ಇತ್ತೀಚಿನ ದಿನಗಳಲ್ಲಿ ವಾರಾಂತ್ಯ ಬಂದ ತಕ್ಷಣ ಪಾರ್ಟಿಗಳನ್ನ ಆಯೋಜಿಸುವ ಜನರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಆ ಪಾರ್ಟಿಗಳಲ್ಲಿ ಮದ್ಯ, ಆಹಾರ, ಪಾನೀಯಗಳು ಮತ್ತು ಬಹಳಷ್ಟು ಮೋಜು ಇರುತ್ತದೆ. ಸಾಂದರ್ಭಿಕವಾಗಿ ಕುಡಿಯುವುದರಿಂದ ಯಾವುದೇ ಹಾನಿ ಇಲ್ಲ ಎಂದು ಭಾವಿಸಿ ಜನರು ವಾರಾಂತ್ಯದಲ್ಲಿ ಕುಡಿಯುತ್ತಾರೆ.
ವಾರಕ್ಕೊಮ್ಮೆ ಮದ್ಯಪಾನ ಮಾಡುವುದರಿಂದ ದೇಹದ ಮೇಲೆ ಯಾವುದೇ ವಿಶೇಷ ಪರಿಣಾಮ ಬೀರುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಹಾಗಲ್ಲ. ನೀವು ಮದ್ಯಪಾನ ಮಾಡುವ ಪ್ರಮಾಣ ಮತ್ತು ದಿನಗಳ ಸಂಖ್ಯೆಯನ್ನ ಅವಲಂಬಿಸಿ ನಿಮಗೆ ಹಾನಿಯಾಗಬಹುದು. ಆದರೆ ಮದ್ಯಪಾನ ಮಾಡುವುದರಿಂದ ಹಾನಿ ಉಂಟಾಗುತ್ತದೆ ಎಂಬುದು ನೂರಕ್ಕೆ ನೂರರಷ್ಟು ಖಚಿತ ಎಂದೇ ಹೇಳಬಹುದು.
ಮುಂಬೈನ ಮೂಳೆ ಶಸ್ತ್ರಚಿಕಿತ್ಸಕ ಡಾ.ಮನನ್ ವೋರಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು, “ಸುರಕ್ಷಿತ ಪ್ರಮಾಣದ ಆಲ್ಕೋಹಾಲ್ ಇದೆಯೇ?” ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೆಚ್ಚಿನ ಜನರು ಅದನ್ನ ಅರಿತುಕೊಳ್ಳದಿದ್ದರೂ, ಆಲ್ಕೋಹಾಲ್ ಯಾವಾಗಲೂ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ನೀವು ಯಾವಾಗ ಮತ್ತು ಎಷ್ಟು ಬಾರಿ ಕುಡಿಯುತ್ತೀರಿ ಎಂಬುದರ ಮೇಲ ಇದು ಅವಲಂಬಿತವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ತಿಂಗಳಿಗೊಮ್ಮೆ ಮದ್ಯಪಾನ ಮಾಡುವುದರ ಪರಿಣಾಮ: ತಿಂಗಳಿಗೊಮ್ಮೆ ಮದ್ಯಪಾನ ಮಾಡುವವರಲ್ಲಿ ಆ ದಿನ ಮೆದುಳಿನ ಚಟುವಟಿಕೆ ನಿಧಾನವಾಗಬಹುದು. ಇದು ಲಿವರ್ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಕುಡಿದ ಮರುದಿನ ಹ್ಯಾಂಗೊವರ್ ಉಂಟಾಗುತ್ತದೆ. ಇದು ದೇಹವನ್ನ ನಿರ್ಜಲೀಕರಣಗೊಳಿಸುತ್ತದೆ ಮತ್ತು ಮದ್ಯವನ್ನ ಹೊರಹಾಕಲು ಲಿವರ್ ಹೆಚ್ಚುವರಿ ಕೆಲಸ ಮಾಡಲು ಒತ್ತಾಯಿಸುತ್ತದೆ. ಕುಡಿದ ಮರುದಿನ ಬೆಳಗ್ಗೆ ನಿಮಗೆ ತಲೆನೋವು, ಆಯಾಸ ಮತ್ತು ನಿದ್ರೆಯ ತೊಂದರೆಗಳು ಉಂಟಾಗಬಹುದು.
ವಾರಕ್ಕೊಮ್ಮೆ ಮದ್ಯಪಾನ ಮಾಡುವುದರ ಪರಿಣಾಮ: ವಾರಕ್ಕೊಮ್ಮೆ ಮದ್ಯಪಾನ ಮಾಡುವುದರಿಂದಲೂ ಫ್ಯಾಟಿ ಲಿವರ್ ಸಮಸ್ಯೆ ಬರುವ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದು ಲಿವರ್‌ಅನ್ನ ನಿರಂತರವಾಗಿ ಹೆಚ್ಚು ಕೆಲಸ ಮಾಡಲು ಕಾರಣವಾಗುತ್ತದೆ. ಬೆಳಗ್ಗೆ ನಿಮಗೆ ಹ್ಯಾಂಗೊವರ್ ಇರಬಹುದು ಮತ್ತು ಮರುದಿನ ಅದು ಇನ್ನೂ ಕೆಟ್ಟದಾಗಿರಬಹುದು. ಲಿವರ್ ನಿರಂತರವಾಗಿ ಒತ್ತಡದಲ್ಲಿರುತ್ತದೆ, ಕ್ರಮೇಣ ಫ್ಯಾಟಿ ಲಿವರ್‌ನ ಅಪಾಯವನ್ನ ಹೆಚ್ಚಿಸುತ್ತದೆ.
ವಾರಕ್ಕೆ 3 ರಿಂದ 5 ಬಾರಿ ಮದ್ಯಪಾನ ಮಾಡುವುದರ ಪರಿಣಾಮ: ವಾರದಲ್ಲಿ ಹಲವಾರು ಬಾರಿ ಮದ್ಯಪಾನ ಮಾಡುವ ಜನರು ತಮ್ಮ ದೇಹಕ್ಕೆ ಸಂಪೂರ್ಣವಾಗಿ ವಿಶ್ರಾಂತಿ ನೀಡುವುದಿಲ್ಲ. ಅವರ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ ಮತ್ತು ಲಿವರ್ ಉಬ್ಬಿಕೊಳ್ಳುತ್ತದೆ. ನೀವು ವಾರದಲ್ಲಿ 4-5 ದಿನಗಳು ಮದ್ಯಪಾನ ಮಾಡಿದರೆ, ನಿಮ್ಮ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯನ್ನ ನಿಯಂತ್ರಿಸುವುದು ಕಷ್ಟವಾಗುತ್ತದೆ. ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ಲಿವರ್‌ನ ಉರಿಯೂತ ವೇಗವಾಗಿ ಹೆಚ್ಚಾಗುತ್ತದೆ.
ಪ್ರತಿದಿನ ಮದ್ಯಪಾನ ಮಾಡುವುದರ ಪರಿಣಾಮ: ಪ್ರತಿದಿನ ಮದ್ಯಪಾನ ಮಾಡುವವರಿಗೆ ಅನೇಕ ಅಪಾಯಗಳಿವೆ. ಅಂತಹ ಜನರ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಗಂಭೀರ ಸಂದರ್ಭಗಳಲ್ಲಿ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ. ಪ್ರತಿದಿನ ಮದ್ಯಪಾನ ಮಾಡುವವರಿಗೆ ಅಪಾಯವು ತುಂಬಾ ಹೆಚ್ಚಾಗುತ್ತದೆ. ಅಂತಹ ಜನರು ಅಪಾಯಕಾರಿ ವರ್ಗಕ್ಕೆ ಸೇರುತ್ತಾರೆ. ಅಂತಹ ಜನರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ, ಲಿವರ್ ಫೈಬ್ರೋಸಿಸ್ ಅಥವಾ ಸಿರೋಸಿಸ್ ಸಾಧ್ಯತೆಯೂ ಹೆಚ್ಚಾಗುತ್ತದೆ. ಹೆಚ್ಚು ಮದ್ಯಪಾನ ಮಾಡುವುದರಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದು ಹೃದಯ ಮತ್ತು ಮೇದೋಜ್ಜೀರಕ ಗ್ರಂಥಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Kannada News Time ಇದನ್ನು ದೃಢಪಡಿಸುವುದಿಲ್ಲ.)
ಪ್ರತಿದಿನ ಕುಡಿಯುವವರು vs ವಾರಕ್ಕೊಮ್ಮೆ ಕುಡಿಯುವವರು : ವೈದ್ಯರ ಪ್ರಕಾರ ಯಾರಿಗೆ ಜಾಸ್ತಿ ʼಎಣ್ಣೆʼ ಎಫೆಕ್ಟ್..?
WhatsApp Group
Join Now