ಅಗತ್ಯ ಇದ್ರೆ ಮಾತ್ರ ಸಿದ್ದು, ಡಿಕೆಶಿಗೆ ಆಹ್ವಾನ : ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಮಾತಿನಿಂದ ಕನಕಪುರ ಬಂಡೆಗೆ ಬೇಸರ

Spread the love

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಸಿಎಂ ಕುರ್ಚಿ ಕಾಳಗ ಎಂದೂ ಮುಗಿಯದ ಧಾರಾವಾಹಿಯಾಗಿ‌ ಬದಲಾದಂತೆ ಕಾಣುತ್ತಿದೆ. ಡಿಕೆ ಶಿವಕುಮಾರ್ ಅವರಿಗೆ ಅಸ್ಸಾಂ ಚುನಾವಣೆ ಉಸ್ತುವಾರಿ‌ ನೀಡಲಾಗಿದೆ. ಆ ಚುನಾವಣೆ ಮುಗಿಯೋವರೆಗೆ ಡಿಕೆಶಿ ಸೈಲೆಂಟಾಗಿರ್ತಾರೆ ಎಂದು ಹೈಕಮಾಂಡ್ ಭಾವಿಸಿದೆ.


ಇದರ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಚ್ಚರಿಯ ಹೇಳಿಕೆ‌ ನೀಡಿದ್ದಾರೆ. ಅಗತ್ಯ ಬಿದ್ದರೆ ಮಾತ್ರವೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸುತ್ತೇವೆ. ಸದ್ಯಕ್ಕೆ ಇಬ್ಬರನ್ನೂ ಕರೆಸೋದಿಲ್ಲ ಎಂದು ಹೇಳಿದ್ದಾರೆ.

ಒಂದೇ ಕಾರಲ್ಲಿ ಡಿಕೆ, ಖರ್ಗೆ ಪ್ರಯಾಣ

WhatsApp Group Join Now

ಸದಾಶಿವನಗರದ ನಿವಾಸದಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಂದೇ ಕಾರಿನಲ್ಲಿ ತೆರಳಿದರು. ಈ ಹಿಂದೆಯೂ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಡಿಕೆಶಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಕಾರಿನಲ್ಲಿ ಪ್ರಯಾಣ ಮಾಡಿದ್ದರು. ಸದ್ಯ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಇದು ಕುತೂಹಲ ಕೆರಳಿಸಿದೆ.

ಸಮಸ್ಯೆ ಬಗೆಹರಿಸಿಕೊಳ್ಳಿ ಅಂದ್ರಂತೆ ಖರ್ಗೆ
ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‌ ನಿರ್ಧರಿಸಲಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಗಮನಿಸಿದಾಗ ಈ ವಿಚಾರದಲ್ಲಿ ವರಿಷ್ಠರು ಮಧ್ಯ ಪ್ರವೇಶ ಮಾಡುತ್ತಾರಾ ಎಂಬ ಭಾವನೆ ಮೂಡುತ್ತದೆ ಎಂದು ಶಾಸಕ ಕೆ.ಎನ್‌.ರಾಜಣ್ಣ ಹೇಳಿದರು.

ಬೆಂಗಳೂರಲ್ಲಿ ಮಾತನಾಡಿದ ಅವರು, ಹೈಕಮಾಂಡ್‌ ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತೋ, ಏನು ಮಾಡುತ್ತದೆಯೋ ಗೊತ್ತಿಲ್ಲ. ಸಿಎಂ ಬದಲಾವಣೆ ಗೊಂದಲ ನಾವು ಸೃಷ್ಟಿ ಮಾಡಿದಲ್ಲ, ನೀವೇ ಸೖಷ್ಟಿ ಮಾಡಿಕೊಂಡಿದ್ದು, ನೀವೆ ಬಗೆಹರಿಸಿಕೊಳ್ಳಿ. ಹೈಕಮಾಂಡ್‌ನತ್ತ ಯಾಕೆ ಬೊಟ್ಟು ಮಾಡಿ ತೋರಿಸುತ್ತೀರಾ ಎಂದು ಖರ್ಗೆ ಹೇಳಿದ್ದಾರೆ ಎಂದು ಹೇಳಿದರು.

ಸಂಕ್ರಾಂತಿ ಬಳಿಕ ಬಂಡೇಳ್ತಾರಾ ಬಂಡೆ?

ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದ ಬಳಿಕ ದೆಹಲಿಯಲ್ಲಿ ನಡೆದ ಒಪ್ಪಂದದಂತೆ ತಮಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲೇಬೇಕು ಎಂದು ಪಟ್ಟು ಹಿಡಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಂಕ್ರಾಂತಿಯ ಬಳಿಕ ಸಿಡಿದೇಳುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಮಂಡಿಸಲು ತಯಾರಿ ನಡೆಸುತ್ತಿದ್ದಾರೆ. ಅದಕ್ಕೆ ಡಿಕೆಶಿ ಅಡ್ಡಿ ಪಡಿಸುತ್ತಿರುವುದು ಮತ್ತೊಂದು ರೀತಿಯ ಸಂಘರ್ಷಕ್ಕೆ ನಾಂದಿಯಾಗಿದೆ.

ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯ ಗೊಂದಲ ಸೌಹಾರ್ದಯುತವಾಗಿ ಬಗೆ ಹರಿಯಲಿ. ಪಕ್ಷಕ್ಕೆ ಹಾನಿಯಾಗದಂತೆ ಸುಸೂತ್ರವಾಗಿ ಎಲ್ಲವೂ ಮುಗಿಯಲಿ ಎಂದು ಸಹನೆಯಿಂದ ಕಾದು ಕುಳಿತಿದ್ದ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ಸಹನೆ ಕಳೆದುಕೊಳ್ಳುತ್ತಿದ್ದು, ಬಹಿರಂಗವಾಗಿ ಸಂಘರ್ಷದ ಹಾದಿ ಹಿಡಿಯಲು ಮುಂದಾಗಿದ್ದಾರೆ. ಇದರಿಂದ ಕಾಂಗ್ರೆಸ್ ಹೈಕಮಾಂಡಿಗೂ ಟೆನ್ಶನ್ ಶುರುವಾಗಿದೆ.

ಡಿಕೆ ಶಿವಕುಮಾರ್ ಸಂಕ್ರಾಂತಿ ಹಬ್ಬದವರೆಗೂ ಕಾದು ನೋಡುವ ನಿರ್ಧಾರ ಮಾಡಿದ್ದು, ಅನಂತರ ಬಹಿರಂಗವಾಗಿಯೇ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ. ಡಿ.ಕೆ.ಶಿವಕುಮಾರ್‌ ಬಣದ ಶಾಸಕರು ಕೂಡ ಸಂಘರ್ಷದ ಹಾದಿಗೆ ಕೈ ಜೋಡಿಸಲಿದ್ದು, ಅಗತ್ಯ ಬಿದ್ದರೆ ದೆಹಲಿಗೆ ತೆರಳಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಂದು ವೇಳೆ ಬಂಡೆ ಟೀಂ ಬಂಡೆದ್ದರೆ, ಸಿದ್ದರಾಮಯ್ಯ ಕುರ್ಚಿಗೆ ಕುತ್ತು ಬಂದೇ ಬರುತ್ತೆ.


Spread the love

Leave a Reply