ನಮ್ಮ ದೇಹ ನೀಡುವ ಕೆಲವು ಸಣ್ಣ ಸಂಕೇತಗಳನ್ನು ಸಾಮಾನ್ಯ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತೇವೆ, ಆದರೆ ಅವು ಮಾರಣಾಂತಿಕ ಕಾಯಿಲೆಯ ಮುನ್ಸೂಚನೆಯೂ ಆಗಿರಬಹುದು. ನೀವು ಎಂದಿಗೂ ಕಡೆಗಣಿಸಬಾರದ ದೊಡ್ಡ ಕರುಳಿನ ಕ್ಯಾನ್ಸರ್‌ನ ಪ್ರಮುಖ ಎಚ್ಚರಿಕೆ ಲಕ್ಷಣಗಳಿವು.
ಕ್ಯಾನ್ಸರ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಆರಂಭಿಕ ಹಂತದ ಕ್ಯಾನ್ಸರ್‌ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ದೊಡ್ಡ ಕರುಳಿನಲ್ಲಿ ಉಂಟಾಗುವ ಕ್ಯಾನ್ಸರ್‌ಗೆ ಕೊಲೊರೆಕ್ಟಲ್ ಕ್ಯಾನ್ಸರ್ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಎನ್ನುತ್ತಾರೆ.
ಮಲವಿಸರ್ಜನೆಯಲ್ಲಿ ಬದಲಾವಣೆ, ಮಲದಲ್ಲಿ ರಕ್ತ, ಕಾರಣವಿಲ್ಲದೆ ತೂಕ ಇಳಿಕೆ, ನಿರಂತರ ಹೊಟ್ಟೆ ನೋವು ಮತ್ತು ಅಸಾಮಾನ್ಯ ಸುಸ್ತು ಇವೆಲ್ಲವೂ ದೊಡ್ಡ ಕರುಳಿನ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಾಗಿವೆ.
ಸಾಮಾನ್ಯವಾಗಿ 45-50 ವರ್ಷ ಮೇಲ್ಪಟ್ಟವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಕಳೆದ 30 ವರ್ಷಗಳಲ್ಲಿ, ವಿಶ್ವಾದ್ಯಂತ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಪ್ರಕರಣಗಳು ಸುಮಾರು 80% ಹೆಚ್ಚಾಗಿದೆ. ದೊಡ್ಡ ಕರುಳಿನ ಕ್ಯಾನ್ಸರ್ ಈಗ ವೇಗವಾಗಿ ಬೆಳೆಯುತ್ತಿದೆ ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಹೇಳುತ್ತಾರೆ.
ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ 2026ರ ವರದಿಯ ಪ್ರಕಾರ, 1990ರಿಂದ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಮೆರಿಕನ್ನರಲ್ಲಿ ಕ್ಯಾನ್ಸರ್‌ನಿಂದಾಗುವ ಸಾವುಗಳು ಶೇ. 44ರಷ್ಟು ಕಡಿಮೆಯಾಗಿವೆ. ಸುಧಾರಿತ ಚಿಕಿತ್ಸೆಗಳು ಮತ್ತು ಧೂಮಪಾನದ ಪ್ರಮಾಣ ಕಡಿಮೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಆದರೆ ದೊಡ್ಡ ಕರುಳಿನ ಕ್ಯಾನ್ಸರ್ ಪ್ರಮಾಣ ಮಾತ್ರ ಹೆಚ್ಚಾಗುತ್ತಲೇ ಇದೆ.
ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಅತಿಯಾದ ಸೇವನೆಯು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅತಿ ಹೆಚ್ಚು ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳನ್ನು ಸೇವಿಸುವ ಮಹಿಳೆಯರಲ್ಲಿ ಕ್ಯಾನ್ಸರ್‌ಗೆ ಮುನ್ನ ಕಾಣಿಸಿಕೊಳ್ಳುವ ಕರುಳಿನ ಪಾಲಿಪ್ಸ್ (Precancerous colon polyps) ಉಂಟಾಗುವ ಸಾಧ್ಯತೆ ಶೇ. 45ರಷ್ಟು ಹೆಚ್ಚು ಎಂದು ಡಾ. ಸೌರಭ್ ಸೇಥಿ ಹೇಳುತ್ತಾರೆ.
ದೊಡ್ಡ ಕರುಳಿನ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗುವ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ಬ್ರೆಡ್, ಸಿಹಿಯಾದ ಮೊಸರು, ಫ್ಲೇವರ್ ಇರುವ ಕ್ರೀಮರ್‌ಗಳು ಮತ್ತು ಸಾಸ್‌ಗಳನ್ನು ಆದಷ್ಟು ದೂರವಿಡಿ.
ಪ್ರತಿದಿನ 25-38 ಗ್ರಾಂ ನಾರಿನಾಂಶವಿರುವ ಆಹಾರ ಸೇವಿಸಿ. ನಾರಿನಾಂಶವು ಕರುಳಿನ ಆರೋಗ್ಯಕ್ಕೆ ಸಹಕಾರಿ ಬ್ಯಾಕ್ಟೀರಿಯಾಗಳನ್ನು ಪೋಷಿಸುತ್ತದೆ ಮತ್ತು ದೊಡ್ಡ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಚಯಾಪಚಯ ಕ್ರಿಯೆಯ ಒತ್ತಡ ಮತ್ತು ಕರುಳಿನ ಉರಿಯೂತಕ್ಕೆ ಕಾರಣವಾಗುವ ಸಕ್ಕರೆಯನ್ನು ತ್ಯಜಿಸಿ. ನೀರು ಮತ್ತು ಸಕ್ಕರೆ ಇಲ್ಲದ ಚಹಾವನ್ನು ಕುಡಿಯಿರಿ.
ಆರಂಭದಲ್ಲೇ ಕಾಣಿಸಿಕೊಳ್ಳುವ ದೊಡ್ಡ ಕರುಳಿನ ಕ್ಯಾನ್ಸರ್‌ನ ಈ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ – Colorectal Cancer
WhatsApp Group
Join Now