ತಂದೆಗೆ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ : ಚೈತ್ರಾ ಕುಂದಾಪುರಗೆ ಕೋರ್ಟ್‌ ನಿರ್ದೇಶನ

Spread the love

ಚೈತ್ರಾ ಕುಂದಾಪುರ ಅವರ ತಂದೆಗೆ ಯಾವುದೇ ರೀತಿ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ. ಅವರ ಮನೆಯಲ್ಲಿ ನಿರ್ಭೀತಿಯಿಂದ ಇರಲು ಅವಕಾಶ ಮಾಡಿಕೊಡಬೇಕೆಂದು ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶ ಮಾಡಿದೆ.

ಬಾಲಕೃಷ್ಣ ಅವರು ಪುತ್ರಿ ಚೈತ್ರಾ ಕುಂದಾಪುರ ಅವರಿಂದ ಅನ್ಯಾಯ ಆಗುತ್ತಿದೆ. ನನ್ನ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕೆಂದು ಕೋರಿ ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ ಅನ್ವಯ ಪರಿಹಾರ ಕೋರಿ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧದ ಕೋರ್ಟ್‌ ತೀರ್ಪು ನೀಡಿದೆ.

ತಂದೆಗೆ ಮಗಳು ಯಾವುದೇ ರೀತಿ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ. ಅವರ ಮನೆಯಲ್ಲಿ ನಿರ್ಭೀತಿಯಿಂದ ಇರಲು ಅವಕಾಶ ಮಾಡಿಕೊಡಬೇಕು. ಅವರ ಸ್ವತ್ತಿನ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸೂಕ್ತ ಮುಚ್ಚಳಿಕೆ ನೀಡಬೇಕು ಎಂದು ಎಂದು ಇಲ್ಲಿನ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶ ಮಾಡಿದೆ.

ಮಗಳ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಬಾಲಕೃಷ್ಣ :

ಕೆಲ ಸಮಯ ಹಿಂದಷ್ಟೇ ಚೈತ್ರಾ ಕುಂದಾಪುರ ಅವರು ಮದುವೆಯಾದ ಬಳಿಕ ಅವರ ತಂದೆ ಬಾಲಕೃಷ್ಣ ನಾಯಕ್‌ ಮಗಳ ವಿರುದ್ದವೇ ಸಾಲು ಸಾಲು ಆರೋಪಗಳನ್ನು ಮಾಡಿದ್ದರು.

“ಕಳ್ಳರು ಕಳ್ಳರು ಮದುವೆಯಾಗಿದ್ದಾರೆ. ಆಕೆ ನನ್ನನ್ನು ಕರೆದಿಲ್ಲ, ನಾನು ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ, ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಚೈತ್ರಾ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ ಎಂದಿದ್ದರು.

“ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೇವೆ. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥ. ಚೈತ್ರಾ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ. ಆಕೆಗೆ ಯಾರು ದೊಡ್ಡ ಸ್ಥಾನಮಾನ ಕೊಡಬೇಡಿ” ಎಂದಿದ್ದರು.

ಇದಲ್ಲದೆ ಚೈತ್ರಾ ನನಗೆ ಕೊಲೆ ಬೆದರಿಕೆ ಹಾಕಿದ್ದಳು. ಹೀಗಾಗಿ ನಾನು ನಾನು ಮಂಗಳೂರಿನ ಖಾಸಗಿ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದೆ ಎಂದು ಬಾಲಕೃಷ್ಣ ಆರೋಪಿಸಿದ್ದರು.

ನನ್ನ ಹೆಂಡತಿ ರೋಹಿಣಿ ಹಾಗೂ ನನ್ನ ಮಗಳಾದ ಚೈತ್ರ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಬಾಲಕೃಷ್ಣ ಅವರು ಆರೋಪಿಸಿದ್ದರು.

ಚೈತ್ರಾ ಹೇಳಿದ್ದೇನು?:

ತಂದೆ ಮಾಡಿದ್ದ ಆರೋಪಕ್ಕೆ ಚೈತ್ರಾ ಕುಂದಾಪುರ ಪ್ರತಿಕ್ರಿಯೆ ನೀಡಿದ್ದರು “ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ ಅಂತ ಬರೆದುಕೊಳ್ಳುವ ಮೂಲಕ ತಿರುಗೇಟು ಕೊಟ್ಟಿದ್ದರು. ‘2 ಕ್ವಾರ್ಟರ್ ಕೊಟ್ರೆ ಮಾತ್ರ ಮಕ್ಕಳು ದೇವರು, ಇಂತಹ ತಂದೆ ಯಾರಿಗೂ ಬೇಡ” ಎಂದಿದ್ದರು.

ಪರಿಹಾರ ಕೋರಿ ದೂರು ದಾಖಲಿಸಿದ್ದ ಬಾಲಕೃಷ್ಣ ನಾಯಕ್:

ತನ್ನ ಮಗಳಿನಿಂದ ತನಗೆ ರಕ್ಷಣೆಬೇಕು. ಪುತ್ರಿ ಚೈತ್ರಾ ಕುಂದಾಪುರ ಅವರಿಂದ ಅನ್ಯಾಯ ಆಗುತ್ತಿದೆ. ನನ್ನ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕೆಂದು ಕೋರಿ ಬಾಲಕೃಷ್ಣ ಅವರು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ ಅನ್ವಯ ಪರಿಹಾರ ಕೋರಿ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು.

ದೂರಿನಲ್ಲಿ ಏನಿದೆ?:

ಚೈತ್ರಾ ಅವರ ಅವ್ಯವಹಾರದಿಂದ ಬೇಸತ್ತು 71 ವರ್ಷದ ತಾನು ಮನೆ ಬಿಟ್ಟು ಮಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆ ಸೇರಿದ್ದು ಇನ್ನೊಬ್ಬ ಮಗಳನ್ನು ಭೇಟಿ ಮಾಡಲು ಆಗಾಗ ಮನೆಗೆ ಬರುತ್ತಿದ್ದೆ. ಆಗ ಮಡದಿ ಹಾಗೂ ಮಗಳು ಸ್ವಂತ ಮನೆಗೆ ಪ್ರವೇಶಿಸಲು ಅವಕಾಶ ನೀಡುತ್ತಿರಲಿಲ್ಲ. ಸಾರ್ವಜನಿಕವಾಗಿ ತನ್ನ ಮಾನ ಹಾನಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಈ ಮನೆಯಲ್ಲಿ ವಾಸಿಸಲು ರಕ್ಷಣೆ ಬೇಕು. ಸಂಬಂಧಪಟ್ಟ ಆಸ್ತಿಯಿಂದ ಬರುವ ಬಾಡಿಗೆ ತನಗೆ ದೊರೆಯಬೇಕು ಎಂದು ಅವರು ಪ್ರಕರಣ ದಾಖಲಿಸಿದ್ದರು.

ಇದಕ್ಕೆ ಚೈತ್ರಾ ಅವರು, ಹೆಂಡತಿ ಮಕ್ಕಳ ಕಾಳಜಿ ಮಾಡದೇ ದುಡಿದು ಖರ್ಚು ಮಾಡುತ್ತಿದ್ದರು. ಯಾವುದೇ ಆಸ್ತಿ ಮಾಡಿಲ್ಲ. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ವಿವಾಹದ ಬಳಿಕ ಹಿರಿಯಡ್ಕದಲ್ಲಿ ಪತಿ ಮನೆಯಲ್ಲಿ ವಾಸವಿದ್ದೇನೆ. ಅವರ ಮನೆಯಲ್ಲಿ ಇರುವುದಕ್ಕೆ ನಾನು ಯಾವುದೇ ಆಕ್ಷೇಪ ಮಾಡಲಿಲ್ಲ. ಇದು ಸುಳ್ಳು ಎಂದು ಹೇಳಿದ್ದರು.

ವಾದ ವಿವಾದ ಆಲಿಸಿದ ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್. ಬಾಡಿಗೆ ಹಣದ ಕುರಿತು ಯಾವುದೇ ದಾಖಲೆ ಸಲ್ಲಿಸಿಲ್ಲ. ಪ್ರಸ್ತುತ ಈ ಮನೆಯಲ್ಲಿ ಚೈತ್ರಾ ವಾಸಿಸುತ್ತಿಲ್ಲ. ಆದರೆ ಈ ಹಿಂದೆ ಪ್ರಕರಣ ದಾಖಲಾಗಿದೆ. ಆದ್ದರಿಂದ ಇನ್ನು ಮುಂದೆ ತಂದೆ ಅವರ ಮನೆಯಲ್ಲಿ ವಾಸಿಸಲು ತೊಂದರೆ ಮಾಡಬಾರದು. ದೈಹಿಕ, ಮಾನಸಿಕ ಹಿಂಸೆ ನೀಡಬಾರದು ಎಂದು ಆದೇಶ ನೀಡಿದ್ದಾರೆ. ಬಾಲಕೃಷ್ಣ ನಾಯಕ್ ಪರ ನ್ಯಾಯವಾದಿ ಕೆ.ಸಿ. ಶೆಟ್ಟಿ ಕುಂದಾಪುರ ವಾದಿಸಿದ್ದರು.

WhatsApp Group Join Now

Spread the love

Leave a Reply