ಮೈಸೂರು ಸ್ಫೋಟಕ್ಕೆ ಮತ್ತಿಬ್ಬರು ಬಲಿ : ತಂಗಿಯ ಸಾವಿನ ಸುದ್ದಿ ಕೇಳಿ ಅಣ್ಣನೂ ಸಾವು.! ಕುಟುಂಬಸ್ಥರ ಆಕ್ರಂದನ
ಮೈಸೂರು ಅರಮನೆ ಮುಂಭಾಗ ನಡೆದ ಹಿಲಿಯಂ ಸಿಲಿಂಡರ್ ಸ್ಪೋಟದಲ್ಲಿ ಗಂಭೀರ ಗಾಯಗೊಂಡಿದ್ದ ಹೂವಿನ ವ್ಯಾಪಾರಿ ಮಂಜುಳಾ ಚಿತಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇದೀಗ ಈ ವಿಷಯ ಕೇಳಿದ ಅವರ ಸಹೋದರ ಕೂಡ ಇಂದು ಸಾವನ್ನಪ್ಪಿದ್ದಾರೆ. ಹೀಲಿಯಂ ಸಿಲಿಂಡರ್ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತಂಗಿಯ ಸಾವಿನ ಸುದ್ದಿ ತಿಳಿದುಕೊಂಡ ಬಳಿಕ ಅವರ ಅಣ್ಣ ಪರಮೇಶ್ವರ್ (60) ಕೂಡ ಇಂದು ನಿಧನರಾಗಿದ್ದಾರೆ. ನಂಜನಗೂಡು ತಾಲೂಕಿನ ಚಾಮಲಾಪುರದ ನಿವಾಸಿಯಾಗಿರುವ ಪರಮೇಶ್ವರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು … Read more