ದಂಪತಿ ಮೇಲೆ ಬಿದ್ದ ಕಾಂಕ್ರೀಟ್ ಮೆಟ್ಟಿಲು: ಹೊಸ ಮನೆ ಕನಸು ನನಸಾಗುವ ಮೊದಲೇ ಇಬ್ಬರೂ ಸಾವು

Spread the love

ನಿರ್ಮಾಣ ಹಂತದ ಮನೆಯ ಮೆಟ್ಟಿಲು ಬಿದ್ದು ದಂಪತಿ ಸಾವಿಗೀಡಾದಂತಹ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ. ಕಾಂಕ್ರೀಟ್ ಮೆಟ್ಟಿಲು ಮೇಲಿನಿಂದ ಬಿದ್ದ ರಭಸಕ್ಕೆ ಗಂಡ – ಹೆಂಡತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮೃತರನ್ನು ಪತ್ನಿ 33 ವರ್ಷದ ಶಿವಮ್ಮ ಹಾಗೂ ಪತಿ 35 ವರ್ಷದ ದ್ಯಾವಪ್ಪ ಸೂಗುರು ಎಂದು ಗುರುತಿಸಲಾಗಿದೆ.

ಕಳೆದ ಕೆಲ ದಿನಗಳಿಂದ ದಂಪತಿ ಮನೆ ಕಟ್ಟುತ್ತಿದ್ದು, ಎಂದಿನಂತೆ ಇವತ್ತು ಮನೆಯ ಗೋಡೆ ಪ್ಲಾಸ್ಟರ್ ಕೆಲಸಕ್ಕೆ ದಂಪತಿ ಮುಂದಾಗಿದ್ದರು ಈ ವೇಳೆ ಏಕಾಏಕಿಯಾಗಿ ಮನೆಯ ಮೆಟ್ಟಿಲು ಕುಸಿದು ದಂಪತಿ ಸಾವಿಗೀಡಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಮೃತದೇಹವನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now

Spread the love

Leave a Reply