ಮಂಗಳೂರಿನಲ್ಲಿ ಕೋಮುವಾದಿಗಳಿಂದಲೇ ಐಟಿ, ಬಿಟಿ ಕಂಪನಿಗಳಿಲ್ಲ ಎಂದ ಪ್ರಿಯಾಂಕ್ ಖರ್ಗೆ: ಕಲ್ಬುರ್ಗಿಯಲ್ಲಿ ಎಷ್ಟಿದೆ ಎಂದ ನೆಟ್ಟಿಗರು
ಮಂಗಳೂರಿನಲ್ಲಿ ಕೋಮುವಾದಿ ಸಂಘಟನೆಗಳಿಂದಾಗಿಯೇ ಐಟಿ-ಬಿಟಿ ಕಂಪನಿಗಳಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೋಮುವಾದಿಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಂತಹ ಕರಾವಳಿ ಜಿಲ್ಲೆಗಳಲ್ಲಿ ಐಟಿ ಬಿಟಿ ಕಂಪನಿಗಳು ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ ಎಂದಿದ್ದರು. ಅವರ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೆಲವರು ಸಚಿವರನ್ನು ಪ್ರಶ್ನೆ ಮಾಡಿದ್ದು ಹಾಗಿದ್ದರೆ ಕಲ್ಬುರ್ಗಿಯಲ್ಲಿ ಎಷ್ಟು ಐಟಿ ಬಿಟಿ ಕಂಪನಿಗಳಿವೆ ಎಂದಿದ್ದಾರೆ. … Read more