ಬ್ರಾಹ್ಮಣ ಯುವತಿ ಮತಾಂತರ: ಮಗು ಕೊಟ್ಟು ಮುಸ್ಲಿಂ ಯುವಕ ಪರಾರಿ; ನನಗೆ ನ್ಯಾಯ ಕೊಡಿಸಿ ಮಹಿಳೆ ಅಳಲು!

Spread the love

ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ, ಮುಸ್ಲಿಂ ಯುವಕ ಸೈಯದ್ ಇಮ್ತಿಯಾಜ್ ಹಿಂದೂ ಯುತಿಯನ್ನು ಪ್ರೀತಿಸಿ ಮದುವೆ ನಾಟಕವಾಡಿ ಇಸ್ಲಾಂಗೆ ಮತಾಂತರ ಮಾಡಿ ಮಗುವನ್ನೂ ಕೈಗೆ ಕೊಟ್ಟು ಈಗ ಎಸ್ಕೇಪ್ ಆಗಿದ್ದಾನೆ.

ಕೋಲ್ಕತ್ತಾ ಮೂಲದ ಬ್ರಾಹ್ಮಣ ಯುವತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡಿದ್ದ ಸೈಯದ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದನು. ನಂತರ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿ, ಜೈನಬ್ ಎಂದು ಹೆಸರನ್ನು ಬದಲಿಸಿದ್ದನು. 2025ರ ಜು.18ರಂದು ಇಬ್ಬರೂ ರಿಜಿಸ್ಟರ್ ಮದುವೆಯಾಗಿದ್ದರು.

ಇದಾದ ಬಳಿಕ ಇಬ್ಬರು ಕೋಲ್ಕತ್ತಾಗೆ ತೆರಳಿ ನೆಲೆಸಿದ್ದರು. ಅಲ್ಲಿ ಜೈನೆಬ್ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಮಗುವಾಗುತ್ತಿದ್ದಂತೆ ಪತ್ನಿ ಹಾಗೂ ಮಗುವನ್ನು ಬಿಟ್ಟು ಸೈಯದ್ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಮೋಸ ಹೋಗಿರುವ ಯುವತಿ ಮಗುವಿನೊಂದಿಗೆ ಬೆಂಗಳೂರಿಗೆ ಬಂದು ಪತಿಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದು, ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ.

WhatsApp Group Join Now

Spread the love

Leave a Reply