Crop Loan Waiver : ರೈತರ ಬೆಳೆ ಸಾಲ ಮನ್ನಾ.! ಬೆಳೆ ಸಾಲ ಇರುವ ರೈತರು ತಪ್ಪದೆ ನೋಡಿ.!

Spread the love

Crop Loan Waiver : ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ಬೆಳೆ ಸಾಲ ಇರುವ ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್. ರೈತರು ತಮ್ಮ ಜಮೀನಿನಲ್ಲಿರುವ ಬೆಳೆಗಳ ಮೇಲೆ ಕೃಷಿ ಸಾಲವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಥವಾ ಸಹಕಾರಿ ಬ್ಯಾಂಕುಗಳಲ್ಲಿ ಅಥವಾ ಯಾವುದೇ ಖಾಸಗಿ ಬ್ಯಾಂಕುಗಳಲ್ಲಿ ಕೃಷಿ ಉದ್ದೇಶಕ್ಕಾಗಿ ಮತ್ತು ಬೆಳೆಯನ್ನ ಬೆಳೆಯುವುದಕ್ಕಾಗಿ ಕೃಷಿ ಸಾಲವನ್ನ ಪಡೆದುಕೊಂಡಿರುತ್ತಾರೆ.

WhatsApp Group Join Now

ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್

ಸಾಕಷ್ಟು ರೈತರು ಬೆಳೆದ ಬೆಳೆಯಿಂದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಅಂತಹ ರೈತರಿಗೆ ಹೊಸ ಸಾಲವು ಕೂಡ ದೊರೆಯುವುದಿಲ್ಲ. ಮತ್ತು ಇರುವ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ. ಜಮೀನಿನಲ್ಲಿ ಬೆಳೆ ಬೆಳೆದು ಜೀವನ ನಡೆಸಿ ಸಾಲವನ್ನು ತೀರಿಸಲು ಸಾಧ್ಯವಾಗದೇ ಇರುವ ಅನೇಕ ರೈತರು ಕೂಡ ಇದ್ದಾರೆ. ಇಂತಹ ಎಲ್ಲ ಸಮಸ್ಯೆಗಳನ್ನ ಅರಿತ ರಾಜ್ಯ ಸರ್ಕಾರ ರಾಜ್ಯಾದ್ಯಂತ ಇರುವಂತಹ ರಾಜ್ಯದ ಎಲ್ಲ ರೈತರಿಗಾಗಿ ಬೆಳೆ ಸಾಲ ಪಡೆದ ರೈತರಿಗೆ ಸಾಲಗಳನ್ನು ಮನ್ನಾ ಮಾಡಲು ಮಹತ್ವದ ಕ್ರಮಕ್ಕೆ ಮುಂದಾಗಿದೆ.

WhatsApp Group Join Now

ರಾಜ್ಯ ಸರ್ಕಾರ 2017-18ನೇ ಸಾಲಿನಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡುವ ಯೋಜನೆಯಡಿಯಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಣೆಯನ್ನು ಮಾಡಿದ್ದು, ಇದಕ್ಕೆ ಅನ್ವಯವಾಗುವಂತೆ ರಾಜ್ಯದ ಒಟ್ಟು 17.37 ಲಕ್ಷ ರೈತರು ಬೆಳೆ ಸಾಲ ಮನ್ನಾದ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೆ ರಾಜ್ಯಾದ್ಯಂತ ಯೋಜನೆ ಅಡಿಯಲ್ಲಿ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಇನ್ನು ರಾಜ್ಯದ 31 ಸಾವಿರ ರೈತರಿಗೆ ಇದರ ಪ್ರಯೋಜನ ದೊರೆತಿಲ್ಲ.

ಇದನ್ನೂ ಕೂಡ ಓದಿ : SBI Bank Recruitment : ಎಸ್ ಬಿಐ ಬ್ಯಾಂಕಿನಲ್ಲಿ ಉದ್ಯೋಗವಕಾಶ.! ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್

WhatsApp Group Join Now

ಈ ಕಾರಣದಿಂದಾಗಿ ಇತ್ತೀಚಿಗೆ ನಡೆದಂತಹ ವಿಧಾನ ಪರಿಷತ್ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಅವರು ಪ್ರತಿಕ್ರಿಯಿಸಿದ್ದು, ಬೆಳೆ ಸಾಲ ಮನ್ನಾ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ ಪ್ರಯೋಜನ ಪಡೆಯದೇ ಇರುವಂತಹ 31 ಸಾವಿರ ರೈತರಿಗೆ ನೀಡಬೇಕಾಗಿರುವಂತಹ ₹161.51 ಕೋಟಿ ರೂಪಾಯಿ ಹಣವನ್ನ ಹಾಗು ಬಾಕಿ ಇರುವ ರೈತರ ಮೊತ್ತ ₹64 ಕೋಟಿ ರೂಪಾಯಿ ಹಣ ಸೇರಿ ಒಟ್ಟು ₹232 ಕೋಟಿ ರೂಪಾಯಿ ಹಣವನ್ನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply