ಕರ್ನಾಟಕ ಸರ್ಕಾರದಲ್ಲಿ ಇನ್ನಿಲ್ಲದ ಗೊಂದಲ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನ ಬದಲಾಗುವುದು ಬಹುತೇಕ ನಿಶ್ಚಿತ ಎನ್ನುವ ಸಂದರ್ಭ ಬಂದಿದೆ. ಆದರೆ ಡಿ.ಕೆ.ಶಿವಕುಮಾರ್ ಆಗ್ತಾರಾ? ಸತೀಶ್ ಜಾರಕಿಹೊಳಿನಾ? ಅಥವಾ ಇನ್ಯಾರಾದ್ರೂ ಈ ಸ್ಥಾನಕ್ಕೆ ಏರುತ್ತಾರಾ ಎಂಬ ಪ್ರಶ್ನೆಯೂ ಎದ್ದಿದೆ.
ಆದ್ರೆ ಮುಖ್ಯಮಂತ್ರಿ ಆಗಲೇಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಹಠ. ಇದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಬೂದಿ ಮುಚ್ಚಿದ ಕೆಂಡದಂಥ ಮನಸ್ತಾಪಕ್ಕೆ ಕಾರಣವಾಗಿದೆ. ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಪಾಲ್ಗೊಳ್ಳುತ್ತಿದ್ದ ಇವರಿಬ್ಬರು, ಇದೀಗ ತಪ್ಪಿಸಿಕೊಳ್ಳುತ್ತಿದ್ದಾರೆ. ಸದ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಯಾರೆಲ್ಲ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳು ಇದ್ದಾರೋ, ಅವರನ್ನೆಲ್ಲ ಒಂದು ಕಡೆಯಿಂದ ಭೇಟಿಯಾಗುತ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ ಡಿ.ಕೆ.ಶಿವಕುಮಾರ್ ಒಂದು ಶಾರ್ಪ್ ಟ್ವೀಟ್ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಟ್ವೀಟ್..!
ಇಂದು ಬೆಳಗ್ಗೆ ಫೋಟೋವೊಂದನ್ನ ಪೋಸ್ಟ್ ಮಾಡಿರುವ ಡಿ.ಕೆ.ಶಿವಕುಮಾರ್, ʼಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿʼ ಎಂದು ಹೇಳಿದ್ದಾರೆ. ʼಮಾತಿನ ಶಕ್ತಿ..ವಿಶ್ವದ ಶಕ್ತಿ. ಈ ಜಗತ್ತಿನ ಅತಿದೊಡ್ಡ ಶಕ್ತಿ ಎಂದರೆ ಕೊಟ್ಟ ಮಾತನ್ನ ಉಳಿಸಿಕೊಳ್ಳುವುದು. ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನು ಸೇರಿದಂತೆ ಬೇರೆ ಯಾರೇ ಆಗಿರಲಿ, ಎಲ್ಲರೂ ಮಾತಿನಂತೆ ನಡೆಯಬೇಕುʼ ಎಂದು ಬರೆದುಕೊಂಡಿದ್ದಾರೆ. ಈ ಮಾತುಗಳನ್ನ ಅವರು ತಮ್ಮ ಪಕ್ಷದ ಹೈಕಮಾಂಡ್‌ಗೇ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ..
2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಾಗ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿಯೇ ಡಿ.ಕೆ.ಶಿವಕುಮಾರ್ ಅವರು ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿದ್ದರು. ಆದರೆ ಅನುಭವ ಮತ್ತು ವಯಸ್ಸಿನ ಆಧಾರದ ಮೇಲೆ ಸಿದ್ದರಾಮಯ್ಯ ಅವರಿಗೇ ಮುಖ್ಯಮಂತ್ರಿ ಹುದ್ದೆಯನ್ನ ಹೈಕಮಾಂಡ್ ಕೊಟ್ಟಿತ್ತು. ಆದರೆ ಎರಡೂವರೆ ವರ್ಷ ಆದ್ಮೇಲೆ ಡಿ.ಕೆ.ಶಿವಕುಮಾರ್‌ಗೆ ಮಂತ್ರಿ ಸ್ಥಾನ ನೀಡುವ ಭರವಸೆಯನ್ನ ಹೈಕಾಂಡ್ ನೀಡಿತ್ತು ಎಂಬ ವರದಿಯೂ ಇದೆ. ಆದರೆ ಈ ಬಗ್ಗೆ ಸ್ಪಷ್ಟವಾಗಿ ಯಾರಿಗೂ ಗೊತ್ತಿಲ್ಲ. ಅಧಿಕಾರ ಹಂಚಿಕೆಯ ಮಾತುಕತೆ ಆಗಿದೆ ಎಂದು ಕಾಂಗ್ರೆಸ್‌ನಲ್ಲಿ ಕೆಲವರೊಬ್ಬರು ಹೇಳಿದ್ದಾರೆ. ಇನ್ನೂ ಅನೇಕರು ಅಂಥ ಮಾತುಕತೆ ನಡೆದಿಲ್ಲ ಎಂದಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಇಂದು ಪೋಸ್ಟ್ ಮಾಡಿದ ಟ್ವೀಟ್ ಸಾಕಷ್ಟು ಕುತೂಹಲ ಮತ್ತು ಅನುಮಾನ ಮೂಡಿಸಿದೆ.
ಹೈಕಮಾಂಡ್‌ಗೇ ಹೇಳಿದ್ರಾ ಡಿ.ಕೆ.ಶಿವಕುಮಾರ್?
ಇಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಮಾತಿನ ಶಕ್ತಿ..ವಿಶ್ವದ ಶಕ್ತಿ ಎಂಬ ಮಾತನ್ನ ಅವರು ಕಾಂಗ್ರೆಸ್ ಹೈಕಮಾಂಡ್‌ಗೇ ಹೇಳಿದರಾ ಎಂಬ ಬಗ್ಗೆ ಚರ್ಚೆ ನಡೆದಿದೆ. ಆರಂಭದಲ್ಲಿ ಸಿಎಂ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ಗೆ ಮಾತುಕೊಟ್ಟು, ಇದೀಗ ಕಾಂಗ್ರೆಸ್ ಹೈಕಮಾಂಡ್ ಉಲ್ಟಾ ಹೊಡೆಯುತ್ತಿದೆ. ಹಾಗಾಗಿ ನೋವಿನಲ್ಲಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಡಿ.ಕೆ.ಶಿವಕುಮಾರ್ ಒಂದು ಭಾಗದಲ್ಲಿ ತಾವು ಸಿಎಂ ಆಗುವ ಪ್ರಯತ್ನವನ್ನ ಮುಂದುವರಿಸಿದ್ದಾರೆ. ಆದರೆ ಇನ್ನೊಂದು ಕಡೆ ಮಾಧ್ಯಮಗಳ ಎದುರು ತಾನು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ನಾವು 2028ರ ಎಲೆಕ್ಷನ್ ಮೇಲೆ ಫೋಕಸ್ ಮಾಡುತ್ತಿದ್ದೇವೆ. ನಾನೊಬ್ಬ ಪಕ್ಷ ನಿಷ್ಠ ಎಂಬಿತ್ಯಾದಿ ಮಾತುಗಳನ್ನ ಆಡುತ್ತಿದ್ದಾರೆ.
ʼನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕುʼ; ಡಿ.ಕೆ.ಶಿವಕುಮಾರ್ ಈ ಟ್ವೀಟ್ ಕಾಂಗ್ರೆಸ್ ಹೈಕಮಾಂಡ್‌ಗೆ ಹೇಳಿದ್ದಾ?
WhatsApp Group
Join Now