ಬೆಂಗಳೂರಲ್ಲಿ ಪ್ರೀತ್ಸೆ ಅಂತ 19ರ ಹುಡ್ಗಿ ಹಿಂದೆ ಬಿದ್ದ 40ರ ಅಂಕಲ್‌ ನ ಭೀಕರ ಹತ್ಯೆ.!

ಲವ್ ಮಾಡು ಎಂದು ಯುವತಿಯ ಬೆನ್ನು ಹತ್ತಿದ್ದ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. 19 ವರ್ಷದ ಯುವತಿಯ ಹಿಂದೆ 40 ವರ್ಷದ ವ್ಯಕ್ತಿ ಲವ್ ಮಾಡು ಎಂದು ದುಂಬಾಲು ಬಿದಿದ್ದಾನೆ. ನನ್ನನ್ನು ಪ್ರೀತಿ ಮಾಡು ಎಂದು ಬೆನ್ನು ಬಿದ್ದಿದ್ದ. ಇದನ್ನ ಸಹಿಸದ ಯುವತಿಯ ತಂದೆ ಹಾಗೂ ಸೋದರ ಮಾವ 40 ವರ್ಷದ ಚೆಲುವ ಎನ್ನುವ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಬಳಿ ವ್ಯಕ್ತಿಯ ಕೊಲೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ … Read more

‘ನಿಮ್ಮ ಮನದ ಇಷ್ಟ ಇನ್ನೊಂದು ತಿಂಗಳಲ್ಲಿ ಈಡೇರುತ್ತೆ’ – ಡಿಕೆಶಿಗೆ ಹೂವಿನ ವರ ಕೊಟ್ಟ ಅಂಕೋಲಾ ‘ಜಗದೀಶ್ವರಿ’!

ಸಿಎಂ ಹುದ್ದೆಯ ನಿರೀಕ್ಷೆಯಲ್ಲಿರುವ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉತ್ತರ ಕರ್ನಾಟಕದ ಅಂಕೋಲಾದ ಆಂದ್ಲೆ ಜಗದೀಶ್ವರಿ ದೇವಸ್ಥಾನಕ್ಕೆ ಡಿ. 19ರಂದು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು, ಅಲ್ಲಿನ ದೇವರಿಗೆ ಪೂಜೆ ಸಲ್ಲಿಸಿ ಮನದ ಬೇಡಿಕೆಯನ್ನು ಈಡೇರಿಸುವಂತೆ ಪ್ರಾರ್ಥಿಸಿದಾಗ ದೇವಿಯು ಬಲಬದಿಯಿಂದ ಹೂವಿನ ಪ್ರಸಾದ ಕೊಟ್ಟಿದ್ದು ಇನ್ನೊಂದು ತಿಂಗಳಲ್ಲಿ ಆಸೆ ಈಡೇರುವುದಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ. ಇದು ಡಿಕೆಶಿ ಬಣದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಅಂಕೋಲದ ಆಂದ್ಲೆ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಡಿಸಿಎಂ … Read more

ಡಿಕೆ ಶಿವಕುಮಾರ್ ಟೆಂಪಲ್ ರನ್ ನಲ್ಲಿರುವಾಗ ಸದನದಲ್ಲಿ ಸಿಎಂ ಹುದ್ದೆ ಬಗ್ಗೆ ಸಿದ್ದರಾಮಯ್ಯ ಶಾಕಿಂಗ್ ಘೋಷಣೆ

ಒಂದೆಡೆ ಡಿಕೆ ಶಿವಕುಮಾರ್ ಟೆಂಪಲ್ ರನ್ ನಡೆಸಿದ್ದರೆ ಇತ್ತ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಸಿಎಂ ಬದಲಾವಣೆ ಬಗ್ಗೆ ಶಾಕಿಂಗ್ ಘೋಷಣೆಯೊಂದನ್ನು ಮಾಡಿದ್ದಾರೆ. ರಾಜ್ಯದಲ್ಲಿ ಸಿಎಂ ಕುರ್ಚಿ ಕಾಳಗ ತಾರಕಕ್ಕೇರಿರುವಾಗಲೇ ಇತ್ತ ಸಿದ್ದರಾಮಯ್ಯ ಇಂದು ಸದನದಲ್ಲೇ ಐದು ವರ್ಷವೂ ನಾನೇ ಸಿಎಂ ಎಂದು ಘೋಷಣೆ ಮಾಡಿದ್ದಾರೆ. ವಿಪಕ್ಷ ಶಾಸಕ ಸುನಿಲ್ ಕುಮಾರ್ ನೀವೇ ಇರುತ್ತೀರಾ ಇಲ್ವಾ ಎಂದು ಸ್ಪಷ್ಟನೆ ಕೇಳಿದಾಗ ಕೆರಳಿದ ಸಿದ್ದರಾಮಯ್ಯ ಐದೂ ವರ್ಷವೂ ನಾನೇ ಸಿಎಂ ಎಂದಿದ್ದಾರೆ. ಮೊನ್ನೆಯವರೆಗೂ ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ ಎನ್ನುತ್ತಿದ್ದ … Read more

ದಾನ ಪಡೆದ ರಕ್ತದಿಂದ 5 ಮಕ್ಕಳಿಗೆ ಹೆಚ್‌ಐವಿ ಸೋಂಕು – ಮೂವರು ಆರೋಗ್ಯ ಸಿಬ್ಬಂದಿ ಅಮಾನತು

ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ (Satna Hospital) ಚಿಕಿತ್ಸೆ ವೇಳೆ ರಕ್ತದಾನ ಪಡೆದ 6 ಮಕ್ಕಳಿಗೆ ಹೆಚ್‌ಐವಿ ಸೋಂಕು ತಗುಲಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದ್ದು, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಭಾರೀ ಕಳವಳ ವ್ಯಕ್ತವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಮೂವರು ಆರೋಗ್ಯ ಸಿಬ್ಬಂದಿಯನ್ನ ಅಮಾನತುಗೊಳಿದ್ದು, ತನಿಖೆಗೂ ಆದೇಶಿಸಿದೆ. ಥಲಸ್ಸೆಮಿಯಾದಿಂದ (Thalassemia) ಬಳಲುತ್ತಿದ್ದ 15 ವರ್ಷದೊಳಗಿನ 6 ಮಕ್ಕಳಿಗೆ ರಕ್ತ ಕೊಡುವಾಗ ವೈದ್ಯರು ಯಡವಟ್ಟು ಮಾಡಿದ್ದಾರೆ. ಬಾಧಿತ ಮಕ್ಕಳಿಗಾಗಿ 3 ಬ್ಯಾಂಕ್‌ಗಳಿಂದ (Blood Bank) 189 … Read more

ಚಪ್ಪಲಿ ಆಚೆ ಬಿಟ್ಟು ಬನ್ನಿ ಎಂದಿದ್ದಕ್ಕೆ ವೈದ್ಯನ ಮೇಲೆ ಹಲ್ಲೆ – ವಿಡಿಯೋ ವೈರಲ್‌

ಮೈಸೂರು : ಚಪ್ಪಲಿ ಹೊರಗೆ ಬಿಟ್ಟು ಬನ್ನಿ ಎಂದು ವೈದ್ಯ ಹೇಳಿದ್ದಕ್ಕೆ ಮಗುವನ್ನು ಕರೆದುಕೊಂಡು ಬಂದಿದ್ದ ಕುಟುಂಬವೊಂದು ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ (Crime) ಮೈಸೂರಿನ ಉದಯರಿಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಾ. ಅನೂಪ್‌ ಹಲ್ಲೆಗೊಳಗಾದ ವೈದ್ಯರಾಗಿದ್ದು, ರುಬಿಯಾಷ್‌ ಷರೀಫ್‌ ಎಂಬಾತ ಹಾಗೂ ಆತನ ತಂದೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ರುಬಿಯಾಜ್‌ ಷರೀಫ್‌ ನ ಮೂರು ವರ್ಷದ ಮಗು ಆಸ್ಪತ್ರೆಗೆ ದಾಖಲಾಗಿತ್ತು. ಈ ವೇಳೆ ಮಗುವನ್ನು ನೋಡಲು ರುಬಿಯಾಜ್‌ ಷರೀಫ್‌ ಚಪ್ಪಲಿ ಧರಿಸಿಯೇ … Read more

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನನ್ನು ಥಳಿಸಿ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಾಂಗ್ಲಾದೇಶದ ಮೈಮೆನ್ ಸಿಂಗ್ ನ ಭಲುಕಾದಲ್ಲಿ ಹಿಂದೂ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದಿರುವ ಘಟನೆ ಬಾಂಗ್ಲಾದೇಶದ ಮೈಮೆನ್ ಸಿಂಗ್ ನ ಭಲುಕಾದಲ್ಲಿ ನಡೆದಿದೆ. ಭಾಲುಕಾ ಉಪಜಿಲ್ಲೆಯ ಸ್ಕ್ವೇರ್ ಮಾಸ್ಟರ್ ಬಾರಿ ದುಬಾಲಿಯಾ ಪಾರಾ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಆತನನ್ನು ಹೊಡೆದ ನಂತರ, ದಾಳಿಕೋರರು ಯುವಕನ ದೇಹವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದರು ಎಂದು ಭಾಲುಕಾ ಪೊಲೀಸ್ ಠಾಣೆಯ ಕರ್ತವ್ಯ ಅಧಿಕಾರಿ ರಿಪ್ಪನ್ ಮಿಯಾ ಬಿಬಿಸಿ ಬಾಂಗ್ಲಾಗೆ ತಿಳಿಸಿದ್ದಾರೆ. ಮೃತರನ್ನು ದೀಪು … Read more

ಅಕ್ರಮ‌ ಸಂಬಂಧ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಯತ್ನ!

ಅಕ್ರಮ‌ ಸಂಬಂಧ ಹಿನ್ನೆಲೆ‌ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಯುವಕನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ (26) ಹಲ್ಲೆಗೊಳಗಾದ ಯುವಕ. ಹಲ್ಲೆ ವೇಳೆ ಬಿಡಿಸಲು ಹೋದ ಯುವಕನ ತಂದೆ ಮಧುಸೂದನ್ ಅವರ ಮೇಲೂ ದಾಳಿ ನಡೆದಿದ್ದು, ಅದೃಷ್ಟವಶಾತ್ ಕಾರ್ತಿಕ್ (26) ಹಲ್ಲೆಗೊಳಗಾದ ಯುವಕ. ಹಲ್ಲೆ ವೇಳೆ ಬಿಡಿಸಲು ಹೋದ ಯುವಕನ ತಂದೆ ಮಧುಸೂದನ್ ಅವರ ಮೇಲೂ ದಾಳಿ ನಡೆದಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ದೀಪಾ ಎಂಬ ಮಹಿಳೆ … Read more

ನಕ್ಷೆಯಲ್ಲಿ ಕೆರೆ, ಸ್ಮಶಾನ ಇರುವ ಭೂಮಿ ಪಿತ್ರಾರ್ಜಿತ ಆಸ್ತಿ ಹೇಗೆ ಆಗುತ್ತದೆ ಸಚಿವರೇ? : ಕೃಷ್ಣ ಬೈರೇಗೌಡರಿಗೆ ಯತ್ನಾಳ್ ಪ್ರಶ್ನೆ

ಸಚಿವ ಕೃಷ್ಣಭೈರೇಗೌಡ ಅವರ ಮೇಲೆ ಭೂ ಕಬಳಿಕೆ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಮಾತನಾಡಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ನಕ್ಷೆಯಲ್ಲಿ ಕೆರೆ ಹಾಗೂ ಸ್ಮಶಾನ ಇರುವ ಭೂಮಿ ಪಿತ್ರಾರ್ಜಿತ ಆಸ್ತಿ ಹೇಗೆ ಆಗುತ್ತದೆ ಮಾನ್ಯ ಸಚಿವರೇ ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಬೇಲಿಯೇ ಎದ್ದು ಹೊಲ ಮೇಯಿತೇ ? ಕೋಲಾರ ಜಿಲ್ಲೆಯ ನರಸಾಪುರ ಹೋಬಳಿ ಗರುಡನ ಪಾಳ್ಯ ಗ್ರಾಮದ ಸರ್ವೇ ಸಂ: 46 ಮತ್ತು ಸಂ: … Read more

ಕಾಲೇಜ್‌ ವಿದ್ಯಾರ್ಥಿನಿ ಮೇಲೆ ಮೂವರಿಂದ ಅತ್ಯಾ*ರ; ವಿಡಿಯೋ ಇಟ್ಟುಕೊಂಡು ನಡೆಸಿದ್ರಾ ಮಾನಗೇಡಿ ಕೃತ್ಯ?

ರಾಜ್ಯದಲ್ಲಿ ಒಂದರ ಹಿಂದೊಂದರಂತೆ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲರನ್ನ ಬೆಚ್ಚಿಬೀಳಿಸಿದೆ. ಪ್ರೀತಿಯ ನೆಪದಲ್ಲಿ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ನೀಚ ಕೃತ್ಯ ಎಸಗಿದ್ದಾನೆ. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ  ಈ ಘಟನೆ ನಡೆದಿದ್ದು, ಮಾಗಡಿ ಠಾಣೆ ಪೊಲೀಸರು ಆರೋಪಿಗಳಾದ ವಿಕಾಸ್, ಪ್ರಶಾಂತ್, ಚೇತನ್ ಬಂಧಿಸಿ ಜೈಲಿಗಟ್ಟಿದ್ದಾರೆ. ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಬೆಂಗಳೂರಿನ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನ ಆರೋಪಿ ವಿಕಾಸ್,  … Read more

ಟೋಲ್ ಪ್ಲಾಜಾಗಳಲ್ಲಿ ಇನ್ಮುಂದೆ ಬ್ರೇಕ್ ಇರೋದಿಲ್ಲ ; ದೇಶಾದ್ಯಂತ ‘AI ಟೋಲ್’ ವ್ಯವಸ್ಥೆ ಜಾರಿ!

ನೀವು ಕಾರಿನಲ್ಲಿ ದೀರ್ಘ ಪ್ರಯಾಣ ಕೈಗೊಂಡರೆ, ಹೆದ್ದಾರಿಯಲ್ಲಿ ಟೋಲ್ ಪ್ಲಾಜಾ ಎದುರಾಗುವ ಸಾಧ್ಯತೆ ಹೆಚ್ಚು. ಈ ಟೋಲ್ ಗೇಟ್ ದಾಟಲು, ನೀವು ಟೋಲ್ ತೆರಿಗೆಯನ್ನ ಪಾವತಿಸಬೇಕಾಗುತ್ತದೆ. ಹಿಂದೆ, ಟೋಲ್ ಪ್ಲಾಜಾಗಳಲ್ಲಿ ವಾಹನಗಳನ್ನ ನಿಲ್ಲಿಸಲಾಗುತ್ತಿತ್ತು ಮತ್ತು ಟೋಲ್ ತೆರಿಗೆಯನ್ನು ನಗದು ಅಥವಾ ಕಾರ್ಡ್ ಮೂಲಕ ಸಂಗ್ರಹಿಸಲಾಗುತ್ತಿತ್ತು. ನಂತರ, ಫಾಸ್ಟ್‌ಟ್ಯಾಗ್ ವಿಷಯಗಳನ್ನ ಸರಳಗೊಳಿಸಿತು. ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಪ್ರತಿ ಟೋಲ್ ಪ್ಲಾಜಾದಲ್ಲಿ ನಿಲ್ಲಿಸುವ ತೊಂದರೆಯನ್ನು ನಿವಾರಿಸಿತು. ಈಗ , ಮುಂದಿನ ಹೆಜ್ಜೆ ಹೈಟೆಕ್ ತಡೆ – ಮುಕ್ತ ಟೋಲ್‌’ಗಳ ಕಡೆಗೆ. … Read more