ಆರ್‌ಸಿಬಿ ಹಾಗು ಪಂಜಾಬ್ ಐಪಿಎಲ್ ಫೈನಲ್ ಪಂದ್ಯ ಪ್ರದರ್ಶಿಸಲು ಮುಂದಾದ ಚಿತ್ರಮಂದಿರಗಳು.! ಆರ್‌ಸಿಬಿ ಸೋತರೆ ಅಷ್ಟೇ ಕಥೆ!

Spread the love

ನಾಳೆ (ಜೂನ್ 3) ನಡೆಯಲಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದ ಮೂಲಕ 2 ತಿಂಗಳುಗಳ ಕಾಲ ನಡೆದ ಟೂರ್ನಿ ಮುಕ್ತಾಯಗೊಳ್ಳಲಿದೆ.

ನಿನ್ನೆ ನಡೆದ ಕ್ವಾಲಿಫಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲಿಸಿದ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಿಸಿದ್ದು, ಒಂದನೇ ಕ್ವಾಲಿಫಯರ್ ಪಂದ್ಯ ಗೆದ್ದು ಈಗಾಗಲೇ ಫೈನಲ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ.

ಐಪಿಎಲ್‌ ಆರಂಭವಾದಾಗಿನಿಂದ ಒಮ್ಮೆಯೂ ಕಪ್‌ ಗೆಲ್ಲದ ಎರಡು ತಂಡಗಳು ಫೈನಲ್‌ ಪ್ರವೇಶಿಸಿರುವುದು ವಿಶೇಷವಾಗಿದ್ದು, ಯಾವ ತಂಡ ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

ಹೀಗಾಗಿ ಈ ಪಂದ್ಯ ಭಾರೀ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ರಾಜ್ಯದ ಹಲವೆಡೆ ಪಂದ್ಯದ ನೇರಪ್ರಸಾರದ ಸ್ಕ್ರೀನಿಂಗ್‌ ಮಾಡಲು ಮುಂದಾಗಿವೆ. ಚಿತ್ರಮಂದಿರಗಳೂ ಸಹ ಈ ಕೆಲಸಕ್ಕೆ ಕೈಹಾಕಿವೆ. ಗೋಕಾಕ್‌ನ ಲಕ್ಷ್ಮಿ ಚಿತ್ರಮಂದಿರದಲ್ಲಿ ಸಹ ಈ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ಮಾಡಲು ಮುಂದಾಗಿದ್ದು, ಬಾಲ್ಕನಿಗೆ 150 ರೂ ಹಾಗೂ ಸೆಕೆಂಡ್‌ ಕ್ಲಾಸ್‌ಗೆ 100 ರೂ ವಿಧಿಸಲಾಗಿದೆ.

ಈ ಕುರಿತಾದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಲ ನೆಟ್ಟಿಗರು ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಆರ್‌ಸಿಬಿ ಗೆದ್ದರೆ ಸರಿ, ಒಂದುವೇಳೆ ಸೋತರೆ ಈ ಚಿತ್ರಮಂದಿರದ ಗತಿಯೇನು ಎಂದು ಕಾಮೆಂಟ್‌ ಮಾಡಿದ್ದಾರೆ. ಒಂದುವೇಳೆ ಆರ್‌ಸಿಬಿ ಪಂದ್ಯ ಸೋತರೆ ಅಭಿಮಾನಿಗಳು ಹತಾಶೆಯಲ್ಲಿ ಚೇರ್‌ಗಳನ್ನು ಮುರಿದುಹಾಕಬಹುದು ಎಂದಿದ್ದಾರೆ.

WhatsApp Group Join Now

Spread the love

Leave a Reply