ಎಲ್‌ಪಿಜಿ (LPG) ಗ್ರಾಹಕರಿಗೊಂದು ಗುಡ್‌ನ್ಯೂಸ್ ಸಿಕ್ಕಿದ್ದು, ಅಮೆರಿಕ ಹಾಗೂ ಭಾರತದ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧದ ಕಾರಣದಿಂದ ಅಡುಗೆ ಅನಿಲ ಬೆಲೆಯಲ್ಲಿ ಇಳಿಕೆ ಆಗಲಿದೆ ಎನ್ನಲಾಗುತ್ತಿದೆ.
ಅಮೆರಿಕದಿಂದ ಎಲ್‌ಪಿಜಿ ಆಮದು
ಅಮೆರಿಕದ ತೆರಿಗೆ ನೀತಿಯಿಂದ ಅನೇಕ ದೇಶಗಳು ಸಮಸ್ಯೆಯನ್ನ ಅನುಭವಿಸುತ್ತಿದೆ. ಇದರಿಂದ ಭಾರತಕ್ಕೆ ಸಹ ತೊಂದರೆ ಆಗುತ್ತಿದೆ. ಆದರೆ ಎಲ್‌ಪಿ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಆಗಲಿದೆ ಎಂದು ಊಹಿಸಲಾಗಿದೆ. ಭಾರತ ಅಮೆರಿಕದಿಂದ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಸಜ್ಜಾಗಿದೆ ಎನ್ನಲಾಗಿದೆ. ಕೆಲ ಮಾಹಿತಿಗಳ ಪ್ರಕಾರ,ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ತೈಲ ಕಂಪನಿಗಳು 2026 ರ ವೇಳೆಗೆ US ನಿಂದ ಮೂರು ದೊಡ್ಡ LPG ವಾಹಕಗಳನ್ನು ಖರೀದಿಸಲು ಯೋಜನೆ ಹಾಕಿದೆ. ದಾಖಲೆಗಳ ಪ್ರಕಾರ ಈ ಮೂರು ಕಂಪನಿಗಳು 331 ಮಿಲಿಯನ್ ಗಿಂತಲೂ ಹೆಚ್ಚು ಗ್ರಾಹಕರಿಗೆ LPG ಪೂರೈಸುವ ಕೆಲಸವನ್ನ ಮಾಡುತ್ತಿದೆ, ಅದರಲ್ಲಿ 60% ಕ್ಕಿಂತ ಹೆಚ್ಚು ಎಲ್‌ಪಿಜಿಯನ್ನ ಆಮದು ಮಾಡಿಕೊಳ್ಳಲಾಗುತ್ತದೆ. ಭಾರತ ಈಗಾಗಲೇ ಬೇರೆ ಬೇರೆ ದೇಶಗಳಿಂದ ಎಲ್‌ಪಿಜಿ ವಿಚಾರವಾಗಿ ಒಪ್ಪಂದವನ್ನ ಮಾಡಿಕೊಂಡಿದೆ. ಆದರೆ ಅಮೆರಿಕದ ಜೊತೆ ಎಲ್‌ಪಿಜಿ ಒಪ್ಪಂದಕ್ಕೆ ಕೈ ಹಾಕಿರುವುದು ಇದೇ ಮೊದಲಾಗಿದೆ. ಈ ಹೆಜ್ಜೆಯ ಮೂಲಕ ಅಮೆರಿಕದ ತೆರಿಗೆಯನ್ನ ಕಡಿಮೆ ಮಾಡಿಸುವ ಆಲೋಚನೆಯಲ್ಲಿ ಕೇಂದ್ರ ಸರ್ಕಾರ ಇದೆ ಎನ್ನಲಾಗಿದೆ.
ಸದ್ಯಕ್ಕೆ ಆಮದು ಟೆಂಡರ್‌ಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಜಂಟಿಯಾಗಿ ನೀಡಿದೆ ಎನ್ನುವ ಮಾಹಿತಿ ಈ ವಿಚಾರವಾಗಿ ತೈಲ ಕಂಪನಿಗಳಾಗಲಿ ಅಥವಾ ತೈಲ ಸಚಿವಾಲಯವಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ಕೊಟ್ಟಿಲ್ಲ.
ಕಡಿಮೆ ಆಗಲಿದೆ ಬೆಲೆ
ಈ ಎಲ್ಲಾ ಹೆಜ್ಜೆಗಳನ್ನ ಗಮನಿಸಿದರೆ ಅಮೆರಿಕ-ಚೀನಾ ನಡುವೆ ಆಗುತ್ತಿರುವ ವ್ಯಾಪಾರ ವಿವಾದ ಕಾರಣದಿಂದ ಸೃಷ್ಟಿ ಆಗುತ್ತಿರುವ ಎಲ್ಲಾ ಅವಕಾಶಗಳನ್ನ ಭಾರತ ಉಪಯೋಗ ಮಾಡಿಸಿಕೊಳ್ಳಲು ಸಿದ್ದವಾಗಿದೆ. ಈ ಎರಡೂ ದೇಶಗಳ ಸುಂಕಗಳು ಹೆಚ್ಚುತ್ತಿರುವ ಕಾರಣದಿಂದ ಪರಿಣಾಮ ಬೀರುವ ವಸ್ತುಗಳಲ್ಲಿ ಎಲ್‌ಪಿಜಿ ಸಹ ಇದೆ. ಹಾಗಾಗ ಚೀನಾ ಈಗಾಗಲೇ ಮಧ್ಯಪ್ರಾಚ್ಯ ದೇಶಗಳಿಂದ ಎಲ್ ಪಿಜಿ ಖರೀದಿ ಮಾಡುವ ಮೂಲಕ ಯುಎಸ್ ಶೇಲ್ ಆಮದನ್ನು ಕಡಿಮೆ ಮಾಡಲು ಸಾದ್ಯವಾದಷ್ಟು ಪ್ರಯತ್ನಗಳನ್ನ ಮಾಡುತ್ತಿದೆ. ಅದೇ ರೀತಿ ಮಧ್ಯಪ್ರಾಚ್ಯ ದೇಶ ತೈಲ ಉತ್ಪಾದಕರು ಎಲ್‌ಪಿಜಿಯ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ LPG ಮಾರಾಟವನ್ನು ಹೆಚ್ಚು ಮಾಡಲು ಸಹ ಒಂದೆಡೆ ಪ್ರಯತ್ನ ಮಾಡುತ್ತಿದೆ. ಈ ಎಲ್ಲದರ ನಡುವೆ ಯುಸ್‌ನಿಂದ ಎಲ್‌ಪಿಜಿ ಆಮದು ಮಾಡಿಕೊಂಡು ದೇಶದ ಗ್ರಾಹಕರ ಅವಶ್ಯಕತೆಯನ್ನ ಪೂರೈಸಲು ಭಾರತ ಹೊಸ ಹೊಸ ದಾರಿಯನ್ನ ಹುಡುಕುತ್ತಿವೆ.
ಈ ರೀತಿ ಮಾಡುವುದರಿಂದ ಎಲ್‌ಪಿಜಿ ಬೆಲೆಗಳ ಮೇಲೆ ಪರಿಣಾಮ ಆಗುತ್ತದೆ ಎಂದು ಊಹೆ ಮಾಡಲಾಗುತ್ತಿದೆ. ಪೂರೈಕೆ ಹೆಚ್ಚಾದಾಗ ಬೆಲೆಗಳು ಸ್ಥಿರವಾಗಿ ಇರುತ್ತದೆ. ಹಾಗೆಯೇ, ಆಮದು ಅಧಿಕವಾಗಿ, ನಿರಂತರವಾಗಿ ಇದ್ದಾಗ ಬೆಲೆಗಳು ಸಹ ಕಡಿಮೆ ಆಗಬಹುದು.

LPG : ಗ್ರಾಹಕರಿಗೆ ಭರ್ಜರಿ ಸುದ್ದಿ, ದೀಪಾವಳಿ ಹಬ್ಬಕ್ಕೆ ಅಡುಗೆ ಅನಿಲ ದರ ಇಳಿಕೆ ಸಾಧ್ಯತೆ
WhatsApp Group
Join Now