ತಲೆಗೆ ಗುಂಡಿಕ್ಕಿಕೊಂಡು ಸಾವಿಗೆ ಶರಣಾದ ಕಾನ್ಫಿಡೆಂಟ್ ಗ್ರೂಫ್‌ ಚೇರ್ಮನ್ ಸಿಜೆ ರಾಯ್ ; ಬಿಗ್‌ ಬಾಸ್ ಕನ್ನಡ ಶೋಗೆ ಹಣದ ಹೊಳೆ ಹರಿಸಿದ್ರು!

Spread the love

ಕಾನ್ಫಿಡೆಂಟ್ ಗ್ರೂಫ್ ಸಂಸ್ಥೆಯ ಚೇರ್ಮನ್ ಸಿಜೆ ರಾಯ್ (CJ Roy) ಅವರು ಆತ್ಮ*ಹತ್ಯೆ ಮಾಡಿಕೊಂಡಿರುವ ಸುದ್ದಿ ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ. ಅವರು ಸಾಕಷ್ಟು ದೊಡ್ಡ ಉದ್ಯಮಿಯಾಗಿದ್ದರು. ಜೊತೆಗೆ, ಕನ್ನಡ ಬಿಗ್ ಬಾಸ್ ಶೋಗೆ ರೂ. 50 ಲಕ್ಷ ಕೊಟ್ಟು ಆಗ ಸಖತ್ ಸುದ್ದಿಯಾಗಿದ್ದರು.

ಅವರು ಕಾನ್ಫಿಡೆಂಟ್ ಗ್ರೂಫ್ ಸಂಸ್ಥೆಯನ್ನು ಮುನ್ನಡೆಸುವ ಜೊತೆಗೆ ಬಹಳಷ್ಟು ಸಾಮಾಜಿಕ ಕೆಲಸ ಹಾಗೂ ಸಿನಿಮಾ-ಮನರಂಜನಾ ಕ್ಷೇತ್ರಕ್ಕೆ ಕೊಡುಗೆ ಕೂಡ ನೀಡಿದ್ದಾರೆ.

ಕಳೆದ ಸೀಸನ್ ಅಂದರೆ, ಬಿಗ್ ಬಾಸ್ ಕನ್ನಡ 11ಗೆ ರೂ. 50 ಲಕ್ಷ ಹಣ ಕೊಟ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ದರು. ಅವರ ಸಂಸ್ಥೆಯ ಮೇಲೆ ಇತ್ತೀಚೆಗೆ ಪದೇಪದೇ ಐಟಿ ದಾಳಿ ಆಗುತ್ತಿತ್ತು. ಅದಕ್ಕೂ ಮೊದಲು ಕೂಡ ಸ್ಟಾರ್ ಸುವರ್ಣದ ರಿಯಾಲಿಟಿ ಶೋಗೆ ಕೂಡ ಉದ್ಯಮಿ ಸಿಜೆ ಜಾರ್ಜ್ ಅವರು ಹಣ ನೀಡಿದ್ದರು, ಸ್ಪಾನ್ಸರ್ ಆಗಿದ್ದರು. ಈ ಕಾರಣಕ್ಕೆ ಉದ್ಯಮಿ ಸೆಜೆ ರಾಯ್ ಅವರು ಬೇಸರಪಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಲೆಗೆ ಗುಂಡಿಕ್ಕಿಕೊಂಡು ಅವರ ಆನೇಪಾಳ್ಯದ ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ.

ಆದಾಯಕ್ಕೂ ಮೀರಿದ ಗಳಿಕೆ ಕಾರಣಕ್ಕೆ ಸಿಜೆ ರಾಯ್ ಅವರ ಮೇಲೆ ಇತ್ತೀಚೆಗೆ ಬಹಳಷ್ಟು ಬಾರಿ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು. ಇಂದು ಕೂಡ ಅವರ ಆದಾಯದ ಲೆಕ್ಕಾಚಾರದಲ್ಲಿ ಐಟಿ ಇಲಾಖೆ ತಪಾಸಣೆ ನಡೆಸುತ್ತಿದ್ದಾಗ ಅವರು ಐಟಿ ದಾಳಿಗೆ ಬೇಸರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ.

WhatsApp Group Join Now

Spread the love

Leave a Reply