ಇಷ್ಟವಾದ ವಾಚ್‌ ಧರಿಸುವ ಹಕ್ಕು ನಮಗಿದೆ : ನನ್ನ Watch ಬೆಲೆ 24 ಲಕ್ಷ, ಆಸ್ಟ್ರೇಲಿಯಾದಲ್ಲಿ ಖರೀದಿಸಿದ್ದೆ – ಡಿಕೆಶಿ

ನನಗೆ ಮತ್ತು ಮುಖ್ಯಮಂತ್ರಿಗಳಿಗಿಬ್ಬರಿಗೂ ನಮಗಿಷ್ಟವಾದ ವಾಚ್‌ ಧರಿಸುವ ಹಕ್ಕು ಇದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಒಂದು ದಿನದ ಹಿಂದಷ್ಟೇ ಸಿಎಂ ಮತ್ತು ತಾವು ದುಬಾರಿ ವಾಚ್‌ ಧರಿಸಿರುವ ಬಗ್ಗೆ ಬಿಜೆಪಿ ಜೆಡಿಎಸ್‌ ಟೀಕೆ ಮಾಡುತ್ತಿದೆ ಎಂದಾಗ, ನಾನು ಈ ನನ್ನ ವಾಚ್‌ನ್ನು 7 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಖರೀದಿಸಿದ್ದೆ. ನಾನು ಇದನ್ನು ನನ್ನ ಕ್ರೆಡಿಟ್‌ ಕಾರ್ಡ್ ಮೂಲಕ 24 ಲಕ್ಷ ರೂ. ಕೊಟ್ಟು ಖರೀದಿಸಿದ್ದೇನೆ. ಬೇಕಿದ್ದರೆ ನನ್ನ ಕ್ರೆಡಿಟ್ ಕಾರ್ಡ್ ಪರಿಶೀಲಿಸಿ. ಇದನ್ನು … Read more

ಸಿಎಂ ಕುರ್ಚಿ ಖಾಲಿ ಇಲ್ಲ : ಸತೀಶ್‌ ಜಾರಕಿಹೊಳಿ ಹೇಳಿಕೆಗೆ ಎಂ.ಬಿ.ಪಾಟೀಲ್‌ ಕಿಡಿ ತಿರುಗೇಟು

ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವುದು ಪಕ್ಕಾ ಎಂದು ಆಪ್ತ ಬಣದಲ್ಲಿರುವ ಸತೀಶ್‌ ಜಾರಕಿಹೊಳಿ ಅವರೇ ಹೇಳಿದ ಹೊರತಾಗಿಯೂ, ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಅಪ್ಪಸ್ವರ ತೆಗೆದಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸತೀಶ್‌ ಜಾರಕಿಹೊಳಿ ಹೇಳಿರಬಹುದು. ಆದರೆ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ವ್ಯತಿರಿಕ್ತವಾಗಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಎರಡು ಬಾರಿ ಉಪಾಹಾರಕೂಟ ನಡೆಸಿದ್ದಾರೆ. ಅಲ್ಲಿಗೆ ಎಲ್ಲವೂ ಬಗೆಹರಿದಿದೆ. ಕಾಂಗ್ರೆಸ್‌‍ ಶಾಸಕರು … Read more

ಲಾರೆನ್ಸ್ ಬಿಷ್ಣೋಯ್ ಪೋಟೋ ಹಿಡಿದು ಅಂಜನಾದ್ರಿಗೆ ಬಂದ ಬೆಳಗಾವಿ ಮೂಲದ ಹನುಮ ಭಕ್ತ

ವಿಶ್ವ ಪ್ರಸಿದ್ದ ಕೊಪ್ಪಳ (Koppala) ಜಿಲ್ಲೆಯ ಹನುಮ ‌ಜನ್ಮಸ್ಥಳ ಅಂಜನಾದ್ರಿಯಲ್ಲಿ ( Anjanadri Hill) ಹನುಮ ಮಾಲೆ ವಿಸರ್ಜನೆ ಪ್ರಯುಕ್ತ ಭಕ್ತಸ್ತೋಮವೇ ಹರಿದು ಬಂದಿದೆ.‌ ಸಹಸ್ರಾರು ಹನುಮ ಮಾಲಾಧಾರಿಗಳು ಸರತಿ ರಾಮ ಹನುನ ನಾಮ ಸ್ಮರಣೆ ಮಾಡುತ್ತಲೇ ಮಾಲೆ ವಿಸರ್ಜನೆ ಮಾಡಿದರು. ಇದರ ಮಧ್ಯೆ ಭಕ್ತನೋರ್ವ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿ (Lawrence Bishnoi) ಫೋಟೋ ಹಿಡಿದು ಬಂದು ಗಮನ ಸೆಳೆದಿದ್ದಾನೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕೋಳಿವಾಡ ನಿವಾಸಿಯಾಗಿರುವ ರಾಜು ಎಂಬ ಹನುಮ ಭಕ್ತ ಗ್ಯಾಂಗ್ ಸ್ಟರ್ … Read more

3 ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ : ಇದು ಕೊಲೆ ಎಂದ ಮೃತಳ ಕುಟುಂಬಸ್ಥರು!

ಸರಿಯಾಗಿ ಬುಧವಾರ ಆಕೆ ಮದುವೆಯಾಗಿ ಮೂರು ತಿಂಗಳಾಗಿತ್ತು. ಇಬ್ಬರೂ ಅಕ್ಕಪಕ್ಕದ ಏರಿಯಾದವರು. ತುಂಬಾ ವರ್ಷಗಳಿಂದ ಪ್ರೀತಿ ಮಾಡಿದ್ದರು. ಆದರೆ, ಮದುವೆಯಾಗಿ ಮೂರು ತಿಂಗಳಿಗೆ ಸಂಸಾರ ಸರಿ ಬರದ ಕಾರಣಕ್ಕೆ ನವವಿವಾಹಿತೆ ಆ*ತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳೆಯ ಕುಟುಂಬಸ್ಥರು, ಹುಡುಗನ ಕುಟುಂಬದವರ ಕಿರುಕುಳದಿಂದಾಗಿಯೇ ಆಕೆ ಸಾವು ಕಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ತುಂಬಾ ವರ್ಷಗಳ ಕಾಲ ಪ್ರೀತಿ ಮಾಡಿ ಮೂರು ತಿಂಗಳ ಹಿಂದೆ 23 ವರ್ಷದ ಅಮೂಲ್ಯ 30 ವರ್ಷದ ಅಭಿಷೇಕ್‌ ಎನ್ನುವವರನ್ನು ಮದುವೆ ಆಗಿದ್ದರು. ಅದರೆ, ಬುಧವಾರ ಆಕೆ ನೇಣಿಗೆ … Read more

ಕಟ್ಟಡ ನಿರ್ಮಾಣ ಮಾಡಲು ಬಿಡದ ಪಕ್ಕದ ಮನೆಯವರು : ಕನಸಿನ ಮನೆಯಲ್ಲೇ ಟೆಕ್ಕಿ ಆತ್ಮಹತ್ಯೆ

ವೈಟ್‌ಫೀಲ್ಡ್‌ನಲ್ಲಿ ತಾನೇ ಕಟ್ಟಿಸುತ್ತಿದ್ದ ಮನೆಯಲ್ಲಿ ಟೆಕ್ಕಿ ಮುರಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮುರಳಿ ಅವರು ಉಷಾ ನಂಬಿಯಾರ್ ಎಂಬುವರ ಜಾಗವನ್ನು ಖರೀದಿ ಮಾಡಿಕೊಂಡು ಮನೆ ನಿರ್ಮಿಸುತ್ತಿದ್ದರು. ಆದರೆ, ಕಟ್ಟಡದಲ್ಲಿ ನಿಯಮ ಮೀರಿ ಕೆಲಸ ನಡೆಸಲಾಗಿದೆ ಎಂಬ ಆರೋಪದ ಮೇಲೆ ಉಷಾ ನಂಬಿಯಾರ್ ಅವರು ಜಿಬಿಎಗೆ ದೂರು ನೀಡಿದ್ದು, ಇದರಿಂದ ಜಿಬಿಎ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದೇ ವೇಳೆ, ಜಿಬಿಎ ಅಧಿಕಾರಿಗಳೊಂದಿಗೆ ಸೇರಿ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಮುರಳಿ ತಮ್ಮ ಡೆತ್ ನೋಟ್‌ನಲ್ಲಿ … Read more

ಪ್ರತಿದಿನ ಕುಡಿಯುವವರು vs ವಾರಕ್ಕೊಮ್ಮೆ ಕುಡಿಯುವವರು : ವೈದ್ಯರ ಪ್ರಕಾರ ಯಾರಿಗೆ ಜಾಸ್ತಿ ʼಎಣ್ಣೆʼ ಎಫೆಕ್ಟ್‌..?

ಇತ್ತೀಚಿನ ದಿನಗಳಲ್ಲಿ ವಾರಾಂತ್ಯ ಬಂದ ತಕ್ಷಣ ಪಾರ್ಟಿಗಳನ್ನ ಆಯೋಜಿಸುವ ಜನರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಆ ಪಾರ್ಟಿಗಳಲ್ಲಿ ಮದ್ಯ, ಆಹಾರ, ಪಾನೀಯಗಳು ಮತ್ತು ಬಹಳಷ್ಟು ಮೋಜು ಇರುತ್ತದೆ. ಸಾಂದರ್ಭಿಕವಾಗಿ ಕುಡಿಯುವುದರಿಂದ ಯಾವುದೇ ಹಾನಿ ಇಲ್ಲ ಎಂದು ಭಾವಿಸಿ ಜನರು ವಾರಾಂತ್ಯದಲ್ಲಿ ಕುಡಿಯುತ್ತಾರೆ. ವಾರಕ್ಕೊಮ್ಮೆ ಮದ್ಯಪಾನ ಮಾಡುವುದರಿಂದ ದೇಹದ ಮೇಲೆ ಯಾವುದೇ ವಿಶೇಷ ಪರಿಣಾಮ ಬೀರುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಹಾಗಲ್ಲ. ನೀವು ಮದ್ಯಪಾನ ಮಾಡುವ ಪ್ರಮಾಣ ಮತ್ತು ದಿನಗಳ ಸಂಖ್ಯೆಯನ್ನ ಅವಲಂಬಿಸಿ ನಿಮಗೆ ಹಾನಿಯಾಗಬಹುದು. … Read more

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡೋದು ಪಕ್ಕಾ- ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ

ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಬದಲಾವಣೆ ಚರ್ಚೆ (CM Change row) ಅಧಿಕಾರ ಹಸ್ತಾಂತರದ ಕುರಿತ ಹೇಳಿಕೆಗಳು ಇನ್ನೂ ತಣ್ಣಗಾಗಿಲ್ಲ. ಇದರ ಮುಂದುವರಿದ ಭಾಗ ಎಂಬಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಖುದ್ದು ಬೇಳೂರು ಗೋಪಾಲಕೃಷ್ಣ ಅವರ ಜೊತೆ ಅಧಿಕಾರ ತ್ಯಾಗದ ಕುರಿತು ಆಡಿದ್ದ ಮಾತುಗಳು ಸಿಎಂ ಬದಲಾವಣೆ ಚರ್ಚೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಇದೀಗ ಈ ಎಲ್ಲಾ ಬೆಳವಣಿಗೆಗಳ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ. ಹೌದು, ಸಿ.ಎಂ. ಸಿದ್ದರಾಮಯ್ಯ ಅವರ ಅಧಿಕಾರ … Read more

ಸಿಎಂ ಪಟ್ಟಕ್ಕೆ ಪಟ್ಟು ; ದೆಹಲಿಗೆ ಬಂದ ಕನಕಪುರ ಬಂಡೆ :‌ ರಾಹುಲ್‌ ಗಾಂಧಿ ಭೇಟಿಯಾಗ್ತಾರಾ ಡಿ ಕೆ ಶಿವಕುಮಾರ್?

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಅಧಿಕಾರ ಹಂಚಿಕೆ ಕುರಿತಂತೆ ಕಾಂಗ್ರೆಸ್‌ ನಾಯಕರಾದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಮಧ್ಯೆ ಗುದ್ದಾಟಗಳು ನಡೆದಿದ್ದು, ಹೈಕಮಾಂಡ್‌ ಸೂಚನೆ ಮೇರೆ ಎರಡು ಭಾರೀ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ನಡೆಸಿದ್ದಾರೆ. ಅಲ್ಲದೇ ಇಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ ಸಿ ವೇಣುಗೋಪಾಲ್‌ ಅವರನ್ನ ಭೇಟಿ ಮಾಡಿದ್ರೆ, ಇತ್ತ ಡಿಸಿಎಂ ಡಿ ಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ದೆಹಲಿಗೆ ಭೇಟಿ ಕೊಟ್ಟಿರುವ ಸಂದರ್ಭದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ … Read more

ನೀರಿನಲ್ಲಿ ಮುಳುಗಿಸಿ ತನ್ನ ಪುತ್ರ ಸೇರಿ ನಾಲ್ವರು ಮಕ್ಕಳನ್ನು ಹತ್ಯೆಗೈದ ಮಹಿಳೆ.!

ಪಾಣಿಪತ್ : ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಎಂದು ಮಹಿಳೆಯೊಬ್ಬಳು 4 ಮಕ್ಕಳನ್ನು ಹತ್ಯೆಗೈದ ಆಘಾತಕಾರಿ (Shocking) ಘಟನೆ ಹರಿಯಾಣದ ಪಾಣಿಪತ್‌ನ ಹಳ್ಳಿಯೊಂದರಲ್ಲಿ ನಡೆದಿದೆ. ಪೂನಂ ಬಂಧಿತ ಆರೋಪಿಯಾಗಿದ್ದು, ಹರಿಯಾಣದ ಪಾಣಿಪತ್‌ನಲ್ಲಿ ಪೊಲೀಸರು ಪೂನಂಳನ್ನು 4 ಮಕ್ಕಳನ್ನು ನೀರಿನ ಟ್ಯಾಂಕ್‌ಗಳಲ್ಲಿ ಮುಳುಗಿಸಿ ಕೊಂದ ಆರೋಪದ ಮೇಲೆ ಬಂಧಿಸಿದ್ದಾರೆ. 2023ರಲ್ಲಿ ಸೋನಿಪತ್‌ನ ಬೋಹಾದ್ ಗ್ರಾಮದಲ್ಲಿ ತನ್ನ ಅತ್ತಿಗೆಯ ಮಗಳನ್ನು ಕೊಂದಿದ್ದಳು. ಅದಾದ ನಂತರ ಯಾರೂ ಅನುಮಾನ ಪಡಬಾರದು ಎಂದು ತಪ್ಪಿಸಿಕೊಳ್ಳಲು ತನ್ನ ಸ್ವಂತ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ … Read more

ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಲವ್ವಿಡವ್ವಿ ; ಮೂರು ಮಕ್ಕಳ ತಾಯಿಯ ಕತ್ತು ಸೀಳಿ ಬರ್ಬರ ಹತ್ಯೆ!

ಗಂಡನನ್ನು ಬಿಟ್ಟು ಮಕ್ಕಳ ಜೊತೆ ತಾಯಿಮನೆ ಸೇರಿದ್ದ ಮಹಿಳೇಯೋರ್ವರು ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ. ಮನೆಯ ಹಿಂದೆ ಬಟ್ಟೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಬರ್ಬರ ಹತ್ಯೆ ಮಾಡಲಾಗಿದೆ. ಸಂಧ್ಯಾ (32) ಮೃತ ಮಹಿಳೆಯಾಗಿದ್ದಾರೆ. ಮೃತ ಸಂಧ್ಯಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅರೇನೂರು ಗ್ರಾಮದವರು. ಕಳೆದ 10 ವರ್ಷಗಳ ಹಿಂದೆ ಅರೇನೂರು ಗ್ರಾಮದಿಂದ 20 ಕಿಮೀ ದೂರದ ಶಿರಗೋಳ ಗ್ರಾಮದ ರವಿ ಅವರೊಂದಿಗೆ ಸಂಧ್ಯಾ ಮದುವೆಯಾಗಿತ್ತು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿ … Read more