ಇದೀಗ 700 ಕ್ಕಿಂತ ಕಡಿಮೆ ಸಿಬಿಲ್ ಸ್ಕೋರ್ ಇದ್ದವರಿಗೆ ಹೊಸ ರೂಲ್ಸ್ | ಕೇಂದ್ರದ ಘೋಷಣೆ – Cibil Score Rules

Spread the love

Cibil Score Rules : ನೀವು ಕೂಡ ಯಾವುದಾದರೂ ಒಂದು ಬ್ಯಾಂಕಿನಲ್ಲಿ ಸಾಲವನ್ನ ಪಡೆದುಕೊಳ್ಳಬೇಕು ಅಂತ ಹೇಳಿದ್ರೆ, ನೀವು ಉತ್ತಮವಾದ ಸಿಬಿಲ್ ಸ್ಕೋರ್ ಹೊಂದಿರುವುದು ಅತೀ ಕಡ್ಡಾಯವಾಗಿದೆ. ಒಬ್ಬ ವ್ಯಕ್ತಿಯ ಸಾಲದ ಅರ್ಜಿಯಲ್ಲಿ ಸಿಬಿಲ್ ಸ್ಕೋರ್ ಅನ್ನುವುದು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಯಾವುದೇ ಒಂದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ನಿಮಗೆ ಸಾಲವನ್ನ ನೀಡುವ ಸಮಯದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಕಡ್ಡಾಯವಾಗಿ ಚೆಕ್ ಮಾಡುತ್ತದೆ. ಅದೇ ರೀತಿಯಲ್ಲಿ ಸಿಬಿಲ್ ಸ್ಕೋರ್ ಆಧಾರದ ಮೇಲೆ ನಿಮ್ಮ ಸಾಲದ ಬಡ್ಡಿಯನ್ನ ನಿರ್ಧಾರ ಮಾಡಲಾಗುತ್ತದೆ.

WhatsApp Group Join Now

ಈ ನಡುವೆ ಸಿಬಿಲ್ ಸ್ಕೋರ್ ಗಳಿಗೆ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಹೊಸ ನಿಯಮವನ್ನ ದೇಶಾದ್ಯಂತ ಜಾರಿಗೆ ತಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಜಾರಿಗೆ ತಂದಿರುವ ಈ ಹೊಸ ನಿಯಮ ಸಾಲವನ್ನ ಪಡೆದುಕೊಳ್ಳುವವರಿಗೆ ಬಹಳ ಸಹಕಾರಿಯಾಗಲಿದೆ. ಯಾವುದೇ ಒಬ್ಬ ವ್ಯಕ್ತಿ ಕಡಿಮೆ ಸಿಬಿಲ್ ಸ್ಕೋರನ್ನ ಹೊಂದಿದ್ದು, ಆತ ಯಾವುದೇ ಒಂದು ಬ್ಯಾಂಕಿನಲ್ಲಿ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲಕ್ಕಾಗಿ ಅರ್ಜಿಯನ್ನ ಸಲ್ಲಿಸಿದರೆ ಆತನ ಸಾಲದ ಅರ್ಜಿಯನ್ನ ತಿರಸ್ಕಾರ ಮಾಡುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶವನ್ನ ಹೊರಡಿಸಿದೆ.

ಒಬ್ಬ ವ್ಯಕ್ತಿ ಇದೇ ಮೊದಲ ಬಾರಿಗೆ ಸಾಲವನ್ನ ಪಡೆದುಕೊಳ್ಳುತ್ತಿದ್ದು, ಆತನ ಸಿಬಿಲ್ ಸ್ಕೋರ್ ತೀರ ಕಡಿಮೆಯಾಗಿದ್ದರೂ ಕೂಡ ಸಾಲವನ್ನ ಅಂಗೀಕಾರ ಮಾಡಬೇಕು ಅಂತ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶವನ್ನ ಹೊರಡಿಸಿದೆ. ಅದೇ ರೀತಿಯಲ್ಲಿ ಹಣಕಾಸು ಸಂಸ್ಥೆಗಳು ಒಬ್ಬ ವ್ಯಕ್ತಿಯ ಸಿಬಿಲ್ ಸ್ಕೋರ್ ನ್ನು ಪ್ರತಿ 15 ದಿನಗಳಿಗೆ ಒಮ್ಮೆ ಅಪ್ಡೇಟ್ ಮಾಡಬೇಕು ಅಂತ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಆದೇಶವನ್ನ ಹೊರಡಿಸಿದೆ. ಎಲ್ಲಾ ಹಣಕಾಸು ಸಂಸ್ಥೆಗಳು ಸಿಬಿಲ್ ಸ್ಕೋರ್ ಗಳನ್ನ ಪ್ರತಿ 15 ದಿನಗಳಿಗೊಮ್ಮೆ ಅಪ್ಡೇಟ್ ಮಾಡಬೇಕು. ಅದೇ ರೀತಿಯಲ್ಲಿ 650 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ನ್ನ ಹೊಂದಿರುವವರಿಗೆ ಕಡಿಮೆ ಪ್ರಮಾಣದ ಬಡ್ಡಿಯಲ್ಲಿ ಸಾಲವನ್ನ ನೀಡಬೇಕು ಎಂದು ಆದೇಶವನ್ನ ಹೊರಡಿಸಲಾಗಿದೆ.

WhatsApp Group Join Now

ಅದೇ ರೀತಿಯಲ್ಲಿ ಕಡಿಮೆ ಸಿಬಿಲ್ ಸ್ಕೋರ್ ಗಳನ್ನ ಹೊಂದಿರುವವರಿಗೆ ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಅವರ ಸಿಬಿಲ್ ಸ್ಕೋರ್ ಮಾಹಿತಿಯನ್ನ ತಪ್ಪದೆ ಕೊಡಬೇಕು. ಸಿಬಿಲ್ ಸ್ಕೋರ್ ಅನ್ನುವುದು ಮೂರು ಅಂಕೆಯ ಸಂಖ್ಯೆಯಾಗಿದ್ದು, 300 ಅತಿ ಕಡಿಮೆ ಸಿಬಿಲ್ ಸ್ಕೋರ್ ಆದರೆ 900 ಅತ್ಯುತ್ತಮ ಸಿಬಿಲ್ ಸ್ಕೋರ್ ಆಗಿರುತ್ತೆ. ಹಣಕಾಸು ಸಂಸ್ಥೆಗಳು ಸಿಬಿಲ್ ಸ್ಕೋರ್ ವಿಷಯವಾಗಿ ಎಲ್ಲಾ ಸಾಲಗಾರರ ಬಳಿ ಪಾರದರ್ಶಕತೆಯನ್ನ ಕಾಪಾಡಿಕೊಳ್ಳಬೇಕು ಅಂತ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶವನ್ನ ಹೊರಡಿಸಿದೆ.


Spread the love

Leave a Reply