Loan And Subsidy : ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಬ್ಸಿಡಿ ಹಾಗು ಸಾಲ ಸೌಲಭ್ಯ! ಹೇಗೆ ಪಡೆಯುವುದು.?

Loan And Subsidy : ನಮಸ್ಕಾರ ಸ್ನೇಹಿತರೇ, ರೈತರು ಕೃಷಿಯ ಜೊತೆಗೆ ಹೆಚ್ಚಿನ ಆದಾಯ ಗಳಿಸುವ ಸಲುವಾಗಿ ಇದೀಗ ಸರ್ಕಾರವು ಕುರಿ ಅಥವಾ ಕೋಳಿ ಸಾಕಾಣಿಕೆ ಮಾಡುವವರಿಗೆ ಸಬ್ಸಿಡಿ ಸಾಲ ಕೊಡುವುದಕ್ಕೆ ಮುಂದಾಗಿದೆ. ಹೌದು, ಸರ್ಕಾರದಿಂದ ಸಿಗುವ ಈ ಒಂದು ಸಾಲ ಸೌಲಭ್ಯ ಪಡೆಯುವುದರಿಂದ ಸಾಕಾಣಿಕೆ ಮಾಡಿ, ಒಳ್ಳೆಯ ಆದಾಯ ಗಳಿಸಬಹುದು. ಈ ಸಬ್ಸಿಡಿ ರಾಷ್ಟ್ರೀಯ ಜಾನುವಾರು ಮಿಶನ್ ಇಂದ ಕೊಡಲಾಗುತ್ತಿದೆ. ಇದರಿಂದ ಸಾಲವನ್ನು ಯಾವುದಕ್ಕೆ ಕೊಡಲಾಗುತ್ತದೆ? ಹೇಗೆ ಸಾಲ ಪಡೆಯುವುದು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : ಬಿಪಿಎಲ್ ಕಾರ್ಡ್ ಇದ್ದವರಿಗೆ ₹30,000/- ರೂಪಾಯಿ ಸಹಾಯಧನ.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

ಜಾನುವಾರು ಹಾಗೂ ಕೋಳಿ ಸಾಕಾಣಿಕೆ : ರೈತರು ಆದಾಯ ಹೆಚ್ಚಿಸಲು ಲಾಭದಾಯಕ ತಳಿಯ ಕೋಳಿ ಹಾಗು ಜಾನುವಾರುಗಳನ್ನು ಸಾಕಲು ತರಬೇತಿ ಕೊಟ್ಟು, ಹಣಕಾಸಿನ ಸೌಲಭ್ಯ ಕೂಡ ಕೊಡಲಾಗುತ್ತದೆ.

ಕೋಳಿ ಫಾರ್ಮ್ ಹೌಸ್ : ಕೋಳಿಗಳನ್ನು ಸಾಕಾಣಿಕೆ ಮಾಡುವ ಘಟಕ ಇದು. ಇದರ ಸ್ಥಾಪನೆಗಾಗಿ ಸುಮಾರು 25 ಲಕ್ಷದವರೆಗೂ ಸಾಲ ಸೌಲಭ್ಯ ಸಿಗುತ್ತದೆ. ಈ ಪ್ರಯೋಜನ ಪಡೆಯುವ ರೈತರಿಗೆ ಹಣಕಾಸಿನ ವಿಷಯದಲ್ಲಿ ಇದು ದೊಡ್ಡ ಸಹಾಯ ಎಂದು ಹೇಳಿದರೆ ಖಂಡಿತ ತಪ್ಪಲ್ಲ.

ಇದನ್ನೂ ಕೂಡ ಓದಿ : PM Schemes : ಕೇಂದ್ರ ಸರ್ಕಾರದ ಈ ಹೊಸ ಯೋಜನೆಯಲ್ಲಿ ತಿಂಗಳಿಗೆ ₹3,000/- ಸಿಗುತ್ತದೆ.! ಹೇಗೆ ಅರ್ಜಿ ಸಲ್ಲಿಸುವುದು.?

ಕುರಿ ಮೇಕೆ ಸಾಕಾಣಿಕೆ : ರೈತರು ಕುರಿ ಮೇಕೆ ಸಾಕಾಣಿಕೆ ಇಂದ ಕೂಡ ಹೆಚ್ಚು ಲಾಭ ಪಡೆಯಬಹುದು. ಕುರಿ ಮೇಕೆ ಸಾಕಾಣಿಕೆ ಘಟಕ ಸ್ಥಾಪನೆ ಮಾಡುವುದಕ್ಕಾಗಿ 50 ಲಕ್ಷದವರೆಗು ಸಾಲ ಸೌಲಭ್ಯ ಸಿಗುತ್ತದೆ.

ಹಂದಿ ಸಾಕಾಣಿಕೆ : ಈ ಒಂದು ಕೆಲಸ ಮಾಡುವುದಕ್ಕಾಗಿ ಸರ್ಕಾರದಿಂದ ನಿಮಗೆ 30 ಲಕ್ಷದವರೆಗು ಆರ್ಥಿಕ ಸಹಾಯ ಸಿಗುತ್ತದೆ. ಇದು ರೈತರಿಗೆ ಹಣ ಗಳಿಸಲು, ಒಳ್ಳೆಯ ಮಾರ್ಗ ಆಗಿರುತ್ತದೆ.

ಮೇವು ಸಂಗ್ರಹಣಾ ಸೌಲಭ್ಯ : ಜಾನುವಾರುಗಳಿಗೆ ಬೇಕಾದ ಮೇವುಗಳನ್ನು ಸಂಗ್ರಹ ಮಾಡುವುದಕ್ಕೆ ಸರ್ಕಾರದ ಕಡೆಯಿಂದ 50 ಲಕ್ಷದವರೆಗು ಹಣ ಸಹಾಯ ಸಿಗುತ್ತದೆ.

ಇದನ್ನೂ ಕೂಡ ಓದಿ : ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲ ಸೌಲಭ್ಯ – business loan for women

ಫೀಡ್ ಹಾಗೂ ಫಾಡರ್ ಅಬ್ಬಿವೃದ್ದಿ : ಈ ಮಿಷನ್ ಮೂಲಕ ಸಾಕುವ ಎಲ್ಲಾ ಜಾನುವಾರುಗಳಿಗೆ ಮೇವು ಹಾಗೂ ಮೇವಿನ ಘಟಕ ಸ್ಥಾಪನೆ ಮಾಡುವುದಕ್ಕೆ ನೆರವು ನೀಡಲಾಗುತ್ತದೆ.

ಈಶಾನ್ಯ ಪ್ರದೇಶದಲ್ಲಿ ಹಂದಿ ಸಾಕಾಣಿಕೆ : ಈಶಾನ್ಯದ ಪ್ರದೇಶಗಳಲ್ಲಿ ಹಂದಿ ಸಾಕಾಣಿಕೆಗೆ ಲಾಭವಿದೆ. ಹಾಗಾಗಿ ಆ ಪ್ರದೇಶದಲ್ಲಿ ಹಂದಿ ಸಾಕಾಣಿಕೆ ಹೆಚ್ಚಿಸಿ, ಆರ್ಥಿಕವಾಗಿ ಪ್ರಬಲರಾಗುವ ಹಾಗೆ ಮಾಡುವ ಮಿಷನ್ ಇದಾಗಿದೆ.

ಇದನ್ನೂ ಕೂಡ ಓದಿ : Land Records : ನಿಮ್ಮ ಜಮೀನಿನ ಪಹಣಿ ಪತ್ರದಲ್ಲಿ ಹೆಸರು ತಪ್ಪಾಗಿದ್ಯಾ.? ಈ ರೀತಿ ಸುಲಭವಾಗಿ ಬದಲಾಯಿಸಿ! ಒಂದೇ ದಿನದಲ್ಲಿ ನಿಮ್ಮ ಹೆಸರಿಗೆ.!

ಕೌಶಲ್ಯ ಅಭಿವೃದ್ಧಿ ಹಾಗೂ ತಂತ್ರಜ್ಞಾನ ವರ್ಗಾವಣೆ : ಇದರಲ್ಲಿ ರೈತರಿಗೆ ಕೃಷಿ ವಿಷಯದಲ್ಲಿ ಗೊತ್ತಿರಬೇಕಾದ ಟೆಕ್ನಿಕಲ್ ಸ್ಕಿಲ್ ಗಳನ್ನು ತಿಳಿಸಿಕೊಡಲಾಗುತ್ತದೆ. ಯಾವ ಪದ್ಧತಿ ಬಳಸಿದರೆ, ಜಾನುವಾರು ಸಾಕಾಣಿಕೆಯಲ್ಲಿ ಲಾಭ ಗಳಿಸಬಹುದು ಎಂದು ತಿಳಿಸಲಾಗುತ್ತದೆ. ಸಬ್ಸಿಡಿ ಹಾಗೂ ಹಣಕಾಸಿನ ಸಹಾಯ: ರೈತರಿಗೆ ಜಾನುವಾರು ಸಾಕಾಣಿಕೆ ವಿಷಯದಲ್ಲಿ ಹಣಕಾಸಿನ ಸಹಾಯದ ಜೊತೆಗೆ ಸಬ್ಸಿಡಿ ಕೂಡ ಕೊಡಲಾಗುತ್ತದೆ.

ವಿಶೇಷ ತಳಿಯ ಜಾನುವಾರು ಸಾಕಾಣಿಕೆ : ಇಲ್ಲಿ ನಾವು ಬೇರೆ ಪ್ರಾಣಿಗಳ ಸಾಕಾಣಿಕೆ ಮಾಡುವ ಬಗ್ಗೆ ತಿಳಿಸುತ್ತೇವೆ, ಕುದುರೆ, ಕತ್ತೆ, ಹೇಸರಗತ್ತೆ, ಒಂಟೆ ಇವುಗಳ ಸಾಕಾಣಿಕೆಗೆ 50% ವರೆಗು ಸರ್ಕಾರ ಸಹಾಯ ಮಾಡುತ್ತದೆ.

ಇದನ್ನೂ ಕೂಡ ಓದಿ : RF Scholarship : ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ₹50,000/- ಸ್ಕಾಲರ್ಶಿಪ್.! ಹೇಗೆ ಅರ್ಜಿ ಸಲ್ಲಿಸುವುದು.? ಕೊನೆಯ ದಿನಾಂಕ ಯಾವುದು.?

ಈ ಸೌಲಭ್ಯಗಳನ್ನು ಸರ್ಕಾರವು ವಿವಿಧ ಗುಂಪುಗಳಿಗೆ ಕೊಡುತ್ತಿದೆ. ಅವುಗಳು ಯಾವುವು ಎಂದರೆ, ಯಾವುದೇ ಖಾಸಗಿ ವ್ಯಕ್ತಿ, ಸ್ವಸಹಾಯ ಸಂಘದ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತ ಸಹಕಾರಿಗಳು, ಜಂಟಿ ಹೊಣೆಗಾರಿಕೆ ಗುಂಪುಗಳು ಸೇರಿದಂತೆ ಇನ್ನು ಅನೇಕ ರೀತಿಯ ಗುಂಪುಗಳಿಗೆ ಈ ಸೌಲಭ್ಯ ಸಿಗುತ್ತದೆ. ರೈತರ ಆದಾಯದಲ್ಲಿ ಏರಿಕೆ ಆಗಲಿ, ಅವರು ಉತ್ತಮವಾಗಿ ಹಣ ಸಂಪಾದನೆ ಮಾಡಲಿ ಎನ್ನುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply