ರಾಜ್ಯದಲ್ಲಿ ಒಂದರ ಹಿಂದೊಂದರಂತೆ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲರನ್ನ ಬೆಚ್ಚಿಬೀಳಿಸಿದೆ. ಪ್ರೀತಿಯ ನೆಪದಲ್ಲಿ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ನೀಚ ಕೃತ್ಯ ಎಸಗಿದ್ದಾನೆ.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ಈ ಘಟನೆ ನಡೆದಿದ್ದು, ಮಾಗಡಿ ಠಾಣೆ ಪೊಲೀಸರು ಆರೋಪಿಗಳಾದ ವಿಕಾಸ್, ಪ್ರಶಾಂತ್, ಚೇತನ್ ಬಂಧಿಸಿ ಜೈಲಿಗಟ್ಟಿದ್ದಾರೆ.
ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್
ಬೆಂಗಳೂರಿನ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನ ಆರೋಪಿ ವಿಕಾಸ್, ಪ್ರಾರಂಭದಲ್ಲಿ ಪ್ರೀತಿಯ ನೆಪದಲ್ಲಿ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದನು, ಬಳಿಕ ಯುವತಿ ಜೊತೆ ಲೈಂಗಿಕ ಸಂಪರ್ಕ ಬೆಳಸಿದ್ದನು. ಅದನ್ನ ವಿಡಿಯೋ ಮಾಡಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕುತ್ತಿದ್ದನು. ನಾನು ಕರೆದಾಗಲೆಲ್ಲ ಬರಬೇಕು ಎಂದು ಆರೋಪಿ ವಿಕಾಸ್ ವಿದ್ಯಾರ್ಥಿನಿಗೆ ಬ್ಲಾಕ್ಮೇಲ್ ಮಾಡುತ್ತಿದ್ದನು.
ಸ್ನೇಹಿತರ ಜೊತೆಗೂಡಿ ಸಾಮೂಹಿಕ ಅತ್ಯಾಚಾರ
ಮೂರು ತಿಂಗಳ ಹಿಂದೆ ವಿಡಿಯೋ ಮಾಡಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿ ವಿಕಾಸ್, ತನ್ನ ಸ್ನೇಹಿತರಾದ ಪ್ರಶಾಂತ್, ಚೇತನ್ ಎಂಬುವವರನ್ನು ಜೊತೆಗೆ ಸೇರಿಸಿಕೊಂಡು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ಮಾಗಡಿ ಠಾಣೆಗೆ ದೂರು ನೀಡಿದ್ದ, ನೀಚ ಕೃತ್ಯ ಎಸಗಿದ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಎಲ್ಲರೂ ಒಂದೇ ಗ್ರಾಮದವರು, ಪರಿಚಯಸ್ಥರು
ಇನ್ನೂ, ಈ ಘಟನೆ ಬಗ್ಗೆ ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ್ ಗೌಡ ಮಾತನಾಡಿದ್ದಾರೆ. ಈ ಪ್ರಕರಣದಲ್ಲಿ ಮೂರು ಜನ ಆರೋಪಿಗಳ ಬಂಧನವಾಗಿದೆ. ಎಲ್ಲರೂ ಸಹ ಒಂದೇ ಗ್ರಾಮದವರು, ಪರಿಚಯಸ್ಥರು, ಅದನ್ನೇ ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಮಾಡಿದ್ದಾರೆ. ಹುಡುಗಿ ಜೊತೆ ಕಳೆದ ಕ್ಷಣಗಳನ್ನ ವಿಡಿಯೋ ಮಾಡಿದ್ದಾರೆ, ಮತ್ತೆ ಸ್ನೇಹಿತರ ಜೊತೆಗೂಡಿರುವ ವಿಡಿಯೋ ಸಹ ಇದೆ. ಸದ್ಯ ಮೊಬೈಲ್ ಅನ್ನ FSLಗೆ ಕಳುಹಿಸಲಾಗಿದೆ. ಅತ್ಯಾಚಾರ ಕೇಸ್ನಲ್ಲಿ ಇಬ್ಬರು ವಿದ್ಯಾರ್ಥಿಗಳು, ಒಬ್ಬ ಉದ್ಯೋಗಿ ಇದ್ದಾನೆ ಎಂದು ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ರು.
ಕಾಲೇಜ್ ವಿದ್ಯಾರ್ಥಿನಿ ಮೇಲೆ ಮೂವರಿಂದ ಅತ್ಯಾ*ರ; ವಿಡಿಯೋ ಇಟ್ಟುಕೊಂಡು ನಡೆಸಿದ್ರಾ ಮಾನಗೇಡಿ ಕೃತ್ಯ?
WhatsApp Group
Join Now