ 2025
ಮೇಷ ರಾಶಿ (Aries) : ಈ ದಿನ ಕೆಲಸದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಭಾವೋದ್ವೇಗದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಮನೆಯವರ ಸಲಹೆಗೆ ಬೆಲೆ ಕೊಡಿ. ಖರ್ಚು ವಿಚಾರದಲ್ಲಿ ನಿಯಂತ್ರಣ ಇರಲಿ. ಜೀವನದ ಗುರಿಗಳತ್ತ ಚಿಂತನೆ ಶುರುಮಾಡಿ. ನಿಮ್ಮ ಪ್ರತಿಭೆ ಗುರುತಿಗೆ ಬರಬಹುದು. ನಿಮ್ಮ ಸಂಭಾಷಣೆಯ ವಿಧಾನವನ್ನು ಸೌಮ್ಯವಾಗಿರಿಸಿಕೊಳ್ಳಿ. ಸಂಜೆ ನೆಮ್ಮದಿಯ ಸಮಯ ಸಿಗಬಹುದು.
ವೃಷಭ ರಾಶಿ (Taurus) : ಇಂದು ಹೊಸ ಉತ್ಸಾಹದಲ್ಲಿ ನಿಮ್ಮ ದಿನ ಆರಂಭವಾಗಬಹುದು. ಕೆಲಸದ ಜಾಗದಲ್ಲಿ ಸಣ್ಣ ಒತ್ತಡಗಳು ಇದ್ದರೂ ನೀವು ಸೈಎನಿಸಿಕೊಳ್ಳುವಿರಿ. ಹಿರಿಯರಿಂದ ಬೆಂಬಲ ಸಿಗಬಹುದು. ಹಳೆಯ ಗೆಳೆಯರ ಭೇಟಿಯಿಂದ ಸಂತೋಷ. ಹಣದ ವಿಚಾರದಲ್ಲಿ ಅತಿಯಾದ ನಿರೀಕ್ಷೆ ಬೇಡ. ಸಂಬಂಧಗಳಲ್ಲಿ ಸ್ಪಷ್ಟತೆ ಇರಲಿ. ಆರೋಗ್ಯದ ಕಡೆ ಗಮನವಿರಲಿ.
ಮಿಥುನ ರಾಶಿ (Gemini) : ಇಂದಿನ ದಿನ ನಿಮ್ಮ ಮಾತುಗಳು ಅಪಾರ ಶಕ್ತಿ ಹೊಂದಿವೆ. ಆದರೂ ಉದ್ಯೋಗದ ಜಾಗದಲ್ಲಿ ಒತ್ತಡ ಹೆಚ್ಚಾಗಬಹುದು. ಕುಟುಂಬದಲ್ಲಿ ಸಾಮರಸ್ಯ ಇರುವುದು ಶುಭ. ಹಣಕಾಸಿನಲ್ಲಿ ಚಿಕ್ಕ ಲಾಭದ ಸೂಚನೆ ಇದೆ. ಪ್ರವಾಸದ ಯೋಗವಿದೆ. ಆರೋಗ್ಯದಲ್ಲಿ ಸಾಮಾನ್ಯ ಜಟಿಲತೆ ಸಾಧ್ಯ. ಆತ್ಮವಿಶ್ವಾಸ ಹೆಚ್ಚಾದರೆ ಸಮಸ್ಯೆಗಳು ನಿವಾರಣೆ ಆಗುತ್ತವೆ.
ಕಟಕ ರಾಶಿ (Cancer) : ನಿಮ್ಮ ಆಂತರಿಕ ಶಕ್ತಿ ಇಂದು ನಿಮಗೆ ನೆರವಾಗುವ ದಿನ. ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆ ಕಾಣಬಹುದು. ಬುದ್ಧಿವಂತಿಕೆ ಹೆಚ್ಚು ಅಗತ್ಯವಾಗಿರುವ ದಿನ. ಮನಸ್ಸಿನ ಮಾತುಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಿ, ಹಗುರವಾಗುತ್ತದೆ. ಹಣಕಾಸಿನಲ್ಲಿ ಸಾಧಾರಣ ಸ್ಥಿತಿ. ಸ್ನೇಹಿತರಿಂದ ಪ್ರೇರಣೆಯ ಮಾತುಗಳು ಬರುತ್ತವೆ. ಅಲಸ್ಯ ಬೇಡ. ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ.
ಸಿಂಹ ರಾಶಿ (Leo) : ಇಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗಂಭೀರವಾಗಿರಿ. ತಾತ್ಕಾಲಿಕ ಆಕರ್ಷಣೆಗೆ ಓಡಬೇಡಿ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಹೆಸರು ಬೆಳಗಲಿದೆ. ಆರ್ಥಿಕವಾಗಿ ಸಾಮಾನ್ಯ ದಿನ. ಸಂಬಂಧಗಳಲ್ಲಿ ನಂಬಿಕೆಯ ಅವಶ್ಯಕತೆ ಇದೆ. ಅಚಾನಕ್ ಖರ್ಚು ನಡೆಯುವ ಸಾಧ್ಯತೆ. ಸೋಮಾರಿತನ ಮತ್ತು ಒತ್ತಡದಂತಹ ಪರಿಸ್ಥಿತಿಗಳು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು ಎಂಬುದನ್ನು ನೆನಪಿನಲ್ಲಿಡಿ.
ಕನ್ಯಾ ರಾಶಿ (Virgo) : ಇಂದು ಜವಾಬ್ದಾರಿ ಹೆಚ್ಚು, ಆದರೆ ಸಾಧನೆಯ ಭರವಸೆ ಕೂಡ ಇದೆ. ತಾಳ್ಮೆ ಇರಿಸಿ ಎಲ್ಲ ಕಾರ್ಯಗಳನ್ನು ಕ್ರಮವಾಗಿ ನಿಭಾಯಿಸಿ. ಜೀವನ ಸಂಗಾತಿಯಿಂದ ಭಾವನಾತ್ಮಕ ಬೆಂಬಲ ಸಿಗಬಹುದು. ಹಣಕಾಸಿನಲ್ಲಿ ಮುಂಜಾಗ್ರತೆ ಅವಶ್ಯ. ಆತ್ಮಪರಿಶೀಲನೆಗೆ ಸಮಯ ತೆಗೆದುಕೊಳ್ಳಿ. ಹೊಸ ವ್ಯಕ್ತಿಯಿಂದ ಸಂಪರ್ಕ ಆಗುವ ಸಾಧ್ಯತೆ. ಆರೋಗ್ಯ ನಿರ್ವಹಣೆ ಅಗತ್ಯ. ದಿನದ ಅಂತ್ಯದಲ್ಲಿ ತೃಪ್ತಿ ಲಭಿಸಬಹುದು.
ತುಲಾ ರಾಶಿ (Libra) : ಕೆಲಸದ ವಿಚಾರದಲ್ಲಿ ಒತ್ತಡವಿದ್ದರೂ ಅದನ್ನು ನಿಯಂತ್ರಿಸಲು ಸಾಧ್ಯ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹಣಕಾಸಿನ ನಷ್ಟ ತಪ್ಪಿಸಲು ದಕ್ಷತೆಯ ಅಗತ್ಯವಿದೆ. ಕುಟುಂಬದಲ್ಲಿ ಸಂತೋಷದ ಕ್ಷಣಗಳು. ಸ್ನೇಹಿತರಿಂದ ಪ್ರೋತ್ಸಾಹ. ಆತ್ಮಸ್ಥೈರ್ಯದಿಂದ ಮುಂದುವರಿಯಿರಿ. ಭಾವನೆಗಳು ನಿಯಂತ್ರಣದಲ್ಲಿ ಇರಲಿ. ಅಲ್ಪ ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸಿ.
ವೃಶ್ಚಿಕ ರಾಶಿ (Scorpio) : ಇಂದು ಹೊಸ ಯೋಜನೆಗಳನ್ನು ರೂಪಿಸಲು ಉತ್ತಮ ಸಮಯ. ಬೇರೆಯವರ ಮೇಲೆ ಅವಲಂಬನೆ ಕಡಿಮೆ ಮಾಡುವುದು ಒಳ್ಳೆಯದು. ನಿಗದಿತ ಕಾರ್ಯಗಳಲ್ಲಿ ವ್ಯತ್ಯಯ ಬರಬಹುದು. ಪ್ರೀತಿಯ ವ್ಯಕ್ತಿಯಿಂದ ಸಿಹಿ ಸುದ್ದಿಯ ನಿರೀಕ್ಷೆ. ಮನೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ. ಆರೋಗ್ಯದಲ್ಲಿ ನಿದ್ರಾಭಾವ, ತಲೆನೋವಿನ ಸಾಧ್ಯತೆ. ತಾಳ್ಮೆಯಿಂದ ದಿನವನ್ನು ಮುಗಿಸಿ.
ಧನು ರಾಶಿ (Sagittarius) : ಇಂದು ನಿಮ್ಮ ಬುದ್ಧಿ ಕೆಲಸ ಮಾಡುತ್ತದೆ. ಕೆಲಸದಲ್ಲಿ ಗಮನ ಹರಿಸಿದರೆ ಬೇರೆಯವರು ಬೆರಗಾಗುವಂತೆ ಸಾಧನೆ ಮಾಡಬಹುದು. ಹಣಕಾಸಿನಲ್ಲಿ ಸಾಧಾರಣ ಲಾಭ. ಸಂಬಂಧಗಳಲ್ಲಿ ಮಾತುಕತೆ ಮುಖ್ಯ. ಸ್ನೇಹಿತರಿಂದ ಉತ್ಸಾಹದ ಮಾತುಗಳು. ಆಕಸ್ಮಿಕ ಪ್ರಯಾಣ ಸಾಧ್ಯ. ಆರೋಗ್ಯದಲ್ಲಿ ನಿದಾನವಾಗಿ ಬದಲಾಗುವ ಲಕ್ಷಣ. ಸಂಜೆ ಅನಗತ್ಯ ಸಮಯ ವ್ಯರ್ಥವಾಗಬಹುದು.
ಮಕರ ರಾಶಿ (Capricorn) : ದಿನದ ಆರಂಭದಲ್ಲಿ ಗೊಂದಲವಿದ್ದರೂ ಮಧ್ಯಾಹ್ನಕ್ಕೆ ಚಿಂತೆ ತಗ್ಗಲಿದೆ. ಹಣದ ವಿಚಾರದಲ್ಲಿ ಸರಿಯಾಗಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕುಟುಂಬದೊಂದಿಗಿನ ಸಮಯ ಕಳೆಯಿರಿ. ಕೆಲಸದಲ್ಲಿ ಸಣ್ಣ ಬದಲಾವಣೆಗಳು ಸಾಧ್ಯ. ನಿಮ್ಮ ಹೃದಯಪೂರ್ವಕ ಮಾತುಗಳು ಇತರರ ಮೇಲೆ ಪ್ರಭಾವ ಬೀರಬಹುದು. ಆರೋಗ್ಯದಲ್ಲಿ ಶ್ರದ್ಧೆ ಬೇಕು. ಪ್ಲಾನ್ ಮಾಡಿದ ಕೆಲಸಗಳು ಪೂರ್ಣಗೊಳ್ಳುತ್ತವೆ.
ಕುಂಭ ರಾಶಿ (Aquarius) : ಹೊಸ ಯೋಜನೆಗಳಿಗೆ ಚಾಲನೆ ಕೊಡಿ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳು. ಹಣಕಾಸಿನಲ್ಲಿ ನೂತನ ಅವಕಾಶ. ನಿಮಗೆ ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗುತ್ತವೆ. ನಿಮ್ಮ ಮನಸ್ಸು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ಆದಾಯವು ಉತ್ತಮವಾಗಿರುತ್ತದೆ.
ಮೀನ ರಾಶಿ (Pisces) : ನಿಮ್ಮ ಕಲ್ಪನೆಗಳು ಇಂದು ಕಾರ್ಯರೂಪಕ್ಕೆ ಬರುವ ಸಾಧ್ಯತೆ. ಕೆಲಸದ ಜಾಗದಲ್ಲಿ ಒತ್ತಡ ಕಡಿಮೆ. ಮನೆಮಾತುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಿ. ಹಣಕಾಸಿನಲ್ಲಿ ತಾತ್ಕಾಲಿಕ ತೊಂದರೆ. ಶತ್ರುಗಳ ತೊಂದರೆ ಇಲ್ಲ ಮತ್ತು ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಸಿಗುತ್ತವೆ. ವ್ಯವಹಾರವು ಉತ್ತಮವಾಗಿರುತ್ತದೆ. ವ್ಯವಹಾರಕ್ಕಾಗಿ ಪ್ರಯಾಣಿಸುವ ಸಾಧ್ಯತೆ ಇದೆ.